ಗಸ್ಟಾವ್ ರಾಬರ್ಟ್ ಕಿರ್ಖಫ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೩ ನೇ ಸಾಲು:
'''ಗಸ್ಟಾವ್ ರಾಬರ್ಟ್ ಕಿರ್ಖಫ್''' (12 ಮಾರ್ಚ್ 1824 – 17 ಒಕ್ಟೋಬರ್ 1887) [[ಜರ್ಮನಿ]]ಯ [[ಭೌತಶಾಸ್ತ್ರಜ್ಞ]].
==ಬಾಲ್ಯ ಮತ್ತು ಜೀವನ==
ಜನನ ಅಂದಿನ ಜರ್ಮನಿಯ ಕೋನಿಗ್ಸ್‍ಬರ್ಗಿನಲ್ಲಿ (ಇಂದಿನ ರಷ್ಯದ ಕಾಲಿನಿನ್‍ಗ್ರಾಡ್) [[ಮಾರ್ಚ್]] 12, 1824ರಂದು, ವಿದ್ಯಾಭ್ಯಾಸ ಕೊನಿಗ್ಸ್‍ಬರ್ಗ್ ವಿಶ್ವವಿದ್ಯಾಲದಲ್ಲಿಯೇ ವಿದ್ಯಾಭ್ಯಾಸಾನಂತರ [[ಬರ್ಲಿನ್]] ವಿಶ್ವವಿದ್ಯಾಲಯದಲ್ಲಿ 1847ರಿಂದ 1850ರವರೆಗೆ ಯಾವ ಸಂಭಾವನೆಯೂ ಇಲ್ಲದೆ ಅಧ್ಯಾಪಕ ವೃತ್ತಿ ನಡೆಸಿ ಅನಂತರ ನಾಲ್ಕು ವರ್ಷಗಳು ಬ್ರೆಸ್‍ಲೊ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಕೆಲಸ ಮಾಡಿದ.
 
==ವೃತ್ತಿ ಜೀವನ==
ಈ ಸಂದರ್ಭದಲ್ಲೇ ಈತನಿಗೆ ಜರ್ಮನಿಯ ವಿಖ್ಯಾತ ರಸಾಯನಶಾಸ್ತ್ರಜ್ಞ [[ರಾಬರ್ಟ್ ಬುನ್‍ಸೆನ್‍]]ನೊಡನೆ (1811-1899) ಸಂಪರ್ಕ ಒದಗಿದ್ದು. ಆತನೊಡನೆ ಕಿರ್ಖಫ್ ಹೈಡಲ್‍ಬರ್ಗ್ ವಿಶ್ವವಿದ್ಯಾಲಯಕ್ಕೆ [[ಭೌತಶಾಸ್ತ್ರ]] ಪ್ರಾಧ್ಯಾಪಕನಾಗಿ ತೆರಳಿದ. 1874ರಿಂದ 1887ರ ವರೆಗೆ [[ಬರ್ಲಿನ್ ವಿಶ್ವವಿದ್ಯಾಲಯ]]ದಲ್ಲಿ ಸೇವೆ ಸಲ್ಲಿಸಿದ. ಈ ಕಾಲಾವಧಿಯಲ್ಲಿ ಜರ್ಮನಿಯ ಭೌತ ಹಾಗೂ ದೇಹಶಾಸ್ತ್ರಜ್ಞ ಹರ್‍ಮಾನ್ ವಾನ್ ಹೆಲ್‍ಮ್ಹೋಲ್ಟ್ಸ್‍ನೊಡನೆ (1821-1894) ಸಂಪರ್ಕ ಬೆಳೆಸಿಕೊಂಡ. ಬುನ್‍ಸೆನ್‍ನೊಡನೆ ಕೆಲಸಮಾಡಿ ರೋಹಿತ ಗ್ರಾಹಿಯನ್ನು (ಸ್ಪೆಕ್ಟ್ರೊಸ್ಕೋಪ್) ರಚಿಸಿದ ಇದರಿಂದ [[ಸೀಸಿಯಮ್| ಸೀಸಿಯಂ]] (1860) ಮತ್ತು [[ರುಬಿಡಿಯಮ್| ರುಬಿಡಿಯಂ]] (1861) ಎಂಬ ಧಾತುಗಳ ಇರುವಿಕೆಯನ್ನು ಕಂಡು ಹಿಡಿಯಲು ಸಾಧ್ಯವಾಯಿತು.