ಕಾವೇರಿ ನದಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೦೭ ನೇ ಸಾಲು:
*ಈ ಬಾರಿ ಮಳೆ ಕಡಿಮೆಯಾಗಿ ಕಾವೇರಿನದಿಯಲ್ಲಿ ಸಾಕಷ್ಟು ನೀರು ಸಂಗ್ರಹವಾಗದೆ ನಿಯಮದಣತೆ ಪೂರ್ತಿ ನೀರನ್ನು ಹರಿಸಿರಲಿಲ್ಲ. ತಮಿಳು ನಾಡು ಸುಪ್ರೀಮ್ ಕೋರ್ಟಿಗೆ ತಕರಾರು ಅರ್ಜಿಹಾಕಿತ್ತು.
*2016 ಸೆಪ್ಟೆಂಬರ್,05: ಮುಂದಿನ 10 ದಿನಗಳ ಕಾಲದಲ್ಲಿ 13.5 ಟಿಎಂಸಿ ನೀರನ್ನು ಕರ್ನಾಟಕ ತಮಿಳುನಾಡಿಗೆ ಬಿಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಸೋಮವಾರ ನೀಡಿದೆ. ಅಂದರೆ ಪ್ರತಿದಿನ 15 ಸಾವಿರ ಕ್ಯೂಸೆಕ್ [ಟಿಎಂಸಿ= 11 574 ಕ್ಯೂಸೆಕ್ಸ್] ನೀರನ್ನು ಕರ್ನಾಟಕ ಹರಿಸಬೇಕಾಗುತ್ತದೆ. ಕಾವೇರಿ ಪಾತ್ರದಿಂದ 50.52 ಟಿಎಂಸಿ ನೀರು ನೀಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಬೇಕೆಂದು ತಮಿಳುನಾಡು ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಆದೇಶ ನೀಡಿದೆ: <ref>[http://kannada.oneindia.com/news/karnataka/sc-directs-karnataka-to-release-15-000-cusecs-cauvery-water-to-tn-106957.html ತಮಿಳುನಾಡಿಗೆ ನೀರು ಹರಿಸಿ ಎಂದ ಸುಪ್ರೀಂ]</ref>
*ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಕಳೆದ ವರ್ಷ ಈ ವೇಳೆಗೆ 25.68 ಟಿಎಂಸಿ ಅಡಿಯಷ್ಟು ನೀರಿತ್ತು. ಈಗ ಡೆಡ್‌ ಸ್ಟೋರೇಜ್‌ ಹಾಗೂ ಕುಡಿಯುವ ನೀರಿಗೆಂದು 10 ಟಿಎಂಸಿ ಅಡಿಯಷ್ಟು ಹೊರತುಪಡಿಸಿದರೆ ಅಣೆಕಟ್ಟೆಯಲ್ಲಿ 8.27 ಟಿಎಂಸಿ ಅಡಿಯಷ್ಟು ಮಾತ್ರ ನೀರಿದೆ. ಹಾಸನ ಜಿಲ್ಲೆಯಲ್ಲೂ ಹೇಮಾವತಿ, ವಾಟೆ ಹೊಳೆ, ಯಗಚಿ ಜಲಾಶಯ ಭರ್ತಿಯಾಗದ ಕಾರಣ ಬೆಳೆಗಳು ಬಾಡುತ್ತಿವೆ. ಹೇಮಾವತಿ ಜಲಾಶಯದಲ್ಲಿ ಕಳೆದ ವರ್ಷ ಇದೇ ಅವಧಿಗೆ 18 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಸದ್ಯ ಜಲಾಶಯದ ನೀರನ್ನು ಕುಡಿಯಲು ಮಾತ್ರ ಬಳಸಿಕೊಳ್ಳಲಾಗುತ್ತಿದೆ.
*ತಮಿಳುನಾಡು ವಾದ: ಕಾವೇರಿ ನ್ಯಾಯಮಂಡಳಿ ಸೂಚನೆ ಮೇರೆಗೆ ಕರ್ನಾಟಕ ನೀರು ಹರಿಸಿಲ್ಲ. ಈ ಸಾಲಿನಲ್ಲಿ ಅಂದಾಜು 50 ಟಿಎಂಸಿ ಅಡಿ ನೀರನ್ನು ಬಿಡಬೇಕಿತ್ತು. ತಕ್ಷಣವೇ 25 ಟಿಎಂಸಿ ಅಡಿ ನೀರು ಹರಿಸಲು ಸೂಚಿಸಬೇಕು ಎಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‍ಗೆ ಮಧ್ಯಂತರ ಅರ್ಜಿ ಸಲ್ಲಿಸಿತ್ತು.
*ಕರ್ನಾಟಕದ ವಾದ: ಈಗಾಗಲೇ ಕಾವೇರಿ ಕಣಿವೆಯಲ್ಲಿ ಬರುವ ಮೂರು ಜಲಾಶಯಗಳು ಅರ್ಧದಷ್ಟು ತುಂಬಿಲ್ಲ. ತೀವ್ರ ಮಳೆ ಕೊರತೆ ಎದುರುಸುತ್ತಿರುವ ಕರ್ನಾಟಕ, ಮುಂದಿನ ದಿನಗಳಲ್ಲಿ ಕುಡಿಯಲಿಕ್ಕೆ ನೀರಿಲ್ಲದ ಪರಿಸ್ಥಿತಿ ಎದುರಿಸಬೇಕಾಗಿದೆ. ಕಾವೇರಿ ನದಿ ಕಣಿವೆಯ, ಕೆ.ಆರ್.ಎಸ್, ಕಬಿನಿ ಹಾಗೂ ಹೇಮಾವತಿ ಮೂರು ಡ್ಯಾಮ್‍ಗಳಲ್ಲಿ ಒಟ್ಟು ಸೇರಿಸಿದ್ರೂ ಇರೋದು ಬರೀ 51 ಟಿಎಂಸಿ ನೀರು. ಇದ್ರಲ್ಲಿ 40 ಟಿಎಂಸಿ ನೀರು ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಿಗೆ ಕುಡಿಯಲಿಕ್ಕೆ ಬೇಕು ಎಂದು ಕರ್ನಾಟಕ ವಾದ ಮಂಡಿಸಿತ್ತು.
*ಕ್ಯೂಸೆಕ್‌ ಮತ್ತು ಟಿಎಂಸಿ: ಕ್ಯೂಸೆಕ್ ಎಂಬುದು Cubic feet per Secondನ ಹ್ರಸ್ವರೂಪ. ಪ್ರತಿ ಸೆಕೆಂಡಿಗೆ ಒಂದು ಘನ ಅಡಿ ನೀರು ಹರಿದರೆ ಅದು ಒಂದು ಕ್ಯೂಸೆಕ್ ನೀರು ಎಂದು ಕರೆಯಲ್ಪಡುತ್ತದೆ. ಒಂದು ಘನ ಅಡಿ ನೀರನ್ನು ಲೀಟರುಗಳಿಗೆ ಪರಿವರ್ತಿಸಿದರೆ ಸುಮಾರು 28.317 ಲೀಟರುಗಳಾಗುತ್ತವೆ. 11,524 ಕ್ಯೂಸೆಕ್ ನೀರು 24 ಗಂಟೆಯ ಕಾಲ ನಿರಂತರ ಹರಿದರೆ ಒಂದು ಟಿಎಂಸಿ ಎಂದು ಕರೆಯಲಾಗುತ್ತದೆ. 10 ಸಾವಿರ ಕ್ಯೂಸೆಕ್ ನೀರು 24 ಗಂಟೆ ನಿರಂತರ ಹರಿದರೆ 0.864 ಟಿಎಂಸಿ ಅಡಿ ಆಗುತ್ತದೆ. 35.87 ಅಡಿ ಅಳದಷ್ಟು ನೀರನ್ನು ಒಂದು ಚದರ ಮೈಲಿ ಪ್ರದೇಶದಲ್ಲಿ ಸಂಗ್ರಹಿಸಿದರೆ ಒಂದು ಟಿಎಂಸಿ ಅಡಿ ಆಗುತ್ತದೆ.[[http://publictv.in/cauvery-water-row-supreme-court-directs-karnataka-government-to-release-15000-cusec-of-water-to-tamil-nadu-for-10-days/]]
 
==ನೋಡಿ==
"https://kn.wikipedia.org/wiki/ಕಾವೇರಿ_ನದಿ" ಇಂದ ಪಡೆಯಲ್ಪಟ್ಟಿದೆ