ಆಯುರ್ವೇದ ಚಿಕಿತ್ಸಾ ತತ್ತ್ವಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೧ ನೇ ಸಾಲು:
 
==ಶಸ್ತ್ರಕರ್ಮಾಭ್ಯಾಸ==
ಪೂರ್ವಕಾಲದಲ್ಲಿ ಶಸ್ತ್ರಕರ್ಮಾಭ್ಯಾಸವನ್ನು ಈಗಿನ ಹಾಗೆ ಮೃತದೇಹದ ಮೇಲೆ ಮಾಡುತ್ತಿರಲಿಲ್ಲ. ಫಲಗಳು, ಬಳ್ಳಿಗಳು, ಚರ್ಮಗಳ ಮೇಲೆ ಕತ್ತರಿಸುವುದು, ಸೀಳುವುದು, ಹೊಲೆಯುವುದು ಮುಂತಾದ ಕರ್ಮಗಳನ್ನು ಮಾಡಿಸಿ, ಶಿಷ್ಯನನ್ನು ಯೋಗ್ಯನನ್ನಾಗಿ ಮಾಡುತ್ತಿದ್ದರು. ಹೀಗೆ ಯೋಗ್ಯನನ್ನಾಗಿ ಮಾಡದಿರುವವನಿಗೆ ವೈದ್ಯವೃತ್ತಿಮಾಡಲು ರಾಜನ ಅಪ್ಪಣೆ ಸಿಕ್ಕುತ್ತಿರಲಿಲ್ಲ. ಸೋರೆಕಾಯಿ, ಕುಂಬಳಕಾಯಿ ಮುಂತಾದುವುಗಳಲ್ಲಿ ಕತ್ತರಿಸುವುದು, ಚರ್ಮದ ಚೀಲ, [[ಪ್ರಾಣಿ|ಪ್ರಾಣಿಗಳ]] ಮೂತ್ರಾಶಯಗಳಲ್ಲಿ ಸೀಳುವುದು, [[ರೋಮ|ರೋಮದಿಂದ]] ಕೂಡಿದ [[ಚರ್ಮ|ಚರ್ಮದಲ್ಲಿ]] ಲೇಖನ (ಕೆರೆಯುವುದು), ಸತ್ತ ಪಶುಗಳ ರಕ್ತನಾಳಗಳಲ್ಲಿ ಸಿರಾಪ್ಯಧೆ (ರಕ್ತನಾಳ ಕತ್ತರಿಸುವುದು), ಸೂಕ್ಷ್ಮ ಮತ್ತು ದಪ್ಪ ಬಟ್ಟೆ ಅಥವಾ ಚರ್ಮಗಳಲ್ಲಿ ಹೊಲಿಯುವುದು-ಇವನ್ನು ಅಭ್ಯಾಸ ಮಾಡಿಸಲಾಗುತ್ತಿತ್ತು. ದೊಡ್ಡ ಮನುಷ್ಯಾಕಾರದ ಬೊಂಬೆಗಳಲ್ಲಿ ಬಂಧನಗಳನ್ನು (ಬ್ಯಾಂಡೇಜಿಂಗ್) ಮೃದುವಾದ ಮಾಂಸಖಂಡಗಳಲ್ಲಿ ಅಗ್ನಿ ಕರ್ಮ ಮತ್ತು ಕ್ಷಾರಕರ್ಮಗಳನ್ನು ಹೇಳಿಕೊಟ್ಟು ಮಾಡಿಸಲಾಗುತ್ತಿತ್ತು. ಹೀಗೆ ಶಸ್ತ್ರವೈದ್ಯ ರೋಗಗಳಲ್ಲಿ ಮಾಡಬೇಕಾದ ಸಕಲಕೆಲಸಗಳನ್ನು ಇತರ ಪದಾರ್ಥಗಳ ಮೇಲೆ ಮಾಡಿಸಿ ಯೋಗ್ಯನನ್ನಾಗಿ ಮಾಡಿ, ಅನಂತರ [[ಮನುಷ್ಯ|ಮನುಷ್ಯರ]] ಮೇಲೆ ಮಾಡಲು ರಾಜಾಜ್ಞೆ ದೊರಕಿಸುವ ಕ್ರಮ ರೂಢಿಯಲ್ಲಿ ಇದ್ದಿತು. ಶಾಸ್ತ್ರಜ್ಞಾನ ಮತ್ತು ಕರ್ಮನಿಪುಣತೆಗಳನ್ನು ಪಡೆದವನಿಗೆ ವೈದ್ಯನಾಗುವ ಅಧಿಕಾರವಿದ್ದು, [[ರಾಜ|ರಾಜನಿಂದ]] ಅಂಥವನಿಗೆ ಮಾತ್ರ ಅಪ್ಪಣೆ ಸಿಕ್ಕುತ್ತಿದ್ದ ಆ ಕಾಲದಲ್ಲಿ ಶಸ್ತ್ರಕರ್ಮಾಭ್ಯಾಸ ಅತ್ಯುಚ್ಚಮಟ್ಟದಲ್ಲಿ ನಡೆಯುತ್ತಿತ್ತೆಂಬುದರಲ್ಲಿ ಸಂಶಯವಿಲ್ಲ.
 
==ಉಲ್ಲೇಖಗಳು==