ಆಗ್ರಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೫೩ ನೇ ಸಾಲು:
 
'''ಆಗ್ರಾ''' ನಗರ [[ಭಾರತ]] ದೇಶದ ಉತ್ತರ ಪ್ರದೇಶ ರಾಜ್ಯದಲ್ಲಿರುವ ಒಂದು ಪ್ರಸಿದ್ಧ ಪ್ರವಾಸಿ ಸ್ಥಳ. ವಿಶ್ವ ವಿಖ್ಯಾತ [[ತಾಜ್ ಮಹಲ್]] ಇರುವ ಈ ಊರು ಜಗತ್ತಿನಾದ್ಯಂತ ಹೆಸರುವಾಸಿ.
==ಇತಿಹಾಸ==
ಆಗ್ರಾವು 1526 ರಿಂದ 1628ರವರೆಗೆ ಮೊಘಲ್ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಕಾಲದಲ್ಲಿ ಎಲ್ಲರ ಗಮನವನ್ನು ತನ್ನತ್ತ ಸೆಳೆಯಿತು. ಮೊಘಲ್ ಸಾಮ್ರಾಟ ಬಾಬರ್ 1526 ರಲ್ಲಿ ಆಗ್ರಾವನ್ನು ಈ ಸಾಮ್ರಾಜ್ಯದ ರಾಜಧಾನಿಯನ್ನಾಗಿ ಮಾಡಿದನು. ಮೊಘಲ್ ಸಾಮ್ರಾಟರು ಕಟ್ಟಡಗಳನ್ನು ನಿರ್ಮಿಸುವುದರಲ್ಲಿ ನಿಷ್ಣಾತರು. ಈ ನಗರವನ್ನು ಆಳಿದ ನಿಕಟ ಪೂರ್ವ ರಾಜ, ರಾಣಿಯರ ಅಥವಾ ಅಧಿಕಾರಿಗಳ ಹೆಸರಿನಲ್ಲಿ ಇವರು ನಿರ್ಮಿಸಿದ ಅತ್ಯಂತ ವೈಭವಯುತ ಸ್ಮಾರಕಗಳು, ಇಂದಿಗು ವಾಸ್ತುಶಿಲ್ಪದ ಹೆಗ್ಗುರುತುಗಳಾಗಿ ಉಳಿದುಕೊಂಡು, ಅವರ ನೈಪುಣ್ಯತೆಯನ್ನು ಇಂದಿನವರಿಗು ಸಾರಿ ಸಾರಿ ಹೇಳುತ್ತಿವೆ.
 
ಅದರಲ್ಲಿಯೂ ಚಕ್ರವರ್ತಿ ಶಾ ಜಹಾನ್ ತನ್ನ ಪ್ರೀತಿ ಪಾತ್ರ ಮಡದಿಗಾಗಿ ನಿರ್ಮಿಸಿದ, ಸರಿಸಾಟಿಯಿಲ್ಲದ ಪ್ರೀತಿಯ ಧ್ಯೋತಕವಾಗಿ ವಿಶ್ವದೆಲ್ಲೆಡೆ ಗುರುತಿಸಲ್ಪಟ್ಟಿರುವ ತಾಜ್ ಮಹಲ್ ಗೋರಿಯು ಅಪರಿಮಿತ ಖ್ಯಾತಿಯನ್ನು ತನ್ನ ಮುಡಿಗೇರಿಸಿಕೊಂಡು ನಿಂತಿದೆ. ಇದರ ಜೊತೆಗೆ ಅಕ್ಬರ್ ಚಕ್ರವರ್ತಿಯು ಆಗ್ರಾ ನಗರದ ಹೊರಭಾಗದಲ್ಲಿ ಆಗ್ರಾ ಕೋಟೆ ಮತ್ತು ಫತೇಪುರ್ ಸಿಕ್ರಿಗಳನ್ನು ನಿರ್ಮಿಸಿ ಈ ಊರಿಗೆ ಮತ್ತಷ್ಟು ಮೆರಗು ನೀಡಿದನು.
===ಹವಾಮಾನ===
ಆಗ್ರಾ ಶುಷ್ಕ ಹವಾಮಾನ ಹೊಂದಿದೆ. ಸಾಧಾರಣ ಚಳಿ, ದೀರ್ಘವಾದ, ಶುಷ್ಕ ಬೇಸಗೆ ಮತ್ತು ಕಡಿಮೆ ಅವಧಿಯ [[ಮಾನ್ಸೂನ್]] ಇಲ್ಲಿಯ ಹವಾಮಾನ ವೈಶಿಷ್ಟ್ಯ. ಇಲ್ಲಿಯ ಮಾನ್ಸೂನ್ ದೇಶದ ಉಳಿದೆಡೆಯಂತೆ ತೀಕ್ಷ್ಣವಾಗಿಲ್ಲ.
 
===ಜನಸಂಖ್ಯೆ===
೨೦೧೧ರ ಜನಗಣತಿಯಂತೆ ಆಗ್ರಾದ ಜನಸಂಖ್ಯೆ ೧೭,೭೫,೧೩೪. ೫೩% ಪುರುಷರು ಮತ್ತು ೪೭% ಮಹಿಳೆಯರು. ಸಾಕ್ಷರತೆಯ ಪ್ರಮಾಣ ೮೧%. [[ಹಿಂದೂ]], [[ಇಸ್ಲಾಂ ]]ಮತ್ತು [[ಜೈನ ]]ಧರ್ಮಗಳು ಮುಖ್ಯ ಧರ್ಮಗಳು.
{{bar box
Line ೭೪ ⟶ ೭೭:
}}
 
===ಚರಿತ್ರೆ===
ಆಗ್ರಾದ ಪ್ರದೇಶದ ಉಲ್ಲೇಖವು [[ಮಹಾಭಾರತ]] ಗ್ರಂಥದಲ್ಲಿದ್ದರೂ ೧೫೦೪ ರಲ್ಲಿ ದೆಹಲಿಯ ಸುಲ್ತಾನನಾದ [[ಸಿಕಂದರ್ ಲೋಧಿ]]ಯು ಸ್ಥಾಪಿಸಿದ ಎಂಬುದು ಈಗ ದೊರೆಯುವ ಸಾಕ್ಷ್ಯ. ಅವನ ಮಗ [[ಇಬ್ರಾಹಿಂ ಲೋಧಿ]]ಯು ಇದನ್ನು [[ಮೊದಲನೆಯ ಪಾಣಿಪತ್ ಯುದ್ಧ]] ದಲ್ಲಿ [[ಬಾಬರ]]ನಿಗೆ ಸೋಲುವವರೆಗೆ ಎಂದರೆ ೧೫೨೬ರ ವರೆಗೆ ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ. ೧೫೩೦ರಲ್ಲಿ ಬಾಬರ್‍ನ ನಿಧನದ ನಂತರ ಅವನ ಮಗ [[ಹುಮಾಯೂನ್]] [[ಶೇರ್ ಶಾಹ್]]‍ನಿಂದ ಭಾರತದ ಹೊರಗೆ ಓಡಿಸಲ್ಪಟ್ಟು ನಂತರ ವಿಜಯಿಯಾಗಿ ಪಟ್ಟವನ್ನೇರುವಾಗ ಅವನು ದೆಹಲಿಯನ್ನು ರಾಜಧಾನಿಯನ್ನಾಗಿಸಿಕೊಂಡ. ಹುಮಾಯೂನನ ಮಗ [[ಅಕ್ಬರ್]] ಪುನಃ ರಾಜಧಾನಿಯನ್ನು ಆಗ್ರಾಕ್ಕೆ ಸ್ಥಳಾಂತರಿಸಿದ. ಈ ರೀತಿ ಸ್ಥಳಾಂತರಿಸುವಾಗ ಹಳೆಯ ಆಗ್ರಾವನ್ನು ಬಿಟ್ಟು ಯಮುನಾ ನದಿಯ ಬಲದಂಡೆಯಲ್ಲಿ ಹೊಸ ನಗರವನ್ನು ನಿರ್ಮಿಸಿದ. ಆದುದರಿಂದ ಈ ನಗರಕ್ಕೆ ಅಕ್ಬರಾಬಾದ್ ಎಂಬ ಹೆಸರೂ ಇದೆ. ಇದರ ನಂತರ ಆಗ್ರಾದ ಸುವರ್ಣ ಯುಗ. [[ಅಕ್ಬರ್]],[[ಜಹಾಂಗೀರ್]], [[ಷಾ ಜಹಾನ್]] ನಂತಹ ಚಕ್ರವರ್ತಿಗಳು ಈ ನಗರದಿಂದ ದೇಶವನ್ನು ಆಳಿದರು. ಮುಂದೆ [[ಔರಂಗಜೇಬ]] ೧೬೫೩ರಲ್ಲಿ [[ಔರಂಗಾಬಾದ್]] ಗೆ ಸ್ಥಳಾಂತರಿಸುವವರೆಗೆ ಇದು ಭಾರತದ ರಾಜಧಾನಿಯಾಗಿತ್ತು. ಮೊಘಲರ ಅವನತಿಯ ನಂತರ ಈ ಪ್ರದೇಶ ೧೮೦೩ ರ ವರೆಗೆ ಮರಾಠರ ಸ್ವಾಧೀನವಿದ್ದು ಇದರ ಹೆಸರು ಪುನಃ ಆಗ್ರಾ ಎಂದು ಬದಲಾಯಿತು. ಮುಂದೆ ಇದು ಬ್ರಿಟಿಷರ ವಶವಾಯಿತು.ಇಲ್ಲಿರುವ [[ತಾಜ್ ಮಹಲ್]], [[ಆಗ್ರಾ ಕೋಟೆ]] ಹಾಗೂ [[ ಫತೇಪುರ್ ಸಿಕ್ರಿ ]]ವಿಶ್ವ ಪರಂಪರೆಯ ತಾಣಗಳಾಗಿ ಘೋಷಿತವಾಗಿವೆ.
 
===ಪ್ರಮುಖ ಸ್ಥಳಗಳು===
{{ಮುಖ್ಯ |ತಾಜ್ ಮಹಲ್}}
'''[[ತಾಜ್ ಮಹಲ್]]''' ಇದು ಪ್ರಪಂಚದ ಪ್ರಸಿದ್ಧ ಕಟ್ಟಡಗಳಲ್ಲಿ ಒಂದು. ಮುಸಲ್ಮಾನ ಶಿಲ್ಪಕಲೆಯ ಉತ್ಕೃಷ್ಟ ಉದಾಹರಣೆ.೧೬೫೩ರಲ್ಲಿ ನಿರ್ಮಾಣಗೊಂಡ ತಾಜ್ ಮಹಲ್ ಷಾ ಜಹಾನ್ ನಿಂದ ನಿರ್ಮಿಸಲ್ಪಟ್ಟಿತು.ಪೂರ್ಣವಾಗಿ ಅಮೃತಶಿಲೆಯಿಂದ ನಿರ್ಮಿತವಾದ ಇದರ ನಿರ್ಮಾಣ ಸಮಯ ಸುಮಾರು ೨೨ ವರ್ಷಗಳು.(೧೬೩೦ -೧೬೫೨). ಸುಮಾರು ೨೦ ಸಾವಿರ ಜನರ ಶ್ರಮದಿಂದ ಇದನ್ನು ನಿರ್ಮಿಸಲಾಗಿದೆ.
"https://kn.wikipedia.org/wiki/ಆಗ್ರಾ" ಇಂದ ಪಡೆಯಲ್ಪಟ್ಟಿದೆ