ಸಂತ ಜೋಸೆಫ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಪವಿತ್ರ ಬೈಬಲ್|ಲಿನಲ್ಲಿ]] [[ಜೋಸೆಫ್]] ಎಂಬ ಹೆಸರು ಹಲವು ಸಾರಿ ಪ್ರಸ್ತಾಪವಾಗುತ್ತದೆ. ಮೊತ್ತಮೊದಲಿಗೆ ಇದು ಕಾಣಿಸಿಕೊಳ್ಳುವುದು [[ಹಳೆಯ ಒಡಂಬಡಿಕೆ]]ಯಲ್ಲಿ. ದೇವರಿಂದ [[ಇಸ್ರೇಲ್]] ಎಂದು ಕರೆಸಿಕೊಳ್ಳುವ [[ಜಾಕೋಬ್]] ಎಂಬಾತನಿಗೆ ಮೊದಲ ಹೆಂಡತಿಯಿಂದ ಹತ್ತು ಮಕ್ಕಳು. ಆದರೆ ಮತ್ತೊಬ್ಬ ಹೆಂಡತಿ ರೇಚಲ್ ಗೆ ಮಕ್ಕಳೇ ಆಗಿರುವುದಿಲ್ಲ. ಆಗ ಅವಳು ಅಂದಿನ ಸಂಪ್ರದಾಯದಂತೆ ತನ್ನ ಜಾಗದಲ್ಲಿ ತನ್ನ ಆಪ್ತ ದಾಸಿಯನ್ನು ಬಿಮ್ಮನಸೆಯಾಗುವಂತೆ ಮಾಡಿ ಅವಳು ಹೆರುವ ವೇಳೆಗೆ ಕೂಸನ್ನು ತನ್ನ ಮಡಿಲಿಗೆ ಹಾಕಿಕೊಂಡು ತಾನು ತಾಯಿಯಾದೆ; ದೇವರು ನನ್ನ ಬಂಜೆತನವನ್ನು ನೀಗಿಸಿದರು ಎಂದು ಉದ್ಗರಿತ್ತಾಳೆ. ಅವಳ ಉದ್ಗಾರ ’ಯೋಸೆಫ್’ ಅಂದರೆ ’ನೀಗಿತು’ಎಂದರ್ಥ ಕೊಡುತ್ತದೆ. ಮಗುವನ್ನು ನೋಡಿ ಹಿರಿಯರು ಇಂಥ ಮಗು ಹತ್ತಾಗಲಿ ನೂರಾಗಲಿ ಎಂದು ಹರಸುತ್ತಾರೆ. ಅವರು ಆಗ ಹೇಳುವ ಮಾತು ’ಜೋ ಸೆಫ್’ ಅಂದರೆ ’ಇನ್ನೂ ಹೆಚ್ಚಲಿ’
[[ಯೇಸು ಕ್ರಿಸ್ತ]]ನ ಸಾಕು ತಂದೆ ಮತ್ತು ಗರ್ಭಿಣಿಯಾಗಿದ್ದ ಕನ್ಯೆ [[ಸಂತ ಮೇರಿ]]ಯನ್ನು ವಿವಾಹವಾಗಿ ಪತ್ನಿಯನ್ನಾಗಿ ಸ್ವೀಕರಸಿದ ಒಬ್ಬ ಆದರ್ಶಪ್ರಾಯ ವ್ಯಕ್ತಿ. ಮೂಲತಃ ಯೆಹೂದ್ಯ, ಕಾಯಕದಲ್ಲಿ ಬಡಗಿಯಾಗಿದ್ದ ಜೋಸೆಫನ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ.
ಆಮೇಲೆ ಜೋಸೆಫ್ ಬೆಳೆಯುತ್ತಾ ತನ್ನ ದಾಯಾದಿಗಳ ಅಸೂಯೆಗೊಳಗಾಗಿ [[ಈಜಿಪ್ಟ್]] ದೇಶಕ್ಕೆ ಗುಲಾಮನಂತೆ ಮಾರಲ್ಪಟ್ಟು ಮುಂದೆ ಅದೇ ದೇಶದ ಪ್ರಧಾನಮಂತ್ರಿಯಾಗುತ್ತಾನೆ ಎನ್ನುವುದು ಕತೆ.
ಹೊಸ ಒಡಂಬಡಿಕೆಯಲ್ಲಿ [[ಯೇಸುಕ್ರಿಸ್ತ]] [[ಶಿಲುಬೆ]]ಯ ಮೇಲೆ ಮೃತಿ ಹೊಂದಿದಾಗ ಅವನನ್ನು ಸಮಾಧಿ ಮಾಡಲು ಜೋಸೆಫ್ ಎಂಬ ಒಬ್ಬ ಕುಲೀನ ತನಗಾಗಿ ಕಾದಿರಿಸಿದ್ದ ಸಮಾಧಿಗುಹೆಯನ್ನು ಬಿಟ್ಟುಕೊಡುತ್ತಾನೆನ್ನುವುದು ಮತ್ತೊಂದು ಆಖ್ಯಾಯಿಕೆಯಾಗಿ ಮೂಡಿಬರುತ್ತದೆ.
ಕ್ರೈಸ್ತರು ಎಲ್ಲಕ್ಕಿಂತಲೂ ಮುಖ್ಯವಾಗಿ ಪರಿಭಾವಿಸುವ ಜೋಸೆಫ್ [[ಸಂತ ಮೇರಿ]]ಯ ಪತಿ. ದೇವರಿಂದಲೇ ಅನುಗ್ರಹೀತಳಾಗುವ ಮರಿಯಳಿಗೆ ಸಂಗಾತಿಯಾಗಿ ದೇವಕುಮಾರನಿಗೆ ಸಾಕುತಂದೆಯಾಗುವ ಈ ಜೋಸೆಫ್ ಅತ್ಯಂತ ನೀತಿವಂತ. ಮದುವೆಗೆ ಮೊದಲೇ ಬಸುರಾದ ಮರಿಯಳನ್ನು ಅವಮಾನಕ್ಕೆ ಗುರಿಮಾಡದ ಸಜ್ಜನ. ಯೇಸುಕ್ರಿಸ್ತ [[ಜೆರುಸಲೇಮ್|ಮಿನ]] ದೇವಾಲಯದಲ್ಲಿ ಕಳೆದುಹೋದಾಗ ಅತ್ಯಂತ ಅಕರಾಸ್ತೆಯಿಂದ ಹುಡುಕಿದಾತ. ಹೀಗೇಕೆ ಮಾಡಿದೆ ಎಂದು ದೇವಕುಮಾರನನ್ನು ಜಂಕಿಸಿ ಪ್ರಶ್ನಿಸಿದಾತ. ಯೇಸುವನ್ನು ಬಾಲ್ಯದಿಂದ ಯೌವನದವರೆಗೆ ಪೊರೆದು ಧಾರ್ಮಿಕ ಶಿಕ್ಷಣ, ವೃತ್ತಿ ಶಿಕ್ಷಣ ನೀಡಿದಾತ. ಪವಿತ್ರ ಬೈಬಲ್ ಹೇಳುವಂತೆ ಜೋಸೆಫ್ ಒಬ್ಬ ಬಡಗಿ. ಬಡಗಿಯೆಂದರೆ ಬರೀ ಮೇಜು ಕುರ್ಚಿ ಕಿಟಕಿ ಬಾಗಿಲು ಮಾತ್ರವಲ್ಲ ಮನೆಗಳನ್ನು ಕಟ್ಟುವಾತ ಎಂದು ಕೆಲ ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಏಕೆಂದರೆ ಯೇಸುಕ್ರಿಸ್ತನ ನಾಡಿನಲ್ಲಿ ಅಂದು ಮರದ ಮನೆಗಳೇ ರೂಢಿಯಲ್ಲಿತ್ತು. ಏನೇ ಆಗಲಿ ಜೋಸೆಫ್ ಒಬ್ಬ ಶ್ರಮಿಕ. ಕ್ರೈಸ್ತರು ಆತನನ್ನು ಸಂತನೆಂದು ಗೌರವಿಸಿ ವರ್ಷದಲ್ಲಿ ಎರಡು ಬಾರಿ ಆತನ ಹಬ್ಬವನ್ನು ಆಚರಿಸುತ್ತಾರೆ.
 
 
[[ವರ್ಗ:ಕ್ರೈಸ್ತ ಧರ್ಮದ ಸಂತರು]]
"https://kn.wikipedia.org/wiki/ಸಂತ_ಜೋಸೆಫ್" ಇಂದ ಪಡೆಯಲ್ಪಟ್ಟಿದೆ