ಕಾವೇರಿ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧೨ ನೇ ಸಾಲು:
*ಕ್ಯೂಸೆಕ್‌ ಮತ್ತು ಟಿಎಂಸಿ: ಕ್ಯೂಸೆಕ್ ಎಂಬುದು Cubic feet per Secondನ ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.[[http://publictv.in/cauvery-water-row-supreme-court-directs-karnataka-government-to-release-15000-cusec-of-water-to-tamil-nadu-for-10-days/]]
 
==ತಮಿಳು ನಾಡಿಗೆ ಲಾಭ==
*2012ರ ಸೆಪ್ಟಂಬರ್ ತಿಂಗಳಿನಲ್ಲೂ ಇಂತಹುದೇ ಬಿಕ್ಕಟ್ಟು ಎದುರಾಗಿತ್ತು. ಸೆಪ್ಟಂಬರ್ 12ರಿಂದ 19ರ ತನಕ ಏಳು ದಿನಗಳ ಕಾಲ ನಿತ್ಯ ಹತ್ತು ಸಾವಿರ ಕ್ಯೂಸೆಕ್ಸ್ ನೀರು ಬಿಡುಗಡೆ ಮಾಡಬೇಕೆಂಬ ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸಬೇಕಾಗಿ ಬಂದಿತ್ತು.
 
*ಇದೀಗ 50 ಟಿ.ಎಂ.ಸಿ. ಅಡಿಗಳಿಗೆ ಬೇಡಿಕೆ ಇಟ್ಟಿದ್ದ ತಮಿಳುನಾಡು ಕಡೆಗೆ ಮಳೆಯ ಅಭಾವದ ಸ್ಥಿತಿಯನ್ನು ಮನ್ನಿಸಿ ತನ್ನ ಬೇಡಿಕೆಯನ್ನು 26 ಟಿ.ಎಂ.ಸಿ. ಅಡಿಗಳಿಗೆ ಇಳಿಸಿತ್ತು. ಈ ಬೇಡಿಕೆಯ ಅರ್ಧದಷ್ಟನ್ನು (ಸುಮಾರು 13 ಟಿ.ಎಂ.ಸಿ.ಅಡಿಗಳು) ಸುಪ್ರೀಂ ಕೋರ್ಟ್ ಒಪ್ಪಿ ಆದೇಶ ನೀಡಿದೆ. 2012ರ ಆದೇಶಕ್ಕೆ ಹೋಲಿಸಿದರೆ ಈ ಆದೇಶ ರಾಜ್ಯದ ಪಾಲಿಗೆ ತುಸು ಹೆಚ್ಚು ಕಠಿಣವಾಗಿರುವುದು ನಿಜ.ಆದರೆ ರಾಜ್ಯದ ಪಾಲಿಗೆ ಈ ಸಾಲಿನ ನೈಋತ್ಯ ಮಾರುತದ ಮಳೆಗಾಲ ಇಲ್ಲಿಗೇ ಮುಗಿದು ಹೋಗಿಲ್ಲ. ಸೆಪ್ಟಂಬರ್ ಮತ್ತು ಅಕ್ಟೋಬರ್ 15ರ ಅವಧಿಯಲ್ಲಿ 80 ಟಿ.ಎಂ.ಸಿ. ಅಡಿಗಳಷ್ಟು ನೀರು ಕರ್ನಾಟಕದ ಜಲಾಶಯಗಳಿಗೆ ಹರಿದು ಬಂದಿರುವ ನಿದರ್ಶನಗಳಿವೆ.
 
*ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದೆ ಗತ್ಯಂತರ ಇರುವುದಿಲ್ಲ. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರು ನ್ಯಾಯಾಲಯ ನಿಂದನೆ ಎದುರಿಸಬೇಕಾಯಿತು. ಇದೀಗ ಐದು ದಿನಗಳ ಕಾಲ ನ್ಯಾಯಾಲಯದ ಆದೇಶವನ್ನು ಪಾಲಿಸಿ ಆನಂತರ ಇನ್ನು ಬಿಡುಗಡೆ ಸಾಧ್ಯವಿಲ್ಲ ಎಂಬುದಾಗಿ ಪುನರ್ ಪರಿಶೀಲನೆಯ ಅರ್ಜಿ ಹಾಕುವ ಆಯ್ಕೆ ರಾಜ್ಯದ ಮುಂದೆ ಇದ್ದೇ ಇದೆ ಎನ್ನುತ್ತಾರೆ ಕಾನೂನು ತಜ್ಞರು.
 
*'''ಜಲ ಮಾಪನ ಕೇಂದ್ರ:''' ಕೃಷ್ಣರಾಜಸಾಗರ ಮತ್ತು ಕಬಿನಿ ಜಲಾಶಯಗಳ ಕೆಳಗೆ ಉಭಯ ರಾಜ್ಯಗಳ ಗಡಿ ಭಾಗದ ಕೇಂದ್ರೀಯ ಜಲಮಾಪನ ಕೇಂದ್ರ ಬಿಳಿಗುಂಡ್ಲು. ಬಿಳಿಗುಂಡ್ಲುವಿನಿಂದ ತಮಿಳುನಾಡಿನ ಮೆಟ್ಟೂರು ಅಣೆಕಟ್ಚೆಯ ನಡುವಣ ದೂರ 45 ಕಿ.ಮೀ.ಗಳು. ಈ ಮಧ್ಯಂತರ ಜಲಾನಯನ ಪ್ರದೇಶದಲ್ಲಿ ಉತ್ಪತ್ತಿ ಯಾಗುವ ನೀರು ತಮಿಳುನಾಡಿನ ಮೆಟ್ಟೂರಿಗೆ ಹರಿಯುತ್ತದೆ.
 
*ಸುಪ್ರೀಂ ಹೀಗೆ ಹೇಳಿತ್ತು: 08.10.12ರ ಕಾವೇರಿ ತಗಾದೆಯ ವಿಚಾರಣೆಯ ಸಂದರ್ಭದಲ್ಲಿ ರಾಜ್ಯದ ಕಾವೇರಿ ಕಣಿವೆಯಲ್ಲಿ ನಡೆದಿದ್ದ ಚಳವಳಿಗಳ ಕುರಿತು ಸುಪ್ರೀಂ ಕೋರ್ಟ್ ಹೇಳಿದ್ದ ಮಾತುಗಳು- ಚಳಿವಳಿಗಳಿಂದ ಯಾವ ಉದ್ದೇಶವೂ ನೆರವೇರುವುದಿಲ್ಲ. ಕೆಲವೊಮ್ಮೆ ಅವುಗಳಿಂದ ಉತ್ತಮ ಕೇಸೊಂದು ಕೆಟ್ಟು ಹೋಗಲೂಬಹುದು. ಈ ಇಡೀ ವಿದ್ಯಮಾನದಲ್ಲಿ ಸೂಕ್ಷ್ಮ ವಿಚಾರವೆಂಬುದು ಏನಾದರೂ ಇದ್ದರೆ ಅದು ರೈತರ ಬವಣೆ ವಿನಾ ಇನ್ನೇನೂ ಅಲ್ಲ.
 
==ವಿವಾದದ ಹಿನ್ನೋಟ==
*1990ರ ಜೂನ್ ಎರಡರಂದು ರಚಿಸಲಾಗಿದ್ದ ಕಾವೇರಿ ಜಲವಿವಾದ ನ್ಯಾಯಮಂಡಳಿ ಸುಮಾರು 16 ವರ್ಷಗಳ ಕಾಲ ಕಲಾಪ ನಡೆಸಿ 2007ರ ಫೆಬ್ರವರಿ ಐದರಂದು ತನ್ನ ಅಂತಿಮ ವರದಿ ಸಲ್ಲಿಸಿತ್ತು. ಕಾವೇರಿ ಕಣಿವೆಯಲ್ಲಿ ಲಭ್ಯವಿರುವ ನೀರನ್ನು 740 ಟಿ.ಎಂ.ಸಿ. ಎಂದು ಅಂದಾಜು ಮಾಡಿದ ನ್ಯಾಯಮಂಡಳಿ ತಮಿಳುನಾಡಿಗೆ 419 ಟಿ.ಎಂ.ಸಿ.ಗಳು, ಕರ್ನಾಟಕಕ್ಕೆ 270 ಟಿ.ಎಂ.ಸಿ.ಗಳು, ಕೇರಳಕ್ಕೆ 30 ಮತ್ತು ಪುದುಚೆರಿಗೆ ಏಳು ಟಿ.ಎಂ.ಸಿ.ಗಳನ್ನು ಹಂಚಿಕೆ ಮಾಡಿತ್ತು. ಪರಿಸರ ಸಂರಕ್ಷಣೆಗೆಂದು ಕಾವೇರಿ ಕೊಳ್ಳದಲ್ಲಿ 10 ಟಿ.ಎಂ.ಸಿ. ನೀರನ್ನು ಉಳಿಸಬೇಕೆಂದು ಸೂಚಿಸಿತ್ತು.
 
*ಕಾವೇರಿ ಕಣಿವೆಯ ನೀರಿನ ಇಳುವರಿಗೆ ಕರ್ನಾಟಕದ ಕೊಡುಗೆ ಶೇ53 ಆದರೆ ಹಂಚಿಕೆಯಾಗಿರುವ ಪಾಲು ಶೇ36 ಮಾತ್ರ. ಕಾವೇರಿ ಕಣಿವೆಗೆ ಕೇವಲ ಶೇ 30ರಷ್ಟು ಕೊಡುಗೆ ನೀಡಿರುವ ತಮಿಳುನಾಡು ಇಳುವರಿಯ ಶೇ57ರಷ್ಟು ನೀರನ್ನು ಗಿಟ್ಟಿಸಿದೆ. ಅಂದಿನ ಮಹಾರಾಜರ ಮೈಸೂರು ಬ್ರಿಟಿಷರ ಆಳ್ವಿಕೆಯ ಅಧೀನದಲ್ಲಿದ್ದ ಸಾಮಂತ ಸಂಸ್ಥಾನವಾಗಿತ್ತು. ಹೀಗಾಗಿ 1892 ಮತ್ತು 1924ರ ಒಪ್ಪಂದಗಳನ್ನು ಮೈಸೂರಿನ ಮೇಲೆ ಹೇರಲಾಗಿತ್ತು.<ref>[http://www.prajavani.net/news/article/2016/09/07/436228.html ತಜ್ಞರ ಅಭಿಪ್ರಾಯ;ಶೇ 10ರಷ್ಟು ಬೆಳೆಗೆ ಹಾನಿ]</ref>
==ನೋಡಿ==
*[[ಭಾರತದ ನದಿಗಳು]]
Line ೧೧೭ ⟶ ೧೩೨:
* [[https://en.wikipedia.org/wiki/Kaveri]] ಇಂಗ್ಲಿಷ್` ತಾಣ
*[[ಕಾವೇರಿ ನದಿಯ ಮೇಕೆದಾಟು ಅಣೆಕಟ್ಟು ಯೋಜನೆ]]
 
==ಉಲ್ಲೇಖ==
*೩.೧೬-೭-೨೦೧೪ ವಿಜಯ ಕರ್ನಾಟಕ ಮತ್ತು ಪ್ರಜಾವಾಣಿ ವರದಿ
"https://kn.wikipedia.org/wiki/ಕಾವೇರಿ_ನದಿ" ಇಂದ ಪಡೆಯಲ್ಪಟ್ಟಿದೆ