ಅಂತಃಕಲಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಅಂತಃಕಲಹ'''ಗಳು ([[:w:List of civil wars|List of civil wars]]) ಒಂದೇ [[ದೇಶ]]ದ ಭಿನ್ನ ಗುಂಪುಗಳ ಮಧ್ಯೆ ರಾಜಕೀಯ ಶಕ್ತಿಗಾಗಿ ನಡೆಯುವ [[ಯುದ್ಧ]]ಗಳು. ಇಂತಹ ಕಲಹಗಳಿಂದ ಅನೇಕ ಸಾಮಾಜಿಕ ಬದಲಾವಣೆಗಳು ಉಂಟಾದಲ್ಲಿ ಅಂತಹವುಗಳನ್ನು [[ಕ್ರಾಂತಿ]]ಗಳೆಂದು ಪರಿಗಣಿಸಲಾಗುತ್ತವೆ. ಇವನ್ನು ಅಂತರ್ಯುದ್ಧ(ಸಿವಿಲ್ವಾರ್). ಎಂದೂ ಕರೆಯುತ್ತಾರೆ
==ಅಂತರ್ಯುದ್ಧಗಳು==
[[File:Canadian Military in Somalia 1992.jpg|thumb|right|೧೯೯೨ ರಲ್ಲಿ ಸೊಮಾಲಿಯಾದಲ್ಲಿ ನಡೆದ ಅಂತಃಕಲಹ]]
ಒಂದು ರಾಷ್ಟ್ರದ ರಾಜಕೀಯ ಪಕ್ಷ ಪ್ರತಿಪಕ್ಷಗಳು ಅಧಿಕಾರವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಕಾದಾಟವನ್ನು ಪ್ರಾರಂಭಿಸುತ್ತವೆ. ಇಂಥ ಕಾದಾಟಕ್ಕೆ ಅಂತರ್ಯುದ್ಧವೆಂದು ಹೆಸರು(ಸಿವಿಲ್ವಾರ್). ರೋಸಸ್ ಕದನಗಳು, ಯುರೋಪಿನಲ್ಲಿ ನಡೆದ ಫೊಂಡೆ ಮತ್ತು ಲೀಗ್ ಕದನ ಹಾಗೆಯೆ ಅಮೆರಿಕ ಮತ್ತು ಸ್ಪೇನ್ಗಳಲ್ಲಿ ನಡೆದ ಯುದ್ಧಗಳು ಮತ್ತು 20ನೆಯ ಶತಮಾನದಲ್ಲಿ ಚೀನದಲ್ಲಿ ಕೋಮಿನ್ಟಾಂಗ್ ಮತ್ತು ಕಮ್ಯೂನಿಸ್ಟರ ನಡುವೆ ನಡೆದವು_ಇವು ಅಂತರ್ಯುದ್ಧದ ಚರಿತ್ರಾರ್ಹ ನಿದರ್ಶನಗಳು. ಇಂಗ್ಲೆಂಡಿನಲ್ಲಿ ಒಂದನೆಯ ಚಾಲ್ರ್ಸ್ ಚಕ್ರವರ್ತಿ ಮತ್ತು ಪಾರ್ಲಿಮೆಂಟ್ಗಳ ಮಧ್ಯೆ ನಡೆದ ಹೋರಾಟವನ್ನು ಅಂತರ್ಯುದ್ಧ ಎಂಬ ಹೆಸರಿನಿಂದ ಕರೆಯಲಾಗಿದೆ. ಸಂಯುಕ್ತಸಂಸ್ಥಾನಗಳಲ್ಲಿ ಉತ್ತರ ಮತ್ತು ದಕ್ಷಿಣ ರಾಜ್ಯಗಳ ಮಧ್ಯೆ ನಡೆದ ಹೋರಾಟವನ್ನು ಅಮೆರಿಕದ ಅಂತರ್ಯುದ್ಧ ಎಂದು ಕರೆಯಲಾಗಿದೆ.
ಪ್ರಪಂಚದ ಎರಡನೆಯ ಘೋರ ಯುದ್ಧಾನಂತರ ಅಂತರ್ಯುದ್ಧದ ವ್ಯಾಪಕತೆ ವಿಶೇಷವಾಗಿ ಹೆಚ್ಚಿತು. ಕೊನೆಯ ಪಕ್ಷ ಅಂತರ್ಯುದ್ಧವನ್ನು ಹೂಡಿ 12 ರಾಷ್ಟ್ರಗಳು ತಮ್ಮ ಸರ್ಕಾರದ ಸ್ವರೂಪಗಳನ್ನು ಬದಲಾಯಿಸಿವೆ. ಅಂಗೋಲ, ಕಾಂಬೋಡಿಯ, ಕಾಂಗೋ, ಕ್ಯೂಬ, ವಿಯಟ್ನಾಮ್, ಲಾವೋಸ್, ಸೈಪ್ರೆಸ್, ನ್ಯೂಗಿನಿ, ಯೆಮೆನ್ ಆದಿಯಾಗಿ ಹನ್ನೊಂದು ರಾಷ್ಟ್ರಗಳು 1964ನೆಯ ಇಸವಿಯೊಂದರಲ್ಲೇ ಅಂತರ್ಯುದ್ಧದ ಮೂಲಕ ಬೇರೆ ಸರ್ಕಾರಗಳನ್ನು ರಚಿಸಿಕೊಂಡವು. ಇಂಥ ಘಟನೆಗಳಲ್ಲಿ ನಾಗರಿಕರೂ ಭಾಗವಹಿಸುವುದರಿಂದ ಮತ್ತು ಹಿಂಸಾಕೃತ್ಯಗಳು ನಡೆಯುವುದರಿಂದ ಇವಕ್ಕೆ ಅಂತರ್ಯುದ್ಧಗಳೆಂದು ಹೆಸರಾಗಿದೆ. ಅಂತರ್ಯುದ್ಧ ಸಮಾಜದ ಚೌಕಟ್ಟಿನೊಳಗೆ ಒಂದೇ ಗುಂಪಿನ ಮಧ್ಯದಲ್ಲೂ ನಡೆಯಬಹುದು. ಅದು ರಾಜಕೀಯ, ಮತೀಯ, ಸಾಮಾಜಿಕ ಅಥವಾ ಆರ್ಥಿಕ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಅಥವಾ ಇವುಗಳಲ್ಲಿ ಯಾವುದಾದರೂ ಒಂದೇ ಕ್ಷೇತ್ರದ ಆಧಾರದ ಮೇಲೆ ರೂಪುಗೊಳ್ಳಬಹುದು.
"https://kn.wikipedia.org/wiki/ಅಂತಃಕಲಹ" ಇಂದ ಪಡೆಯಲ್ಪಟ್ಟಿದೆ