ಚಿಕ್ಕಬಳ್ಳಾಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೯ ನೇ ಸಾಲು:
'''ಚಿಕ್ಕಬಳ್ಳಾಪುರ''' [[ಕರ್ನಾಟಕದ ಜಿಲ್ಲೆಗಳು|ಕರ್ನಾಟಕದ ಜಿಲ್ಲೆಗಳಲ್ಲಿ]] ಒಂದು. ಮುಂಚೆ [[ಕೋಲಾರ]] ಜಿಲ್ಲೆಯಲ್ಲಿನ ಒಂದು ತಾಲೂಕು ಆಗಿದ್ದ ಇದು ೨೦೦೮ ರಲ್ಲಿ ಜಿಲ್ಲಾ ಅಡಳಿತ ಕೇಂದ್ರವಾಯಿತು. ಈ ಜಿಲ್ಲೆಗೆ '''''ಸರ್. ಎಮ್. ವಿಶ್ವೇಶ್ವರಯ್ಯ''''' ಜಿಲ್ಲೆ ಎಂದು ನಾಮಕರಣ ಮಾಡುವ ಅಪೇಕ್ಷೆ ಜನರಲ್ಲಿದೆ. ಇಲ್ಲಿಗೆ ಹತ್ತಿರ ಇರುವ ನಂದಿ ದೇವಸ್ಥಾನ ಬಹಳ ಪ್ರಾಚೀನ ದೇವಸ್ಥಾನ. ಇಲ್ಲಿ ಶಿವನ ಲಿಂಗಗಳೆರಡು ಇವೆ. [[ಗಂಗ ರಾಜವಂಶ|ಗಂಗ]], [[ಕದಂಬ]]ರಿಗಿಂತ ಹಳೆಯ ಶಿಲಾಶಾಸನಗಳನ್ನು ಇಲ್ಲಿ ನಾವು ಕಾಣಬಹುದು. ಅಂಗ್ಲರಲ್ಲಿನ ಪ್ರಮುಖರಾದ ಲಾರ್ಡ [[ಕಾರ್ನ್ವಾಲಿಸ್]] ಸಹ ಇಲ್ಲಿ ಕೆಲವು ದಿನ ಇದ್ದ ಎನ್ನುವ ಶಾಸನಗಳನ್ನು ಕಾಣಬಹುದು. ಇಲ್ಲಿಗೆ ಸಮೀಪ (೨೫ ಕಿ.ಮಿ.) ಇರುವ ಮಾಕಿರೆಡ್ಡಿಪಲ್ಲಿಯಲ್ಲಿ ಮುತರಾಯಸ್ವಾಮಿ ದೇವಸ್ಥಾನವು ಸಹ ಬಹಳ ಪ್ರಾಚೀನವಾದ ದೇವಸ್ಥಾನ. ಇಲ್ಲಿ ಶ್ರೀರಾಮ ನವಮಿಯ ದಿನ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ.
ನಂದಿ ಬೆಟ್ಟ ಇಲ್ಲಿಯ ಪ್ರಮುಖ ಗಿರಿಧಾಮ. ಚಿಕ್ಕಬಳ್ಳಾಪುರ ಮೆಣಸಿನಕಾಯಿ ತುಂಬ ಪ್ರಸಿದ್ಧಿ. ಇಲ್ಲಿನ ರೈತ ಸಮುದಾಯ ಬಹಳ ಪ್ರಗತಿ ಪರ ರೈತರನ್ನು ಹೊಂದಿದೆ.
==ಪಟ್ಟಣದಲ್ಲಿನ ಆಕರ್ಷಣೆಗಳು==
ಚಿಕ್ಕಬಳ್ಳಾಪುರ ಪಟ್ಟಣದ ಸುತ್ತಮುತ್ತಲೂ ಹಲವಾರು ಪ್ರಾಕೃತಿಕ, ಐತಿಹಾಸಿಕ ಮತ್ತು ಮಾನವ ನಿರ್ಮಿತ ಅನೇಕ ಪ್ರೇಕ್ಷಣೀಯ ಸ್ಥಳಗಳು ಇವೆ. ಚಿಕ್ಕಬಳ್ಳಾಪುರ ತಾಲೂಕು ವ್ಯಾಪ್ತಿಯಲ್ಲಿ ಬರುವ ಪ್ರಸಿದ್ಧ ನಂದಿ ಬೆಟ್ಟದಲ್ಲಿರುವ ಭೋಗ ನಂದೀಶ್ವರ ದೇವಸ್ಥಾನಕ್ಕೆ ಹಲವಾರು ಭಕ್ತರು ಮತ್ತು ಪ್ರವಾಸಿಗರು ಬರುತ್ತಾರೆ. ಅಲ್ಲದೇ ಇಲ್ಲಿರುವ ಯೋಗ ನಂದೀಶ್ವರ ದೇವಸ್ಥಾನಕ್ಕೂ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
 
ಚಿಕ್ಕಬಳ್ಳಾಪುರ ಪಟ್ಟಣದಿಂದ 12 ಕಿ.ಮೀ. ದೂರದಲ್ಲಿರುವ ವಿವೇಕಾನಂದ ಜಲಪಾತ ಮಳೆಗಾಲದಲ್ಲಿ ಮೈದುಂಬಿಕೊಂಡು ಹಲವಾರು ಪ್ರವಾಸಿಗರನ್ನು ಆಕರ್ಷಿಸುತ್ತದೆ. ವಿಜಯನಗರ ಕಾಲದ ವಾಸ್ತುಶೈಲಿಯಲ್ಲಿ ನಿರ್ಮಾಣಗೊಮಡ ರಂಗಸ್ಥಳದಲ್ಲಿರುವ ಭಗವಾನ್ ವಿಷ್ಣು ದೇವಸ್ಥಾನವಿದೆ. ಕಪ್ಪು ಕಲ್ಲಿನಲ್ಲಿ ವಿಶೇಷ ಚಿತ್ರಗಳೊಂದಿಗೆ ಕೆತ್ತಲ್ಪಟ್ಟ ಈ ದೇವಸ್ಥಾನವು ವಿಶೇಷವಾಗಿದೆ.
 
ಚಿಕ್ಕಬಳ್ಳಾಪುರಕ್ಕೆ ಹತ್ತಿರದಲ್ಲಿರುವ ಮುದ್ದೇನಹಳ್ಳಿ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮಸ್ಥಳ. ಇಲ್ಲಿ ವಿಶ್ವೇಶ್ವರಯ್ಯನವರು ವಾಸಿಸುತ್ತಿದ್ದ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಮಾಡಲಾಗಿದೆ.
 
ಚಿತ್ರಾವತಿಯಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನ, ಎಲ್ಲೋಡೆ ಶ್ರೀ ಲಕ್ಷ್ಮೀ ಆದಿನಾರಾಯಣ ದೇವಸ್ಥಾನ ಮತ್ತು ಕಂದಾವರ ಕೆರೆ ಇಲ್ಲಿರುವ ಇನ್ನಿತರ ಸುಂದರ ತಾಣಗಳು.
 
ಇಲ್ಲಿರುವ ಬೆಟ್ಟಗಳಲ್ಲಿ ಸಾಹಸಿಗಳು ರಾಕ್ ಕ್ಲೈಂಬಿಂಗ್ ಮೌಂಟೇನಯರಿಂಗ್ ಮುಂತಾದ ಸಾಹಸಕ್ರೀಡೆಗಳಲ್ಲಿ ತೊಡಗಿಕೊಳ್ಳಬಹುದು. ಕರ್ನಾಟಕದ ರಾಜಧಾನಿ ಬೆಂಗಳೂರು ಚಿಕ್ಕಬಳ್ಳಾಪುರಕ್ಕೆ ಹತ್ತಿರದಲ್ಲಿರುವುದರಿಂದ ರೈಲು ಮತ್ತು ರಸ್ತೆ ಮೂಲಕ ಬರುವ ಪ್ರವಾಸಿಗರಿಗೆ ತುಂಬಾ ಅನುಕೂಲಕರವಾಗಿದೆ.
 
===ಜನಸಂಖ್ಯೆ===
೨೦೧೧ರ ಜನಗಣತಿಯಂತೆ ಜಿಲ್ಲೆಯ ಜನಸಂಖ್ಯೆ ೧೨,೫೫,೧೦೪. ಇದರಲ್ಲಿ ಪುರುಷರು ೬,೩೬,೪೩೭ ಹಾಗೂ ಮಹಿಳೆಯರು ೬,೧೮,೬೬೭. ಲಿಂಗಾನುಪಾತ ೯೭೨ ಸಾಂದ್ರತೆ ೨೯೬.ಸಾಕ್ಷರತೆ ಪ್ರಮಾಣ ೬೯.೭೬.
 
=== ಜಿಲ್ಲೆಯ ಪ್ರಮುಖ ತಾಲೂಕುಗಳು===
 
"https://kn.wikipedia.org/wiki/ಚಿಕ್ಕಬಳ್ಳಾಪುರ" ಇಂದ ಪಡೆಯಲ್ಪಟ್ಟಿದೆ