ಭಾರತದ ರೂಪಾಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೯ ನೇ ಸಾಲು:
*೧೩ನೇ ಶತಮಾನದ ಆರಂಭದಲ್ಲಿ ಧಾಳಿಮಾಡಿದ ಮಹಮದ್ ಘೋರಿಯ ಸೇನಾಧಿಪತಿ ಕುತ್ಬುದ್ದೀನ್ ಮತ್ತು ಅವನ ನಂತರದವರೂ ತಮ್ಮದೇ ನಾಣ್ಯಗಳನ್ನು ಜಾರಿಗೆ ತಂದಿದ್ದರು. ಬಲ್ಬನ್‍ನ ಕಾಲದ ನಾಣ್ಯಗಳೂ ಸಿಕ್ಕಿವೆ.
*ನಂತರ 16ನೇ ಶತಮಾನದಲ್ಲಿ (ಕ್ರಿ.ಶ 1526) ಮೊಘಲ್‌‍ರು ಸಾಮ್ರಾಜ್ಯ ಅಧಿಪತ್ಯ ಸ್ಥಾಪಿಸುವುದರೊಂದಿಗೆ ಭಾರತದ ಹಣಕಾಸು ವ್ಯವಸ್ಥೆ ಮತ್ತೊಂದು ಮಜಲಿಗೆ ತೆರೆದುಕೊಂಡಿತು. ತಮ್ಮ ಸಾಮ್ರಾಜ್ಯದ ವ್ಯಾಪ್ತಿಯಲ್ಲಿ ಏಕರೂಪದ ಮತ್ತು ಸಂಘಟಿತ ಹಣಕಾಸು ವ್ಯವಸ್ಥೆಯನ್ನು ಮೊಘಲರು ಜಾರಿಗೆ ತಂದರು. ನಂತರ ಬಂದಿದ್ದೇ ರೂಪಾಯಿ.
*1540ರ ನಂತರದಲ್ಲಿ ನಾಣ್ಯಗಳನ್ನು ರೂಪಾಯಿ ಮಾನದಂಡದಲ್ಲಿ ಅಳೆಯುವ ಪದ್ಧತಿ ಜಾರಿಗೆ ಬಂತು. ಇದಕ್ಕೆ ಕಾರಣೀಭೂತನಾದವನು ಉತ್ತರ ಭಾರತದಲ್ಲಿ ಸುರ್‌ ಸಾಮ್ರಾಜ್ಯವನ್ನು ಸ್ಥಾಪಿಸಿದ ಶೇರ್‌ ಷಾ ಸೂರಿ ಎಂಬ ಆಫ್ಘಾನಿಸ್ತಾನ ಮೂಲದ ಪಠಾಣ್‌ ಸಮುದಾಯದ ರಾಜ. ಈ ಶೇರ್ ಖಾನ್ ಮೊದಲು "ರೂಪಿಯಾ" ಎಂಬ ಹೆಸರಿನ 178 ಧಾನ್ಯಗಳ ತೂಕದ ಬೆಳ್ಳಿ ನಾಣ್ಯವು 1540 ಮತ್ತು 1545. ನಡುವೆ ಚಕ್ರವರ್ತಿ ಶೇರ್ ಷಾ ಸೂರಿಯ ಸಂಕ್ಷಿಪ್ತ ಆಳ್ವಿಕೆಯಲ್ಲಿ ಉತ್ತರ ಭಾರತದಲ್ಲಿ ಮುದ್ರಿಸಲ್ಪಟ್ಟಿತು. ಸೂರಿಯು “ದಾಮ” ಎಂಬ ತಾಮ್ರದ ನಾಣ್ಯಗಳನ್ನು ಮತ್ತು 169 ಧಾನ್ಯಗಳ ತೂಗುವ “ಮೊಹರು” ಎಂಬ ಚಿನ್ನದ ನಾಣ್ಯಗಳನ್ನೂ ಸಹ ಜಾರಿಗೆ ತಂದನು. <sup>[೧]</sup>
 
== ಇದನ್ನೂ ನೋಡಿ ==
"https://kn.wikipedia.org/wiki/ಭಾರತದ_ರೂಪಾಯಿ" ಇಂದ ಪಡೆಯಲ್ಪಟ್ಟಿದೆ