ಎಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್: ಮೊಬೈಲ್ ಅನ್ವಯ ಸಂಪಾದನೆ
೮೨ ನೇ ಸಾಲು:
 
== ಎಲೆಗಳ ಉಪಯೋಗಗಳು ==
ಹಲವು ಎಲೆಗಳನ್ನು [[ತರಕಾರಿ ]]ಯಾಗಿ ಉಪಯೋಗಿಸುತ್ತೇವೆ. ಕರಿಬೇವು, ಕೊತ್ತಂಬರಿ, ಪುದೀನ ಮುಂತಾದವು ಆಹಾರಕ್ಕೆ ತಕ್ಕ ವಾಸನೆಯನ್ನು ಕೊಟ್ಟು, ಜೀರ್ಣ ಶಕ್ತಿಯನ್ನೂ ಹೆಚ್ಚಿಸುವುವು. ಟೀ ಗಿಡದ ಎಲೆಗಳನ್ನು ಪಾನೀಯಕ್ಕೆ ಬಳಸುವುದು ಸಾಮಾನ್ಯವಾಗಿದೆ. ಹೊಗೆಸೊಪ್ಪು, ಗಾಂಜಾ ಮುಂತಾದ ಎಲೆಗಳನ್ನು ಹೊಗೆಬತ್ತಿಯಾಗಿ ಸೇವಿಸುತ್ತಾರೆ. ವೀಳೆಯದೆಲೆಗಳಿಗೆ ಸಮಾಜದಲ್ಲಿರುವ ಪ್ರಾಮುಖ್ಯ ಎಲ್ಲರಿಗೂ ತಿಳಿದಿದೆ. ಬಾಳೆ, ಮುತ್ತುಗ ಕಂಚುವಾಳ-ಇವುಗಳನ್ನು ಊಟಮಾಡಲು ತಟ್ಟೆಗೆ ಬದಲಾಗಿ ಉಪಯೋಗಿಸುತ್ತೇವೆ. ಕತ್ತಾಳೆ, ಬಾಳೆಗಳಿಂದ ಬರುವ ನಾರನ್ನು ದಾರ ದಂತೆ ಉಪಯೋಗಿಸುತ್ತಾರೆ. ಇಷ್ಟಲ್ಲದೆ, ಅನೇಕ ಜಾತಿಯ ಗಿಡಗಳ ಎಲೆಗಳನ್ನು ಔಷಧಿ ಯಾಗಿ ಎಲ್ಲ ದೇಶಗಳಲ್ಲಿಯೂ ಬಳಸುತ್ತಾರೆ. ಬೆಲ್ಲಡೋನ, ಡಿಜಿಟ್ಯಾಲಿಸ್, ಅಟ್ರೋಪೀನ್ ಮುಂತಾದವು ಪರ್ಣಜನ್ಯ ಔಷಧಿಗಳೇ. ಯೂಕಲಿಪ್ಟಸ್ ಮತ್ತು ಮಜ್ಜಿಗೆ ಹುಲ್ಲಿನಿಂದ ಎಣ್ಣೆಯನ್ನು ತೆಗೆಯುವರು. ಅಲ್ಲದೆ ಎಲೆಯ ಹರಿತ್ತನ್ನು ದಂತಧಾವನ ಸರಿಗಳಲ್ಲೂ ಕೆಲವು ಪದಾರ್ಥಗಳಿಗೆ ಬಣ್ಣ ಕಟ್ಟುವುದಕ್ಕೂ ಉಪಯೋಗಿಸುವುದುಂಟು. ಹೊಂಗೆ, ಗ್ಲಿರಿಸಿಡಿಯ ಎಲೆಗಳು ಒಳ್ಳೆಯ ಹಸಿರುಗೊಬ್ಬರವಾಗುವುದು. ಹಬ್ಬದ ದಿವಸಗಳಲ್ಲಿ ಮಾವಿನ ಎಲೆಗಳಿಂದ ಮನೆಗೆ ತೋರಣವನ್ನು ಕಟ್ಟುತ್ತೇವೆ. ಉಗಾದಿ ಹಬ್ಬದಲ್ಲಿ ಬೇವಿಗೆ ಪ್ರಾಧಾನ್ಯವಿದೆ.
 
== ಎಲೆಗಳ ವಿನ್ಯಾಸ ==
"https://kn.wikipedia.org/wiki/ಎಲೆ" ಇಂದ ಪಡೆಯಲ್ಪಟ್ಟಿದೆ