ಶಿವೇಶ್ವರ ದೊಡ್ಡಮನಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೦ ನೇ ಸಾಲು:
ಹಣತರುವ ನೌಕರಿ ತೊರೆದು ಪತ್ರಿಕೋಧ್ಯಮಕ್ಕೆ ಧುಮುಕಿ ನಿರಂಜನರು ಪ್ರಾರಂಭಿಸಿದ್ದ ‘ಜನಶಕ್ತಿ’ ಪತ್ರಿಕೆಯ ಉಪಸಂಪಾದಕರಾಗಿ ದುಡಿಯತೊಡಗಿದರು. ಸ್ವಾತಂತ್ರ‍್ಯ ಮುನ್ನಾ ದಿನಗಳಲ್ಲಿ ಪತ್ರಿಕೆಯ ಮೇಲೆ ಪೊಲೀಸರ ಕಣ್ಣು ಬಿದ್ದು ಭೂಗತರಾಗಿಯೇ ಕೆಲಸ ನಿರ್ವಹಿಸಬೇಕಾಯಿತು. ದೈಹಿಕ ಅಶಕ್ತತೆ, ಕಣ್ಣುಬೇನೆಯನ್ನು ಲೆಕ್ಕಿಸದೆ ಹಗಲಿರಳೂ ಪತ್ರಿಕೆಗಾಗಿ ದುಡಿದರು. ಸ್ವಾತಂತ್ರ‍್ಯಾನಂತರ ಎಡಪಂಥೀಯ ಚಳುವಳಿಗೆ ಪೆಟ್ಟುಬಿದ್ದು ಪತ್ರಿಕೆಯು ನಿಂತುಹೋಗಿ ನಿರಂಜನರು ಬೆಂಗಳೂರಿಗೆ ಬಂದು ಪ್ರಜಾಮತ ಪತ್ರಿಕಾ ಬಳಗ ಸೇರಿದರು.
 
ಶಿವೇಶ್ವರರ ಸಾಹಿತ್ಯ ಕೃತಿಗಳು ವೈವಿಧ್ಯಮಯ. ಜಾನಪದ ಗೀತೆಗಳನ್ನು ಸಂಗ್ರಹಿಸುವಲ್ಲಿ ತೋರಿದ ಆಸಕ್ತಿಯನ್ನೇ ಪದ್ಯ ರಚನೆ, ಸಾನೆಟ್ಟುಗಳ ರಚನೆಯಲ್ಲೂ ತೋರಿದ್ದಾರೆ. ಸಾನೆಟ್ಟುಗಳ ರಚನೆಯಲ್ಲಿ ತಮ್ಮ ಮುಕ್ತವಾದ ಭಾವಲಹರಿಯನ್ನು ಹರಿಸಿದ್ದು ಸುಮಾರು ೩೨ ಸಾನೆಟ್ಟುಗಳನ್ನು ರಚಿಸಿದ್ದಾರೆ.<ref>http://www.kannadaprabha.com/supplements/sapthahikaprabha/%E0%B2%95%E0%B2%A3%E0%B2%B5%E0%B2%BF%E0%B2%97%E0%B3%8B%E0%B2%B7%E0%B3%8D%E0%B2%A0%E0%B2%BF/86713.html</ref>
 
ಇದಲ್ಲದೆ ಜಿ.ಪಿ. ರಾಜರತ್ನಂ ರವರು ಬರೆದ ‘ಎಂಡ್ಕುಡ್ಕ ರತ್ನ’ ದಂತೆ ‘ಗಾಂಜ್ಬಡ್ಕನ’ ಪದಗಳನ್ನು ಮತ್ತು ಕೆಲ ಭಾವಗೀತೆಗಳನ್ನು ರಚಿಸಿದ್ದು ನಲವತ್ತು ರಚನೆಗಳಿವೆ. ಮತ್ತು ತರಿಸುವ ವಸ್ತುವನ್ನು ಕೊಳವೆಯಲ್ಲಿ ಹಾಕಿ, ಎಳೆದಾಗ ಉನ್ಮಾದ ಉಂಟಾದಾಗ ಹೊರಡುವ ಪದಗಳು
೩೦ ನೇ ಸಾಲು:
 
==ಕಥೆಗಳು==
ಕೆಲ ಲೇಖನಗಳು, ಕಥೆಗಳನ್ನೂ ಬರೆದಿದ್ದು ಅವುಗಳಲ್ಲಿ ‘ರಾಜಮಾ’ (ಸಣ್ಣ ಕಥೆ) ಯಾದರೆ, ‘ನಮ್ಮ ನಡುವಿನ ಗೋಡೆ’ ಅನುವಾದಿತ ಕಥೆ. ೧೯೮೦ರಲ್ಲಿ ನಿರಂಜನರು ಸಂಪಾದಿಸಿದ ವಿಶ್ವಕಥಾಕೋಶದಲ್ಲಿ ‘ರಾಜಮಾ’ ಕಥೆಯೂ ಸೇರಿದೆ.<ref>http://libcatmysore-koha.informindia.co.in/cgi-bin/koha/opac-detail.pl?biblionumber=358360&shelfbrowse_itemnumber=400620</ref>
 
ತಾತ್ವಿಕ ನೆಲೆ, ನಿಷ್ಠೆಗಳಿಂದ, ಪ್ರಗತಿಶೀಲ, ಧ್ವನಿಪೂರ್ಣ ಕವನಗಳನ್ನು ಬರೆದಿದ್ದ ಶಿವೇಶ್ವರ ದೊಡ್ಡಮನಿಯವರು ಅತಿ ಕಿರಿಯ ವಯಸ್ಸಿನಲ್ಲಿಯೇ ಮುದ್ದಣ, ಯರ್ಮುಂಜ ರಾಮಚಂದ್ರ, ಪೇಜಾವರ ಸದಾಶಿವರಾಯರುಗಳಂತೆ ತೀರಿಕೊಂಡಿದ್ದು (೨೬.೦೩.೧೯೫೦) ಸಾಹಿತ್ಯಕ್ಕಾದ ದೊಡ್ಡ ನಷ್ಟ.
 
==ಉಲ್ಲೇಕಗಳು==
{{reflist}}