ಔಷಧಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೩ ನೇ ಸಾಲು:
 
== ಕೈಗಾರಿಕೆಯಲ್ಲಿ ==
ರಾಸಾಯನಿಕಗಳ ತಯಾರಿಕೆ ಸಂಸ್ಥೆಗಳ ಸಂಶೋಧನಾಲಯಗಳಲ್ಲೂ [[ಔಷಧ|ಔಷಧಗಳ]] ಮುಖ್ಯವಾದ ಮೂಲಶೋಧನೆ ನಡೆವುದು. [[ಅಮೆರಿಕ]] ಸಂಯುಕ್ತ ಸಂಸ್ಥಾನಗಳಲ್ಲಂತೂ 40 ವರ್ಷಗಳಿಂದೀಚೆಗೆ ಔಷಧ [[ಕೈಗಾರಿಕೆಗಳು|ಕೈಗಾರಿಕೆಗಳಲ್ಲಿ]] [[ಸಂಶೋಧನೆ]] ಅಪಾರವಾಗಿ ನಡೆಯುತ್ತಿದೆ. ಕೈಗಾರಿಕೆಯ ಹಣಕಾಸು, [[ವಿಶ್ವವಿದ್ಯಾನಿಲಯ]]ಗಳು, [[ಆಸ್ಪತ್ರೆ|ಆಸ್ಪತ್ರೆಗಳು]], ಸಂಶೋಧನೆ ಸಂಘಗಳ ಒಗ್ಗಟ್ಟಿನಿಂದ ಹೆಚ್ಚಿನ ಮುನ್ನಡೆಯಾಗಿ ಎಷ್ಟೊ ತೊಡಕುಗಳು ಬಗೆಹರಿದಿವೆ. ಸ್ವಲ್ಪಮದ್ದುಗಳು, ಜೀವಿ ವಿರೋಧಕಗಳು, ಕಾರ್ಟಿಸೋನ್ ತೆರನವು, ನೆಮ್ಮದಿಕಾರಿಗಳು (ಟ್ರಾಂಕ್ವಿಲೈಸರ್ಸ್), ಮೂತ್ರಕಾರಿಗಳು. ಸಿಹಿಮೂತ್ರರೋಧಕಗಳು, [[ರಕ್ತ|ರಕ್ತದ]] ಬದಲಿಗಳು, ಏಡಿಗಂತಿರೋಧಕಗಳೇ ಮುಂತಾದವು ಉದಾಹರಣೆಗಳು. [[ಔಷಧವಿಜ್ಞಾನ|ಔಷಧವಿಜ್ಞಾನದ]] ಮೂಲ ತಿಳಿವಳಿಕೆಯೂ ಅಪಾರವಾಗಿ ಹೆಚ್ಚಿದೆ.
 
[[ರೋಗಿ|ರೋಗಿಗಳ]] ಬಳಕೆಗೆ ಹೊಸ ಹೊಸ ಮದ್ದುಗಳನ್ನು ತಯಾರಿಸಿ [[ವೈದ್ಯ|ವೈದ್ಯನ]] ಕೈಗೆಕೊಡುವ ಮುನ್ನ ಅವು ವಿಷಕರವಲ್ಲವೆಂದು ಖಚಿತ ಮಾಡಿಕೊಳ್ಳಲು, [[ಪ್ರಾಣಿ|ಪ್ರಾಣಿಗಳ]] ಮುಖ್ಯವಾದ ಎಲ್ಲ ಅಂಗಗಳು, ಮಂಡಲಗಳ ಮೇಲೂ ಪ್ರಭಾವವನ್ನು ತಿಳಿಯಲು ಪರೀಕ್ಷೆಗಳನ್ನು ಸಾಂಗವಾಗಿ ಮಾಡಿ ಮುಗಿಸಿರಬೇಕು. ಯಾವ ಮದ್ದನ್ನೇ ಆಗಲಿ ಮೊಟ್ಟಮೊದಲು ಪ್ರಯೋಗದ ಪ್ರಾಣಿಗಳಿಗೆ ಕೊಟ್ಟು ನೋಡಿದ ಮೆಲೆ ಮಾತ್ರವೇ ರೋಗಿಗೆ ಕೊಡುವುದು. ಬಳಸುವ ಮದ್ದಗಳ ಗುಣಮಟ್ಟ ಒಂದೇ ಸಮನಾಗಿ ಇರುವಂತೆ ನೋಡಿಕೊಳ್ಳಲು ತಯಾರಾದವನ್ನು ಮೇಲಿಂದ ಮೇಲೆ ಪರೀಕ್ಷಿಸುತ್ತಿರಲೇಬೇಕು. ಮದ್ದುಗಳಾದ ಅಚ್ಚರಾಸಾಯನಿಕ ವಸ್ತುಗಳನ್ನೇನೋ ರಾಸಾಯನಿಕ ಪರೀಕ್ಷೆಗಳಿಂದ ಶಿಷ್ಟೀಕರಿಸಬಹುದು. ಆದರೆ ಇನ್ಸುಲಿನ್, ಪ್ರಾಣಿಗಳು ಇಲ್ಲವೇ ಗಿಡಮರಗಳಿಂದ ಪಡೆದ ಕಚ್ಚ ಉತ್ಪನ್ನಗಳಾದ ಡಿಜಟ್ಯಾಲಿಸಿನಂಥವನ್ನು ಇಷ್ಟು ಸರಳವಾಗಿ ಪರೀಕ್ಷಿಸುವಂತಿಲ್ಲ. ಖಚಿತವಾಗಿ ಅಧಿಕೃತವಾಗಿ ಗೊತ್ತು ಪಡಿಸಿಟ್ಟುಕೊಂಡಿರುವ ಗುಣಮಟ್ಟವೊಂದಿಗೆ ಹೋಲಿಸಿನೋಡಿ ಒರೆಹಚ್ಚಿ ನಿರ್ಧರಿಸಬೇಕು. ಈ ಪರೀಕ್ಷೆಗಳನ್ನು ಯಾವುದಾದರೂ ಬದುಕಿರುವ ಪ್ರಾಣಿಯಲ್ಲಿ ಮಾಡಬೇಕು. ಇನ್ಸುಲಿನ್ನನ್ನು ಮೊಲದ ರಕ್ತದ ಸಕ್ಕರೆಮಟ್ಟ ಇಳಿಸುವುದರಿಂದಲೂ ಡಿಜಿಟ್ಯಾಲಿಸನ್ನು [[ಬೆಕ್ಕು|ಬೆಕ್ಕಿನ]] ಗುಂಡಿಗೆಯನ್ನು ನಿಲ್ಲಿಸುವುದರಿಂದಲೂ ನಿರ್ಧರಿಸುವುದು ವಾಡಿಕೆಯಲ್ಲಿವೆ. ಹೀಗೆ ಜೀವಿಗಳಲ್ಲಿ ಒರೆಹಚ್ಚಿ ನೋಡುವುದಕ್ಕೆ ಜೀವದೊರೆ (ಬಂiೆÆಆಸ್ಸೆ) ಎಂದಿದೆ. ಬಹುಪಾಲು ಜೀವಾತುಗಳಿಗೂ ಜೀವದೊರೆ ಹಚ್ಚಬೇಕಾಗುತ್ತದೆ.
ಜನಾರೋಗ್ಯ: ಕೈಗಾರಿಕೆಗಳಲ್ಲಿ ಹೊಸ ಹೊಸ ಉತ್ಪನ್ನಗಳನ್ನು ವಿಧಾನಗಳನ್ನೂ ಹೊರತರುವಾಗ ಅಲ್ಲಿನ ಕೆಲಸಗಾರರ ಆರೋಗ್ಯಕ್ಕೆ ಕೆಲವೇಳೆ ಕೆಡುಕಾಗುವುದುಂಟು. ಅವರಿಗಾಗುವ ಅಪಾಯಗಳನ್ನು ತಿಳಿಯಲೋಸುಗ ಔಷಧವಿಜ್ಞಾನದ ಪ್ರಯೋಗ ವಿಧಾನಗಳನ್ನೇ ಹೆಚ್ಚಿನ ರೀತಿಯಲ್ಲಿ ಅನುಸರಿಸಬೇಕಾಗುತ್ತದೆ. ಗಿಡಮರಗಳ, ಪ್ರಾಣಿಗಳ ಆರೋಗ್ಯಕ್ಕಾಗಿ ಕೀಟನಾಶಕಗಳನ್ನು ಬೇಸಾಯದಲ್ಲಿ ಬಳಸುವಾಗ ಅನ್ವಯವಾಗುವುದೂ ಔಷಧವಿಜ್ಞಾನದ ವಿಭಾಗವಾದ ವಿಷವಿಜ್ಞಾನಕ್ಕೆ ಸಂಬಂಧಿಸಿದ್ದೇ. ನಾಶಕ ಮದ್ದುಗಳು ಕೀಟಗಳನ್ನು ಹೀಗೆ ಸಾಯಿಸುವುವೆಂದು ಔಷಧವಿಜ್ಞಾನದ ಪ್ರಯೋಗಗಳನ್ನು ಮಾಡಿನೋಡುವರು. [[ಇಲಿ]] ವಿಷಗಳಲ್ಲಿ ಕೆಲವು, ಇಲಿಗಳನ್ನು ರಕ್ತ ಸುರಿಸಿ ಸಾಯಿಸುತ್ತವೆ. ಡಿಡಿಟಿ ತೆರನ ಮದ್ದುಗಳು ತಾಕುವುದರಿಂದಲೇ ಸೊಳ್ಳೆಚಿಗಟಗಳು ಸಾಯುತ್ತವೆ. ಮದ್ದು ಕೆಲಸಮಾಡುವ ರೀತಿ ಸರಿಯಾಗಿ ಗೊತ್ತಾದರೆ ಇನ್ನೂ ಪ್ರಭಾವೀ ರಾಸಾಯನಿಕಗಳನ್ನು ತಯಾರಿಸಲು ಅನುಕೂಲ. ಇವುಗಳ ತಯಾರಿಕೆಯ ಕೆಲಸಗಾರರು, ಸಾಗಿಸುವವರು, ಮುಟ್ಟಿಕೊಳ್ಳುವವರು, ದೂಳಿಗೆ ಸಿಕ್ಕುವವರಿಗೆ ಯಾವ ಅಪಾಯಗಳಾಗಬಹುದೆಂದೂ ಅಕಸ್ಮಾತ್ ವಿಷವೇರಿದರೆ ತಕ್ಕ ಚಿಕಿತ್ಸೆ ಮತ್ತು ಕಟ್ಟುಮದ್ದುಗಳನ್ನೂ (ಅಂಟಿಡೋಟ್ಸ್‌) ಕಂಡುಕೊಳ್ಳಬಹುದು (ನೋಡಿ-ಅಪಾಯಕರ-ವೃತ್ತಿಗಳು; ಔಷಧಗಾರಿಕೆ; ಔಷಧಮಂಜರಿ). <ref>http://uccindia.org/%E0%B2%B5%E0%B3%88%E0%B2%A6%E0%B3%8D%E0%B2%AF%E0%B2%95%E0%B3%80%E0%B2%AF-%E0%B2%A8%E0%B3%8A%E0%B2%AC%E0%B3%86%E0%B2%B2%E0%B3%8D-%E0%B2%AA%E0%B3%8D%E0%B2%B0%E0%B2%B6%E0%B2%B8%E0%B3%8D%E0%B2%A4%E0%B2%BF/</ref>
 
==ಉಲ್ಲೇಖಗಳು==
"https://kn.wikipedia.org/wiki/ಔಷಧಶಾಸ್ತ್ರ" ಇಂದ ಪಡೆಯಲ್ಪಟ್ಟಿದೆ