ಬರಗೂರು ರಾಮಚಂದ್ರಪ್ಪ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೫ ನೇ ಸಾಲು:
==ಜನನ==
'''ಬರಗೂರು ರಾಮಚಂದ್ರಪ್ಪನವರು''', [[೧೯೪೬]] [[ಅಕ್ಟೋಬರ್|ಅಕ್ಟೋಬರ]] ೧೮ರಂದು [[ತುಮಕೂರು]] ಜಿಲ್ಲೆಯ '''ಬರಗೂರು''' ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಕೆಂಚಮ್ಮ ; ತಂದೆ ರಂಗದಾಸಪ್ಪ.
===ಬರಗೂರು ಅವರ ಸ್ವಂತ ಜೀವನದ ನೆನಪುಗಳು===
*5 Dec, 2016
*೮೨ನೇ ರಾಯಚೂರು ಸಾಹಿತ್ಯ ಸಮ್ಮೇಳನ ಕೊನೆಯ ದಿನವಾದ ಭಾನುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಬರಗೂರು ಮಾತುದಳು:
*'''ಬಾಲ್ಯದ ನೆನಪು''': ‘ಬಾಲ್ಯದಲ್ಲಿ ನನಗೆ ಡ್ರೈವರ್ ಆಗಬೇಕು ಎಂಬ ಕನಸು ಇತ್ತು. ಇದಕ್ಕೆ ಕಾರಣ ಮನೆಯಲ್ಲಿ ನನ್ನ ತಂದೆ ಅಣ್ಣನನ್ನು ಕಂಡಕ್ಟರ್ ಮಾಡಬೇಕು ಎಂದುಕೊಂಡಿದ್ದರು. ಅಣ್ಣನಿಗಿಂತ ನಾನು ಒಂದು ಹೆಜ್ಜೆ ಮುಂದಕ್ಕೆ ದೊಡ್ಡವನಾಗಬೇಕು ಎಂಬ ಬಯಕೆ ನನ್ನದು. ಹೀಗಾಗಿ ಕೆಂಪು ಬಸ್ಸಿನ ಚಾಲಕನಾಗಬೇಕು ಎಂದು ಕೊಂಡಿದ್ದೆ. ಆದರೆ, ಮನಸ್ಸಿನ ಆಳದಲ್ಲಿ ಅಸ್ಮಿತೆಯ ಭಾವನೆ ಪುಟಿದೆದ್ದಿತ್ತು. ಇದರಿಂದ ಶಾಲೆಯಲ್ಲಿ ಚೆನ್ನಾಗಿ ಓದಲು ಆರಂಭಿಸಿದ್ದು ಮಾತ್ರವಲ್ಲ. ತರಗತಿಯಲ್ಲಿ ಪ್ರತಿ ವರ್ಷವೂ ಮೊದಲಿಗನಾಗಿರುತ್ತಿದ್ದೆ’ ಎಂದು ನೆನಪಿಸಿಕೊಂಡರು.
 
*'''ಆರೋಗ್ಯದ ಗುಟ್ಟು''': ‘ನನ್ನ ಆರೋಗ್ಯ ಚೆನ್ನಾಗಿರಲು ಮುಖ್ಯ ಕಾರಣ ಇನ್ನೊಬ್ಬರ ಕಾಲೆಳೆಯುವ ಗುಣ ನನ್ನಲ್ಲಿ ಇಲ್ಲ. ಹೊಟ್ಟೆಕಿಚ್ಚು ಪಡುವುದಿಲ್ಲ. ಇನ್ನೊಬ್ಬರ ಏಳಿಗೆ ಕಂಡು ಸಂತಸ ಪಡುತ್ತೇನೆ. ಬೆಂಗಳೂರಿನಲ್ಲಿ ಸರಿಯಾದ ಸಮಯದಲ್ಲಿ ಮನೆಗೆ ತಲುಪುವ ಬೆರಳೆಣಿಕೆ ಸಾಹಿತಿಗಳ ಪೈಕಿ ನಾನೂ ಒಬ್ಬ. ಬೇರೆ ಹವ್ಯಾಸಗಳಂತೂ ಇಲ್ಲ. ಕುಟುಂಬದ ಸದಸ್ಯರಿಗೆ ಸಮಯ ಕೊಡುತ್ತೇನೆ.
 
*ರಾತ್ರಿ 9 ಗಂಟೆಯ ಬಳಿಕ ಅಥವಾ ಬೆಳಿಗ್ಗೆ ಮುಂಚೆ ಎದ್ದು ಓದುವ ಅಭ್ಯಾಸವನ್ನು ಇಟ್ಟುಕೊಂಡಿದ್ದೇನೆ. ಸಮಯವನ್ನು ಹೇಗೆ ಬೇಕೊ ಹಾಗೆ ನಿರ್ವಹಿಸುತ್ತೇನೆ. ಇವೆಲ್ಲದರ ಜೊತೆಗೆ ಸಾಹಿತಿಯೂ ಹೌದು, ಚಳವಳಿಗಾರನೂ ಹೌದು ಮತ್ತು ಸಿನಿಮಾಗಳನ್ನೂ ಮಾಡಿದ್ದೇನೆ. ಒಳ್ಳೆ ಸಾಹಿತಿ ಹೌದೊ ಅಲ್ಲವೋ ಎಂಬುದನ್ನು ವಿಮರ್ಶಕರು ನಿರ್ಧರಿಸುತ್ತಾರೆ. ಆದರೆ, ಒಳ್ಳೆಯ ಮನುಷ್ಯ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ' ಎಂದು ಹೇಳಿದರು.
*'''ಕನಸು ಕಾಣುವುದನ್ನು ಬಿಡಬೇಡಿ''': ‘ಏಕಲವ್ಯನಂತೆ ಬೆಳೆದು ಬಂದ ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗುವ ಕನಸು ಎಂದೂ ಕಂಡಿರಲಿಲ್ಲ. ಬೆವರಿನ ಸಂಸ್ಕೃತಿಯ ಹಿನ್ನೆಲೆಯಿಂದ ನಾವೂ ಕೂಡ ಇಂತಹ ಸ್ಥಾನ ಏರಬಹುದು ಎಂಬುದಕ್ಕೆ ನಾನೇ ಉದಾಹರಣೆ. ಹೀಗಾಗಿ ಕನಸು ಕಾಣುವುದನ್ನು ಯಾರೂ ಬಿಡಬಾರದು. ಮೂರನೇ ತರಗತಿಯಷ್ಟೇ ಓದಿದ್ದ ಡಾ. ರಾಜ್‌ಕುಮಾರ್‌ ಅವರಿಗೆ ಜಾತಿ ಹಿನ್ನೆಲೆ ಇರಲಿಲ್ಲ, ಹಣವೂ ಇರಲಿಲ್ಲ. ಆದರೆ, ಅವರ ಶ್ರಮ, ಶ್ರದ್ಧೆ ಮತ್ತು ಸವಾಲುಗಳನ್ನು ಎದುರಿಸಿದ ರೀತಿಯೇ ಅವರು ಅತ್ಯಂತ ಉನ್ನತ ಸ್ಥಾನಕ್ಕೇರಲು ಸಾಧ್ಯವಾಯಿತು' ಎಂದು ಬರಗೂರು ರಾಮಚಂದ್ರಪ್ಪ ಅವರು ಹೇಳಿದರು.<ref>[http://www.prajavani.net/news/article/2016/12/05/456738.html ಬಂಡಾಯ ಸಾಹಿತ್ಯದ ನಾಯಕತ್ವ ವಹಿಸಲು ಸಿದ್ಧ:ಬರಗೂರು;ಎಸ್‌. ರವಿಪ್ರಕಾಶ್‌;5 Dec, 2016]</ref>
 
== ಕೃತಿಗಳು ==