ಆಯುರ್ವೇದ ಚಿಕಿತ್ಸಾ ತತ್ತ್ವಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೫ ನೇ ಸಾಲು:
 
==ಆರೋಗ್ಯವಂತನ ಲಕ್ಷಣಗಳು ಹೀಗಿವೆ==
ತ್ರಿದೋಷಗಳು ಒಂದೇ ರೀತಿಯಾಗಿ ಸ್ವಸ್ಥಾನದಲ್ಲಿದ್ದು, ಅವುಗಳ ಸರಿಯಾದ ಕೆಲಸಗಳನ್ನು ಮಾಡಿಕೊಂಡಿರಬೇಕು. ಮಂದ, ವಿಷಮ, ತೀಕ್ಷ್ಣ ಮತ್ತು ಸಮ ಜಠರಾಗ್ನಿಗಳಲ್ಲಿ ಶ್ರೇಷ್ಠವಾದ ಸಮಾಗ್ನಿ ಇರಬೇಕು. ರಸವೇ ಆದಿಯಾದ ಸಪ್ತಧಾತುಗಳ ಮತ್ತು ಮಲಮೂತ್ರ, [[ಬೆವರು]] ಇವುಗಳ ಕ್ರಿಯೆಗಳು ಸಮನಾಗಿರಬೇಕು. ಸೇವನೆಯಲ್ಲಿ ಹಿತ ಮಿತಗಳಿರಬೇಕು. [[ಮನಸ್ಸು]], ಇಂದ್ರಿಯಗಳು ನಿರ್ಮಲವಾಗಿ ಶುದ್ಧವಾಗಿರಬೇಕು. ಶರೀರ ದೃಢವಾಗಿರಬೇಕು. ಅಂಥವನನ್ನು ಸ್ವಸ್ಥ ಎನ್ನುತ್ತಾರೆ. ಮೇಲೆ ಹೇಳಿರುವುದರಲ್ಲಿ ಏನೇ ವ್ಯತ್ಯಾಸವಾದರೂ ರೋಗೋತ್ಪತ್ತಿಗೆ ಕಾರಣಗಳಾಗುತ್ತವೆ. ನಮ್ಮ ಪೂರ್ವಜನ್ಮದ ಕರ್ಮಫಲಕ್ಕೆ ಅನುಗುಣವಾಗಿಯೂ ಬರುವ ರೋಗಗಳು ಕೆಲವು ಇವೆ. ರೋಗಗಳ ಮೂಲಸ್ಥಾನ ಶರೀರ ಮತ್ತು ಮನಸ್ಸು. ಮನೋಧಿಷ್ಠಾನ ರೋಗಗಳು ಸ್ಥೂಲವಾಗಿ ರಜೋಗುಣ ಮತ್ತು ತಮೋಗುಣಗಳ ಅತಿರೇಕದಿಂದ ಉತ್ಪನ್ನವಾಗುವುವು. ಶರೀರಾಧಿಷ್ಠಾನ ವ್ಯಾಧಿಗಳು ನಿಜ, ಆಗಂತು ಎಂದು ಎರಡು ವಿಧಗಳಾಗಿವೆ. ಸ್ಥೂಲವಾಗಿ ಕಾಲ, ಅರ್ಥ ಕರ್ಮಗಳಲ್ಲಿ ಹೀನ ಯೋಗ, ಅತಿಯೋಗ ಮತ್ತು ಮಿಥ್ಯಾ ರೋಗಗಳು ಅವಕ್ಕೆ ಕಾರಣಗಳು. [[ವಿಷ]] ಕ್ರಿಮಿಗಳನ್ನು ಎದುರಿಸಬಲ್ಲ ಶಕ್ತಿ ಕಡಿಮೆಯಾದರೆ ರೋಗೋತ್ಪತ್ತಿಯಾಗುತ್ತದೆ. ಅನೇಕವಾದ ಶಾರೀರಿಕ ವ್ಯಾಧಿಗಳಿಗೆ ಮನಸ್ಸಿನ ಅಸ್ವಸ್ಥತೆಯೂ ಕಾರಣವಾಗಬಹುದು.
 
ವೈದ್ಯನಾದವ ಇಂದ್ರಿಯ ವಿಷಯಗಳ ಮೇಲೆ ಹೆಚ್ಚು ಆಸಕ್ತನಾಗದೆ, ಸ್ವಾರ್ಥನಾಗದೆ ಪರರಿಗೆ ಹಿತೈಷಿಯಾಗಿ ಪರೋಪಕಾರಿಯಾಗಿರಬೇಕು. ಸತ್ಯವನ್ನೇ ಆಡಬೇಕು. ಕ್ಷಮಾಶೀಲನಾಗಿರಬೇಕು. ಹಿಂಸೆ, ಸುಳ್ಳು ಹೇಳುವುದು, ವ್ಯರ್ಥ ಕಾಲಕಳೆಯುವುದು, ಪರಸ್ತ್ರೀಯರಲ್ಲಿ ಅಭಿಲಾಷೆ ಮುಂತಾದ ಪಾಪಕರ್ಮಗಳನ್ನು ಕಾಯೇನ ವಾಚಾ ಮನಸಾ ಬಿಟ್ಟಿರಬೇಕು.
೧೩ ನೇ ಸಾಲು:
ವಾತ, ಪಿತ್ತ, ಕಫ ಎಂಬ ತ್ರಿದೋಷಗಳು ಒಂದೊಂದೂ ಐದು ವಿಧ. ಇವುಗಳು ತಮ್ಮ ಸ್ವಸ್ಥಾನದಿಂದ ಬೇರೆ ಕಡೆಗೆ ಚಲಿಸಿದರೆ ಅಥವಾ ಇದ್ದಲ್ಲಿಯೇ ಚಯಪ್ರಕೋಪ ಪ್ರಶಮನ ಎಂಬ ಅವಸ್ಥೆಗಳನ್ನು ಹೊಂದಿದರೆ ವ್ಯಾಧಿ ಉತ್ಪತ್ತಿಯಾಗುತ್ತದೆ.
 
ವ್ಯಾಧಿಚಿಕಿತ್ಸೆಯಲ್ಲಿ ಸಂತರ್ಪಣ (ಬೃಂಹಣ) ಮತ್ತು ಅಪತರ್ಪಣ (ಲಂಘನ) ಚಿಕಿತ್ಸೆ ಎಂದು ಎರಡು ವಿಧ. ದೇಹವನ್ನು ಪುಷ್ಟಿ ಮಾಡುವ ವಿಧಾನಕ್ಕೆ ಬೃಂಹಣ ಎಂದೂ ಕೃಶ ಮಾಡುವ ರೀತಿಗೆ ಲಂಘನ ಚಿಕಿತ್ಸೆಯೆಂದೂ ಪರಿಗಣಿಸಲಾಗಿದೆ. ಚಿಕಿತ್ಸೆಯಲ್ಲಿ ಶೋಧನ, ಶಮನ ಎಂದು ಎರಡು ಪ್ರಕಾರಗಳಿವೆ. ಶೋಧನವೆಂದರೆ ಪ್ರಕುಪಿತ ದೋಷಗಳನ್ನು ಹೊರಗೆ ಹೋಗಲಾಡಿಸುವ ಚಿಕಿತ್ಸೆ. ಶೋಧನ ಚಿಕಿತ್ಸಾ ಕ್ರಮದಲ್ಲಿ ನಿರೂಹ, ವಮನ, ಕಾಯವಿರೇಚನ, ಶಿರೋವಿರೇಚನ, ರಕ್ತಮೋಕ್ಷಣಗಳೆಂದು 5 ವಿಧಕ್ರಮಗಳು. ಶಮನ ಚಿಕಿತ್ಸೆಯೆಂದರೆ ವಿಷಮವಾದ (ಹೆಚ್ಚು ಅಥವಾ ಕಡಿಮೆ ದೋಷಪ್ರಮಾಣಗಳಿದ್ದರೆ) ದೋಷಗಳಿದ್ದರೆ ಮಾತ್ರ ಅವುಗಳನ್ನು ಸಮಪ್ರಮಾಣಕ್ಕೆ ಮತ್ತು ಸಮಸ್ಥಿತಿಗೆ ತರುವುದು. ಇದರಲ್ಲೂ ಪಾಚನ, ದೀಪನ, [[ಹಸಿವು]] ಉಂಟು ಮಾಡುವುದು, ಬಾಯಾರಿಕೆ ನಿಗ್ರಹ ಮಾಡುವುದು, ವ್ಯಾಯಾಮ, ಬಿಸಿಲು ಕಾಯಿಸುವುದು. ಶುದ್ಧ ವಾಯುಸೇವನೆ--ಎಂದು ಏಳು ವಿಧ ಚಿಕಿತ್ಸಾ ಕ್ರಮಗಳಿವೆ.
 
==ಬೃಂಹಣ ಚಿಕಿತ್ಸೆಗೆ ಅರ್ಹರು==