ವಿಕಿಪೀಡಿಯ:ತಟಸ್ಥ ದೃಷ್ಟಿಕೋನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ವಿಸ್ತರಣೆ
೬೬ ನೇ ಸಾಲು:
 
ಪಕ್ಷಪಾತವಾಗಿ ಇರುವ ಮಾಹಿತಿಮೂಲಗಳ ಬಗೆಗಿನ ವಿವಾದದಲ್ಲಿ ಆ ಮಾಹಿತಿಮೂಲವು ಪಕ್ಷಪಾತವಾಗಿರುವ ಕಾರಣ ಬೇರೆ ಮೂಲಗಳಿಗೆ ಪ್ರಾಮುಖ್ಯತೆ ಕೊಡಬೇಕು ಎನ್ನುವ ವಾದ ಸಾಮಾನ್ಯ. ಆದರೆ ಪಕ್ಷಪಾತವಾಗಿದೆ ಎಂಬ ಒಂದೆ ಕಾರಣದಿಂದ ಆ ಮೂಲವನ್ನು ನಿರಾಕರಿಸಲು/ತೆಗೆದುಹಾಕಲು ಬರುವುದಿಲ್ಲ. ಅದರಲ್ಲಿ ಸಂಬಂಧಪಟ್ಟ ವಿಷಯದ ಬಗೆಗಿನ ಅಭಿಪ್ರಾಯಕ್ಕೆ ಎಷ್ಟು ಒತ್ತು ಇದೆ ಮತ್ತು ಒಟ್ಟಾರೆ ಆ ಮೂಲ ಏನು ಹೇಳುತ್ತಿದೆ ಎಂಬುದನ್ನು ನೋಡಿ ಇತರ ಅಭಿಪ್ರಾಯಗಳನ್ನು ಹೊಂದಿರುವ ಮಾಹಿತಿಮೂಲಗಳನ್ನೂ ಸೇರಿಸುವುದರ ಮೂಲಕ ತಟಸ್ಥತೆಯನ್ನು ಸಾಧಿಸಬೇಕಾಗುತ್ತದೆ. ಇದರ ಅರ್ಥ, ಪಕ್ಷಪಾತವಾಗಿ ಇರುವ ಮಾಹಿತಿಮೂಲಗಳನ್ನು ಬಳಸಬಹುದು ಎಂದಲ್ಲ, ಬದಲಾಗಿ ಆ ಲೇಖನದ ಪ್ರಸ್ತುತಿಗೆ ಇದರಿಂದ ಹೆಚ್ಚಿನ ಸಹಾಯವಾಗುವಂತಿದ್ದರೆ ಬಳಸಿಕೊಳ್ಳಬಹುದು.
 
==ವಿವಾದಾತ್ಮಕ ವಿಷಯಗಳು==
ಹೊರಜಗತ್ತಿನಲ್ಲಿ ಮತ್ತು ವಿಕಿಪೀಡಿಯ ಸಂಪಾದಕರ ನಡುವೆ ಆಗಾಗ ಅನೇಕ ವಿಷಯಗಳಲ್ಲಿ ತೀವ್ರ ಚರ್ಚೆಗಳುಂಟಾಗುವ ಸನ್ನಿವೇಶಗಳು ವಿಕಿಪೀಡಿಯದಲ್ಲಿ ನಡೆಯುತ್ತಿರುತ್ತವೆ. ವಿಕಿಪೀಡಿಯದ ಎಲ್ಲಾ ಕ್ಷೇತ್ರಗಳಲ್ಲೂ ತಟಸ್ಥ ದೃಷ್ಟಿಕೋನದ ಸರಿಯಾದ ಅರ್ಥೈಸಿಕೊಳ್ಳುವಿಕೆ ಮತ್ತು ಅನುಸರಿಯುವಿಕೆಯು ಅಗತ್ಯ.
 
===ಅಮುಖ್ಯ ಸಿದ್ದಾಂತಗಳು ಮತ್ತು ಹುಸಿವಿಜ್ಞಾನ===
 
ಹುಸಿವಿಜ್ನಾನದ ಸಿದ್ಧಾಂತಗಳು ಅದರ ಪ್ರಚಾರಕರಿಂದ ವಿಜ್ಞಾನವೆಂಬಂತೆ ಪ್ರಸ್ತುತಪಡಿಸಲ್ಪಡುತ್ತವೆ. ಅವು ವೈಜ್ಞಾನಿಕ ಕ್ರಮಗಳಿಂದ ವಿಫಲವಾಗಿರುತ್ತವೆ. ಒಂದು ವಿಷಯದ ಬಗ್ಗೆ ವೈಜ್ಞಾನಿಕ ಒಮ್ಮತವೇ ವಿಜ್ಞಾನಿಗಳ ಬಹುಸಂಖ್ಯಾತ ದೃಷ್ಟಿಕೋನವಾಗಿರುತ್ತದೆ. ಹಾಗಾಗಿ ಹುಸಿವಿಜ್ಞಾನದ ಬಗ್ಗೆ ಮಾತಾಡುವಾಗ, ನಾವು ಈ ವಿರುದ್ಧ ಅಭಿಪ್ರಾಯಗಳಿಗೆ ಸಮಾನ ಮಾನ್ಯತೆ ಕೊಡುವಂತೆ ವಿವರಿಸಬಾರದು. ಕೆಲವೊಮ್ಮೆ ಹುಸಿವೈಜ್ಞಾನಿಕ ಅಭಿಪ್ರಾಯಗಳು ಲೇಖನದಲ್ಲಿ ಮುಖ್ಯವಾದರೂ ಕೂಡ ಅವು ಮುಖ್ಯವಾಹಿನಿಯ ವೈಜ್ಞಾನಿಕ ಸಮುದಾಯದ ಅಭಿಪ್ರಾಯ ವಿವರಣೆಗಳನ್ನು ಕೆಳಗೆ ತಳ್ಳುವಂತಿರಬಾರದು. ಹುಸಿವಿಜ್ಞಾನದ ಅಭಿಪ್ರಾಯಗಳಿಗೆ ಅನಗತ್ಯ ಒತ್ತುಕೊಡುವಿಕೆ ಇರಬಾರದು. ಇಂತಹ ಹುಸಿವಿಜ್ಞಾನದ ಅಭಿಪ್ರಾಯಗಳಿಗೆ ವಿಜ್ಞಾನಿಗಳು ಯಾವ ರೀತಿ ಉತ್ತರ ಕೊಟ್ಟಿದ್ದಾರೆ ಎಂಬುದನ್ನು ಮುಖ್ಯವಾಗಿ ಉಲ್ಲೇಖಿಸುವುದರ ಮೂಲ ವಿವಿಧ ದೃಶ್ಟಿಕೋನಗಳನ್ನು ಸರಿಯಾಗಿ ವಿವರಿಸಿದಂತೆ ಆಗುತ್ತದೆ. ಇದು ಇನ್ನಿತರ ವಿಷಯಗಳಿಗೂ ಅನ್ವಯಿಸುತ್ತದೆ. ಉದಾಹರಣೆಗೆ ಪುರಾವೆಗಳಿಲ್ಲದ, ನಂಬಲರ್ಹ ಮೂಲಗಳಿಲ್ಲದ ಐತಿಹಾಸಿಕ ಪಿತೂರಿಯ ಘಟನೆಗಳು. (ಪೋಪ್ ಜಾನ್ ಪಾಲ್ ೧ ಕೊಲೆ, ಚಂದ್ರನಲ್ಲಿ ಮಾನವ ಇಳಿದದ್ದು ಸುಳ್ಳು ಎನ್ನುವ ಅಭಿಪ್ರಾಯಗಳು ಇತ್ಯಾದಿ)
 
===ಧರ್ಮ===
 
{{under construction}}