ದಸರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೫ ನೇ ಸಾಲು:
*ನಮ್ಮ ತಂದೆಯವರು ಅವರ ಸ್ನೇಹಿತರ ಜೊತೆ ದಸರಾ ವೀಕ್ಷಿಸಲು ಹೋಗುತ್ತಿದ್ದರು. ಬಂದು ಅಲ್ಲಿ ನಡೆದ ಘಟನಾವಳಿಗಳನ್ನು ಹಂಚಿ ಕೊಳ್ಳುತ್ತಿದ್ದರು. ಈಗಿನ ದಸರಾ ಆಚರಣೆ ಯಲ್ಲಿ ಅಷ್ಟೇನೂ ಸ್ವಾರಸ್ಯವಿಲ್ಲ. ಎಲ್ಲರಲ್ಲಿಯೂ ಉತ್ಸಾಹದ ಕೊರತೆ ಎದ್ದು ಕಾಣುತ್ತಿದೆ’ ಎನ್ನುವುದು ಕಳೆದ ಇಪ್ಪತ್ತು ವರ್ಷಗಳಿಂದ ದಸರಾ ಸಂದರ್ಭದಲ್ಲಿ ಮೈಸೂರಿಗೆ ಭೇಟಿ ಕೊಡುತ್ತಿರುವ ಗುಂಡ್ಲುಪೇಟೆ ತಾಲ್ಲೂಕಿನ ಚಿಕ್ಕತುಪ್ಪೂರಿನ ರೈತ ವಿ.ಕೆ. ಗಿರೀಶರ ಅಭಿಪ್ರಾಯ.
*ಈಗಿನದು ಅಧಿಕಾರಿಗಳ ದಸರಾ’ ಎಂಬುದು ಗುಂಡ್ಲುಪೇಟೆಯ ಎ.ಜಿ.ಸುರೇಶ್ ಅವರ ಆಕ್ಷೇಪ. ಅವರಿಗೆ ‘ಜಂಬೂ ಸವಾರಿ ಮೊದಲಿಗೆ ನೆನಪಿಗೆ ಬರುತ್ತದೆ. ಆದರೀಗ ಮಹಾರಾಜರು ಆ ಅಂಬಾರಿ ಮೇಲೆ ಇರುವುದಿಲ್ಲವಲ್ಲ ಎನ್ನುವ ಕೊರಗು. ಈಗಿನ ದಸರಾ ಕೇವಲ ತೋರಿಕೆ ಮತ್ತು ರಾಜಕೀಯ ಮಿಶ್ರಿತ.
==ಮೈಸೂರಮೈಸೂರು ದಸರಾದಲ್ಲಿ ಕುಸ್ತಿ==
*10 Oct, 2016,
*ಮೈಸೂರಿನಲ್ಲಿ ದಸರಾ ಕುಸ್ತಿ ನಡೆಯುವ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳ ಅಖಾಡಗಳು ಖಾಲಿ; ಕುಸ್ತಿ ತರಬೇತುದಾರರು ತಮ್ಮೂರಿನಲ್ಲಿರುವುದಿಲ್ಲ. ಯಾಕೆಂದರೆ ಅವರೆಲ್ಲರೂ ಮೈಸೂರಿನಲ್ಲಿ ಬೀಡುಬಿಟ್ಟಿರುತ್ತಾರೆ. ತಮ್ಮ ಶಿಷ್ಯಂದಿರ ಸ್ಪರ್ಧೆ ಇರಲಿ, ಇಲ್ಲದಿರಲಿ; ಅವರು ದಸರಾ ಕುಸ್ತಿಯ ಸೊಬಗು ಸವಿಯುವ ಅವಕಾಶ ಕೈಚೆಲ್ಲಲು ಸಿದ್ಧರಿಲ್ಲ. ಕುಸ್ತಿ ಮೇಲಿನ ಪ್ರೀತಿ ಇದಕ್ಕೆ ಒಂದು ಕಾರಣವಾದರೆ, ದಸರಾ ಕುಸ್ತಿಯಲ್ಲಿ ಪಾಲ್ಗೊಳ್ಳುವವರ ಪೈಕಿ ಮತ್ತು ಬಹುಮಾನ ಗೆಲ್ಲುವವರಲ್ಲಿ ಬಹುಪಾಲು ಉತ್ತರ ಕರ್ನಾಟಕದವರು ಎಂಬುದು ಮತ್ತೊಂದು ಕಾರಣ ಎಂಬುದು ಇಲ್ಲಿನವರ ವಿಶ್ಲೇಷಣೆ.
೫೩ ನೇ ಸಾಲು:
*ಮಣ್ಣಿನಲ್ಲಿ ಆಡುವ ಜಂಗೀ ಕಾಟಾ ನಿಕಾಲಿ ಕುಸ್ತಿ ಈಗ ಕಡಿಮೆಯಾಗುತ್ತಿದೆ. ರಾಷ್ಟ್ರೀಯ – ಅಂತರರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವ ಮತ್ತು ಆ ಮೂಲಕ ಜೀವನಕ್ಕೆ ದಾರಿ ಕಂಡುಕೊಳ್ಳುವ ಉದ್ದೇಶದಿಂದ ಕುಸ್ತಿಪಟುಗಳು ಪಾಯಿಂಟ್ ಕುಸ್ತಿಯ ಕಡೆಗೆ ಹೆಚ್ಚು ಒಲವು ತೋರಿಸುತ್ತಿದ್ದಾರೆ. ಪಾಲಕರು ಕೂಡ ಮಕ್ಕಳು ಪಾಯಿಂಟ್‌ ಕುಸ್ತಿಯಲ್ಲಿ ಸಾಧನೆ ಮಾಡಬೇಕೆಂದು ಬಯುಸುತ್ತಿದ್ದಾರೆ. ಆದರೆ ಉತ್ಸವಗಳಲ್ಲಿ ಇನ್ನೂ ಮಣ್ಣಿನ ಕುಸ್ತಿ ಜೀವಂತವಾಗಿದೆ. ಆದ್ದರಿಂದ ಕುಸ್ತಿಗೆ ಧಕ್ಕೆಯಾಗುವ ಯಾವುದೇ ಆತಂಕ ಇಲ್ಲ.
<ref>[http://www.prajavani.net/news/article/2016/10/10/444113.html –ತುಕಾರಾಮ ಗೌಡ, ಕುಸ್ತಿ ಕೋಚ್‌;ಕುಸ್ತಿಯ ಜಾತ್ರೆ, ಅಖಾಡದಲ್ಲೇ ಹಬ್ಬ;ವಿಕ್ರಂ ;10 Oct, 2016]</ref>
==ದಸರಾ ಕುಸ್ತಿಯಲ್ಲಿ ಮಹಿಳೆಯರು==
*ರಾಜ್ಯ ಹಾಗೂ ರಾಷ್ಟ್ರಮಟ್ಟದ ದಸರಾ ಮಹಿಳಾ ಕುಸ್ತಿಯಲ್ಲಿ ಮಿಂಚು ಹರಿಸಿದ್ದು ಶೃಂಗೇರಿಯ ಆತ್ಮಶ್ರೀ ಹಾಗೂ ಅನುಶ್ರೀ. ಇವರಿಬ್ಬರು ಅವಳಿ ಸಹೋದರಿಯರು ಎನ್ನುವುದು ವಿಶೇಷ.ದಸರಾ ಕುಸ್ತಿಯಲ್ಲಿ ಆತ್ಮಶ್ರೀ 60 ಕೆ.ಜಿ. ವಿಭಾಗದಲ್ಲಿ ರಾಷ್ಟ್ರಮಟ್ಟದಲ್ಲಿ ಮೊದಲ ಸ್ಥಾನ ಪಡೆದರು. ರಾಜ್ಯಮಟ್ಟದ ಕುಸ್ತಿಯಲ್ಲೂ ಅಗ್ರಸ್ಥಾನ ಸಂಪಾದಿಸಿದರು. ಆತ್ಮಶ್ರೀ ಅಖಿಲ ಭಾರತ ಅಂತರ ವಾರ್ಸಿಟಿ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲೂ ಪದಕ ಜಯಿಸಿದ್ದಾರೆ. ಕಬಡ್ಡಿಯಲ್ಲೂ ಎತ್ತಿದ ಕೈ. ಕಾಲೇಜಿಗೆ ಬರುವ ವೇಳೆಗೆ ಕುಸ್ತಿ ಸ್ಪರ್ಧೆ ಮೇಲೆ ಆಸಕ್ತಿ ಬಂತು. ಪೋಷಕರು ನಮ್ಮ ಕ್ರೀಡಾ ಉತ್ಸಾಹಕ್ಕೆ ಯಾವತ್ತೂ ಅಡ್ಡಿಯಾಗಲಿಲ್ಲ’ ಎಂದು ಈ ಅವಳಿ ಸಹೋದರಿಯರು ನುಡಿಯುತ್ತಾರೆ.
*ಕೋಚ್‌ ತುಕರಾಂ ಸಾರಥ್ಯದಲ್ಲಿ ಆಳ್ವಾಸ್‌ನ 14 ಹುಡುಗಿಯರು ದಸರಾ ಕುಸ್ತಿಯಲ್ಲಿ ಭಾಗವಹಿಸಿದ್ದರು. ಅವರು 4 ಚಿನ್ನದ ಪದಕ, 5 ಬೆಳ್ಳಿ ಪದಕ ಹಾಗೂ 5 ಕಂಚಿನ ಪದಕ ಜಯಿಸಿದರು. ಆರು ಮಂದಿ ಅಖಿಲ ಭಾರತ ಕುಸ್ತಿಯಲ್ಲಿ ಫೈನಲ್‌ ತಲುಪಿದ್ದರು. ಪವಿತ್ರಾ, ಸಾವಕ್ಕ, ಲಕ್ಷ್ಮಿ, ಧನಶ್ರೀ ಮಿಂಚು ಹರಿಸಿದರು. <ref>[http://www.prajavani.net/news/article/2016/10/10/444114.htmlಆತ್ಮಶ್ರೀ, ಅನುಶ್ರೀ ಕುಸ್ತಿ ಪ್ರೀತಿ...10 Oct, 2016</ref>
 
==‘ಮಹಾರಾಜರ ಕಾಲವೇ ಚೆನ್ನ’==
"https://kn.wikipedia.org/wiki/ದಸರ" ಇಂದ ಪಡೆಯಲ್ಪಟ್ಟಿದೆ