ಬ್ರುಸೆಲ್ಲೋಸಿಸ್ - ಜಾನುವಾರು ರೋಗ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೯ ನೇ ಸಾಲು:
*ಶಿರಸಿಯ ಸರ್ಕಾರಿ ಪಶುವೈದ್ಯ ಡಾ. ಗಣೇಶ ನೀಲೇಸರ ಸ್ವತಃ ಬ್ರುಸೆಲ್ಲೊಸಿಸ್ ಕಾಯಿಲೆಗೆ ಸಿಕ್ಕು ಅನೇಕ ಬಾರಿ ನರಳಿದವರು. ಜ್ವರ ತಾರಕಕ್ಕೇರಿ ವಿಭ್ರಮೆಯುಂಟಾದಾಗಿನ ತಮ್ಮ ಅನುಭವವನ್ನು ತುಂಬ ಸ್ವಾರಸ್ಯಕರವಾಗಿ ಅವರು ‘ಡೇರಿ ಡಾಕ್ಟರ್, ಹೋರಿ ಮಾಸ್ಟರ್’ ಪುಸ್ತಕದಲ್ಲಿ ಬರೆದಿದ್ದಾರೆ. ಹಸುಗಳು ಸಾಲುಸಾಲಾಗಿ ಈ ಕಾಯಿಲೆಗೆ ಸಿಕ್ಕು ಒಂದರ ಮೇಲೊಂದು ಗರ್ಭಸ್ರಾವವಾಗಿ ಇಡೀ ಡೇರಿ ಫಾರ್ಮ್ ದಿವಾಳಿ ಆಗಿರುವ ಉದಾಹರಣೆಯೂ ಅವರ ಕಥನದಲ್ಲಿದೆ. ಅದಕ್ಕೆ ‘ಗರ್ಭಸ್ರಾವದ ಬಿರುಗಾಳಿ’ (ಸ್ಟಾರ್ಮ್ ಆಫ್ ಅಬಾರ್ಶನ್) ಎಂಬ ಗುಣವಾಚಕವೇ ಇದೆಯಂತೆ. ಅದು ಹಾಗಿರಲಿ, ‘ಪಂಚಗವ್ಯ ಸೇವನೆ ಮಾಡಿ ಬ್ರುಸೆಲ್ಲೊಸಿಸ್ ಕಾಯಿಲೆಗೆ ಸಿಕ್ಕು ನರಳಿದ ವೈದಿಕರೂ ನನಗೆ ಗೊತ್ತು’ ಎಂದು ಅವರು ಹೇಳುತ್ತಾರೆ.<ref>[http://www.prajavani.net/news/article/2016/09/08/436415.html ಪಂಚಗವ್ಯದಿಂದಲೂ ಬಂದೀತು ಬ್ರುಸೆಲ್ಲಾ] </ref>
 
==ರೋಗ ಲಕ್ಷಣ==
*'''ರೋಗ ಅಂಟುವಿಕೆ''':ಕಾಯಿಲೆಯು ಮನುಷ್ಯರಿಗೆ ರೋಗಪೀಡಿತ ಹಸುವಿನ ಮೂತ್ರವನ್ನು ಸೇವಿಸುವುದರಿಂದ, ಹಾಲನ್ನು ಕಾಯಿಸದೇ ಕುಡಿಯುವುದರಿಂದ, ಸತ್ತೆ ಮತ್ತು ಇತರ ವಸ್ತುಗಳ ಸಂಪರ್ಕ ಇತ್ಯಾದಿಗಳಿಂದ ಬರುತ್ತದೆ.
*ಮನುಷ್ಯರಲ್ಲಿ ಈ ಕಾಯಿಲೆಯ ಲಕ್ಷಣಗಳೆಂದರೆ ಪದೇ ಪದೇ ಜ್ವರ ಬರುವುದು, ಅಸಾಧ್ಯ ಬೆನ್ನು ನೋವು, ಕೀಲು ನೋವು, ರಾತ್ರಿ ಬೆವರುವುದು ಮತ್ತು ಶರೀರದ ತೂಕ ಕ್ರಮೇಣ ಕಡಿಮೆಯಾಗುವುದು ಇತ್ಯಾದಿ. ಈ ಕಾಯಿಲೆಯನ್ನು ಅಂಡ್ಯುಲೇಂಟ್ ಜ್ವರವೆಂದೂ ಕರೆಯುತ್ತಾರೆ. ಸ್ತ್ರೀಯರಲ್ಲಿ ಈ ಎಲ್ಲ ರೋಗ ಲಕ್ಷಣಗಳ ಜೊತೆ ಗರ್ಭಿಣಿಯಾದರೆ ಗರ್ಭಪಾತವಾಗುತ್ತದೆ. ಪ್ರಾರಂಭಿಕ ಹಂತದಲ್ಲಿ ಮಲೇರಿಯಾ, ಕ್ಷಯ, ವಿಷಮಶೀತಜ್ವರ ಮತ್ತಿತರ ಕಾಯಿಲೆಗಳನ್ನು ಹೋಲುವುದು. ಕೆಲವೇ ಆಸ್ಪತ್ರೆಗಳಲ್ಲಿ ಈ ಕಾಯಿಲೆಯನ್ನು ಪತ್ತೆ ಮಾಡುವ ಸೌಲಭ್ಯಗಳಿವೆ. ಈ ರೋಗದ ಬಗ್ಗೆ ಪರಿಕಲ್ಪನೆ ಹೊಂದಿರುವ ತಜ್ಞ ವೈದ್ಯರು ಮಾತ್ರ ಸೂಕ್ತ ಪ್ರಯೋಗಶಾಲಾ ಪರೀಕ್ಷೆಯ ಸಹಾಯದಿಂದ ಈ ರೋಗವನ್ನು ಪತ್ತೆಹಚ್ಚಿ ಉತ್ತಮ ಪರಿಣಾಮಕಾರಿ ಚಿಕಿತ್ಸೆ ನೀಡಬಲ್ಲರು. ಕಂದು ರೋಗ ಮತ್ತು ಮಾಲ್ಟ ಜ್ವರ ಎನ್ನಲಾಗುವ ಈ ರೋಗವು ಹಸು, ಕುದುರೆ, ಹಂದಿ, ನಾಯಿ, ಕುರಿ, ಮೇಕೆ ಅಲ್ಲದೇ ವನ್ಯ ಪ್ರಾಣಿಗಳಾದ ಕಾಡೆಮ್ಮೆ ಮತ್ತು ಜಿಂಕೆಗಳನ್ನೂ ಬಾಧಿಸುತ್ತದೆ.<ref>[http://wwwnc.cdc.gov/eid/article/9/4/02-0576_article Human Neurobrucellosis with Intracerebral Granuloma Caused by a Marine Mammal Brucella spp.]</ref>
==ರೋಗದ ಬೆಳವಣಿಗೆ==
*ಶರೀರವನ್ನು ಪ್ರವೇಶಿಸಿದ ರೋಗಾಣುವು ದುಗ್ಧ ಗ್ರಂಥಿಗಳನ್ನು ಸೇರಿಕೊಂಡು ಅಲ್ಲಿ ವೃದ್ಧಿಗೊಳ್ಳುತ್ತದೆ. ನಂತರ ಗುಲ್ಮ, ಕೆಚ್ಚಲು, ಮೂತ್ರಾಶಯ ಮತ್ತು ಭ್ರೂಣವನ್ನು ಹೊಂದಿದ ಗರ್ಭಕೋಶದಲ್ಲಿ ಮನೆಮಾಡುತ್ತದೆ. ಗರ್ಭಕೋಶದಲ್ಲಿ ಇವು ಹುಣ್ಣುಗಳನ್ನು ಉಂಟು ಮಾಡುವುದರಿಂದ ಗರ್ಭಕೋಶಕ್ಕೆ ಧಕ್ಕೆ ತಗುಲಿ ಗರ್ಭಪಾತವಾಗುತ್ತದೆ. ಕೆಚ್ಚಲಿನಲ್ಲಿ ರೋಗಾಣುಗಳು ಸೇರಿಕೊಳ್ಳುವುದರಿಂದ ಹಾಲಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸ್ರವಿಸಲ್ಪಡುತ್ತವೆ. ಈ ಹಾಲನ್ನು ಕಾಯಿಸದೇ ಕುಡಿದರೆ ರೋಗ ಬರುವುದು.
 
'''ಜಾನುವಾರುಗಳಲ್ಲಿ''' ಈ ಕಾಯಿಲೆಯ ಲಕ್ಷಣಗಳೆಂದರೆ 5–8 ತಿಂಗಳ ಅವಧಿಯಲ್ಲಿ ಗರ್ಭಪಾತವಾಗುವುದು, ಸತ್ತೆ ಬೀಳದೇ ಇರುವುದು ಮತ್ತು ಗರ್ಭಕಟ್ಟದಿರುವುದು. ಯಾವುದೇ ವಯಸ್ಸಿನ ರಾಸುಗಳಲ್ಲಿ ಈ ಕಾಯಿಲೆ ಕಂಡುಬರಬಹುದು. ಹೋರಿಗಳಲ್ಲಿ ವೃಷಣದ ವ್ರಣ ಅಥವಾ ಉರಿಯೂತ ಕಾಣಿಸಿಕೊಳ್ಳಬಹುದು. ಕೆಲವು ಜಾನುವಾರುಗಳಲ್ಲಿ ಕೀಲು ಊದಿಕೊಳ್ಳುವಿಕೆ, ಕೀಲು ನೋವು ಇತ್ಯಾದಿ ಲಕ್ಷಣಗಳು ಸಹ ಕಾಣಿಸಿಕೊಳ್ಳಬಹುದು. ಹಂದಿಗಳಲ್ಲಿ ಬ್ರುಸೆಲ್ಲಾ ಕ್ರಿಮಿಯು ಗರ್ಭಪಾತವನ್ನುಂಟು ಮಾಡುವುದಿಲ್ಲ. ಆದರೆ ಕುರಿ, ಮೇಕೆ ಮತ್ತು ಕುದುರೆಗಳಲ್ಲಿ ಗರ್ಭಪಾತವಾಗುವುದನ್ನು ಗಮನಿಸಲಾಗಿದೆ. ರೋಗವನ್ನು ರಕ್ತಪ್ರಸರಣದ ಮಾದರಿಯನ್ನು ಪರೀಕ್ಷಿಸುವುದರಿಂದ ಪತ್ತೆ ಮಾಡುವುದು ಕಷ್ಟ. ರಕ್ತಸಾರವನ್ನು(ಸೀರಂ)ಆಧುನಿಕ ವಿಧಾನಗಳಿಂದ ಪ್ರಯೋಗಶಾಲೆಗಳಲ್ಲಿ ಪರೀಕ್ಷಿಸುವುದರಿಂದ ಅಥವಾ ಹಾಲನ್ನು ಪರೀಕ್ಷೆಯಿಂದ ಈ ರೋಗವನ್ನು ಪತ್ತೆ ಹಚ್ಚಬಹುದು.
==ಚಿಕಿತ್ಸೆ==
*'''ಮಾನವರಿಗೆ''':ಮನುಷ್ಯರಲ್ಲಿ ಈ ರೋಗವನ್ನು ಡಾಕ್ಸಿಸೈಕ್ಲಿನ್ ಮತ್ತು ರಿಫಾಮೈಸಿನ್ ಔಷಧಿಗಳ ಸಂಯುಕ್ತ ಚಿಕಿತ್ಸೆಯಿಂದ ಪರಿಣಾಮಕಾರಿಯಾಗಿ ವಾಸಿ ಮಾಡಬಹುದು.
'''ರಾಸುಗಳಿಗೆ''':ಆದರೆ ಆಕಳು ಅಥವಾ ಇತರ ನಾಲ್ಕು ಹೊಟ್ಟೆ ಹೊಂದಿರುವ ಪ್ರಾಣಿಗಳಲ್ಲಿ ಅವುಗಳ ದೊಡ್ಡಹೊಟ್ಟೆಯಲ್ಲಿ(ರುಮೆನ್) ಈ ಔಷಧಿಗಳು ನಿಷ್ಕ್ರಿಯಗೊಳ್ಳುವುದರಿಂದ ಚಿಕಿತ್ಸೆ ಪರಿಣಾಮಕಾರಿಯಾಗುವುದಿಲ್ಲ. ಆದರೂ ಇತ್ತೀಚಿಗೆ ಮಾರುಕಟ್ಟೆಗೆ ಬಂದ ಹಲವು ಆಧುನಿಕ ಜೀವನಿರೋಧಕ ಚುಚ್ಚುಮದ್ದುಗಳನ್ನು ಬಳಸಿ ತಜ್ಞ ಪಶುವೈದ್ಯರು ಈ ರೋಗವನ್ನು ವಾಸಿ ಮಾಡಬಹುದಾದರೂ ಚಿಕಿತ್ಸಾವೆಚ್ಚ ದುಬಾರಿ.
 
*ರೋಗ ಬರದಂತೆ ತಡೆಗಟ್ಟುವುದು ಅತ್ಯಂತ ಉಪಯುಕ್ತ ವಿಧಾನ. ಲಸಿಕಾ ಪ್ರಯೋಗವು ಅತಿ ಮುಖ್ಯವಾದ ಮಾರ್ಗ. ಬ್ರುಸೆಲ್ಲಾ ಅಬೊರ್ಟಸ್ ಪ್ರಬೇಧ 19 ಜೀವಂತ ರೋಗಾಣುವನ್ನು ಹೊಂದಿದ ಲಸಿಕೆಯನ್ನು 4–8 ತಿಂಗಳಿನ ವಯಸ್ಸಿನಲ್ಲಿ ಕೊಮರೆ ರೋಗವನ್ನು ಪರಿಣಾಮಕಾರಿಯಗಿ ತಡೆಗಟ್ಟಲು ಸಾಧ್ಯ. ತುಂಬು ಗರ್ಭಧರಿಸಿದ ರಾಸುಗಳಿಗೆ ಈ ಲಸಿಕೆಯನ್ನು ನೀಡಿದರೆ ಗರ್ಭಪಾತವಾಗುವ ಸಾಧ್ಯತೆ ಇದೆ. ಸದ್ಯ ಇತರ ಉತ್ತಮ ಲಸಿಕೆಗಳ ಬಗ್ಗೆ ಸಂಶೋಧನೆ ಮುಂದುವರೆದಿದೆ. <ref>[http://www.prajavani.net/news/article/2016/09/13/437483.html ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯ ಸಹ ಪ್ರಾಧ್ಯಾಪಕ ಡಾ. ಎನ್.ಬಿ.ಶ್ರೀಧರ]</ref>
==ನೋಡಿ==
*[[ದನ]]