ಬೆಲ್ಲ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧ ನೇ ಸಾಲು:
[[ಚಿತ್ರ:Sa-indian-gud.jpg|thumbnail|right|ಭಾರತದ ಬೆಲ್ಲದ ಒಂದು ಪೆಂಟೆ]]
'''ಬೆಲ್ಲ'''ವು ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೇರಿಕಾದಲ್ಲಿ ಬಳಸಲಾಗುವ ಒಂದು ಸಾಂಪ್ರದಾಯಿಕ, ಶುದ್ಧೀಕರಿಸದ, ಅಪಕೇಂದ್ರಕವನ್ನು ಉಪಯೋಗಿಸದೆ ತಯಾರಿಸಲಾಗುವ [[ಸಕ್ಕರೆ]]. ಅದನ್ನು ನೇರ ಬಳಕೆಗಾಗಿ ತಯಾರಿಸಲಾಗುತ್ತದೆ. ಈ ಬಗೆಯ ಸಕ್ಕರೆಯು ಕಾಕಂಬಿ ಮತ್ತು ಹಳುಕುಗಳ ಬೇರ್ಪಡಿಸುವಿಕೆಯಿಲ್ಲದ [[ಕಬ್ಬಿನ ರಸ]]ದ ಸಾಂದ್ರಿತ ಉತ್ಪನ್ನ, ಮತ್ತು ಇದರ ಬಣ್ಣವು ಬಂಗಾರ ಕಂದು ಅಥವಾ ಗಾಢ ಕಂದು ಇರಬಹುದು. ಇದು ೫೦ ಪ್ರತಿಶತದವರೆಗೆ [[ಸೂಕ್ರೋಸ್]], ೨೦ ಪ್ರತಿಶತದವರೆಗೆ [[ವಿಲೋಮ ಸಕ್ಕರೆ]]ಗಳು, ೨೦ ಪ್ರತಿಶತದವರೆಗೆ ತೇವಾಂಶ, ಮತ್ತು ಉಳಿದಂತೆ ಬೂದಿ, ಪ್ರೋಟೀನ್‌ಗಳು ಹಾಗೂ ಕಬ್ಬಿನ ಸಿಪ್ಪೆಯ ನಾರುಗಳಂತಹ ಇತರ ಕರಗದ ವಸ್ತುವನ್ನು ಹೊಂದಿದೆ. ಇದು ದಕ್ಷಿಣ ಭಾರತದಲ್ಲಿ ಸಕ್ಕರೆಯ ಬದಲಿಗಾಗಿಗಾಗಿಯೂ ಬಳಸುತ್ತಾರೆ.
==ಬೆಲ್ಲ ತಯಾರಿಕೆ ವಿಧಾನ==
=ವಿವರ==
*ಕಬ್ಬಿನ ರಸದಿಂದ ತಯಾರಿಸಲಾಗುವ ಉತ್ಪನ್ನ ಬೆಲ್ಲ. ಸಂಸ್ಕರಿಸದ ಸಕ್ಕರೆ ಉತ್ಪನ್ನ ಎಂದೂ ಕರೆಯಲಾಗುತ್ತದೆ. ವಿಶ್ವದ ಬೆಲ್ಲ ಉತ್ಪಾದನೆಯಲ್ಲಿ ಭಾರತದ್ದು 70% ಪಾಲು ಬೆಲ್ಲದ ಉತ್ಪಾದನೆಯಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದೆ. ಅತಿ ಹೆಚ್ಚು ಸಕ್ಕರೆ ಬಳಸುವ ದೇಶ ಭಾರತಭಾರತದಲ್ಲಿ ಸುಮಾರು ನಲವತ್ತು ಲಕ್ಷ ಎಕರೆ ಭೂಮಿಯಲ್ಲಿ ಕಬ್ಬನ್ನು ಬೆಳೆಯಲಾಗುತ್ತಿದೆ. ಭಾರತದಲ್ಲಿ 3 ಕೋಟಿ ಟನ್ ಕಬ್ಬು ಬೆಳೆಯುತ್ತಿದ್ದು, ಅದರಲ್ಲಿ 36% ಬೆಲ್ಲ ತಯಾರಿಕೆಗೆ ಬಳಸಲಾಗುತ್ತಿದೆ.
 
*ಬೆಲ್ಲವನ್ನು ಮುಖ್ಯವಾಗಿ ಕಬ್ಬು ಹಾಗೂ ಖರ್ಜೂರದ ಮರದಿಂದ ತಯಾರಿಸಲಾಗುತ್ತದೆ. ಖರ್ಜೂರದ ರಸದಿಂದ ಮಾಡಲಾಗುವ ಬೆಲ್ಲ ಹೆಚ್ಚು ಬೆಲೆ ಹಾಗೂ ದೊರೆಯುವುದು ಕಡಿಮೆ. ಕರ್ನಾಟಕದಲ್ಲಿ ಕಬ್ಬಿನಿಂದ ಬೆಲ್ಲ ತಯಾರಿಸುವ ಪ್ರಕ್ರಿಯೆಯೇ ಇರುವುದು. ಪಶ್ಚಿಮ ಬಂಗಾಳ, ದಕ್ಷಿಣ ಭಾರತ, ಬಾಂಗ್ಲಾದೇಶ, ಪಾಕಿಸ್ತಾನ, ನೇಪಾಳ, ಶ್ರೀಲಂಕಾದಲ್ಲಿ ಇದನ್ನು ತಯಾರಿಸಲಾಗುತ್ತದೆ.
 
*ಬೆಲ್ಲ–ಸಂಪ್ರದಾಯ: ಮಹಾರಾಷ್ಟ್ರ ಹಾಗೂ ಕರ್ನಾಟಕದ ಕೆಲವು ಗ್ರಾಮಗಳಲ್ಲಿ ಮನೆಗೆ ಬಂದವರಿಗೆ ಬೇಸಿಗೆಯಲ್ಲಿ ಬೆಲ್ಲ ಮತ್ತು ನೀರನ್ನು ಕೊಡುವ ರೂಢಿಯಿದೆ. ಗುಜರಾತ್‌ನಲ್ಲಿ ದನಿಯಾ ಹಾಗೂ ಬೆಲ್ಲವನ್ನು ನಿಶ್ಚಿತಾರ್ಥ ಸಮಯದಲ್ಲಿ ನೀಡುತ್ತಾರೆ.
<ref>https://www.organicfacts.net/health-benefits/other/what-is-jaggery.html</ref>
<ref>19/07/2016 www.prajavani.net/article/ಬೆಲ್ಲ-ತಿನ್ನಬೇಕೇಕೆ</ref>
==ಬಾಹ್ಯ ಸಂಪರ್ಕಗಳು==
*jaggery automatic plant quality [[https://www.youtube.com/watch?v=UeLINkZYscg]]
"https://kn.wikipedia.org/wiki/ಬೆಲ್ಲ" ಇಂದ ಪಡೆಯಲ್ಪಟ್ಟಿದೆ