ಡಿ. ಕೆ. ರಾಜೇಂದ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಜನಪದ ಸಾಹಿತ್ಯ, ವಿಮರ್ಶೆ, ಸಂಪಾದನೆ, ವಿಚಾರ ಸಾಹಿತ್ಯ – ಹೀಗೆ ನಾನಾ ಪ್ರಕಾರಗಳ...
 
No edit summary
೧ ನೇ ಸಾಲು:
ಜನಪದ ಸಾಹಿತ್ಯ, ವಿಮರ್ಶೆ, ಸಂಪಾದನೆ, ವಿಚಾರ ಸಾಹಿತ್ಯ – ಹೀಗೆ ನಾನಾ ಪ್ರಕಾರಗಳಲ್ಲಿ ತೊಡಗಿಸಿಕೊಂಡಿದ್ದು ಅತ್ಯಮೂಲ್ಯ ಕೃತಿಗಳನ್ನು ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ರಾಜೇಂದ್ರರವರು ಹುಟ್ಟಿದ್ದು ಕವಿ ಕಲಾವಿದರ, ಕಲೆಗಳ ಬೀಡಾದ ತುಮಕೂರು ಜಿಲ್ಲೆಯ [[ತುರುವೇಕೆರೆ]] ತಾಲ್ಲೂಕಿನ ದಂಡಿನ ಶಿವರದ ಪಟೇಲರ ಮನೆತನದಲ್ಲಿ ತಂದೆ ಕೆಂಪಲಿಂಗೇಗೌಡರು, ತಾಯಿ ಗೌರಮ್ಮ.
 
==ಆರಂಭಿಕ ಜೀವನ ಮತ್ತು ಶಿಕ್ಷಣ==
*ಪ್ರಾರಂಭಿಕ ಶಿಕ್ಷಣ ದಂಡಿನ ಶಿವರದಲ್ಲಿ. ಪ್ರೌಢಶಾಲಾ ಶಿಕ್ಷಣ ಅರಕಲಗೂಡು ಮತ್ತು [[ಶಿರಾ]] ಪ್ರೌಢಶಾಲೆಗಳಲ್ಲಿ. ಹಾಸನದ ಪ್ರಥಮ ದರ್ಜೆ ಕಾಲೇಜಿನಿಂದ ಪಡೆದ ಬಿ.ಎ. ಪದವಿ. ನಂತರದ ವಿದ್ಯಾಭ್ಯಾಸ ಮೈಸೂರು. ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಎಂ.ಎ. ಪದವಿ. ‘ದಕ್ಷಿಣ ಕರ್ನಾಟಕದ ಜನಪದ ರಂಗಭೂಮಿ’ ಎಂಬ ಪ್ರೌಢ ಪ್ರಬಂಧವನ್ನು ಪ್ರೊ. ದೇಜಗೌರವರ ಮಾರ್ಗದರ್ಶನದಲ್ಲಿ ಸಿದ್ಧಪಡಿಸಿ ಮೈಸೂರು ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ.
*ಗ್ರಾಮೀಣ ಪ್ರದೇಶದಿಂದ ಬಂದ ಇವರಿಗೆ ಸಹಜವಾಗಿಯೇ ಜಾನಪದ ಕ್ಷೇತ್ರದತ್ತ ಆಸಕ್ತಿ ಬೆಳೆದು ತಮ್ಮ ಊರಿನಲ್ಲಿ ನಡೆಯುತ್ತಿದ್ದ ಹೊನ್ನಾದೇವಿಯ ಜಾತ್ರೆ ಮತ್ತು ಜನಪದ ಪ್ರದರ್ಶನದಿಂದ ಪ್ರಭಾವಿತರಾದರು. ಇದರಿಂದ ಪ್ರೇರಿತರಾಗಿ ಎಂ.ಎ. ತರಗತಿಯಲ್ಲಿ ಐಚ್ಛಿಕ ವಿಷಯವಾಗಿ ಓದಿದ್ದು ಜಾನಪದ ವಿಷಯವೆ. ಗುರುಗಳಾಗಿ ದೊರೆತವರು ದೇಜಗೌ, ಎಸ್.ವಿ. ಪರಮೇಶ್ವರ ಭಟ್ಟ, ಜಿ. ವರದರಾಜರಾವ್, ಎಲ್. ಬಸವರಾಜು, ತಿಪ್ಪೇರುದ್ರಸ್ವಾಮಿ, ಸುಜನಾ, ಸಿಪಿಕೆ ಮುಂತಾದವರುಗಳು.<ref>http://www.kannadaprabha.com/districts/chamarajanagar/%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%B5%E0%B2%BF%E0%B2%B6%E0%B3%8D%E0%B2%B5%E0%B2%95%E0%B3%8B%E0%B2%B6-%E0%B2%9A%E0%B3%81%E0%B2%B0%E0%B3%81%E0%B2%95%E0%B3%81%E0%B2%97%E0%B3%8A%E0%B2%82%E0%B2%A1-%E0%B2%95%E0%B3%86%E0%B2%B2%E0%B2%B8/145145.html</ref>
*ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನ ಸಹಾಯಕರಾಗಿ ಸೇರಿದ ಇವರು ಉಪನ್ಯಾಸಕರಾಗಿ, ಪ್ರವಾಚಕರಾಗಿ, ಪ್ರಾಧ್ಯಾಪಕರಾಗಿ, ನಿರ್ದೇಶಕರಾಗಿ ವಿವಿಧ ಹಂತಗಳಲ್ಲಿ ತಮ್ಮ ಜವಾಬ್ದಾರಿಯುತ ಕಾರ್ಯಗಳನ್ನು ನಿರ್ವಹಿಸಿದ್ದಾರೆ.
"https://kn.wikipedia.org/wiki/ಡಿ._ಕೆ._ರಾಜೇಂದ್ರ" ಇಂದ ಪಡೆಯಲ್ಪಟ್ಟಿದೆ