ಶಾಂತವೇರಿ ಗೋಪಾಲಗೌಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು added Category:ಜನ using HotCat
No edit summary
೧ ನೇ ಸಾಲು:
{{Wikify}}
 
'''ಶಾಂತವೇರಿ ಗೋಪಾಲಗೌಡ'''
ಎತ್ತರದ ನಿಲುವು; ದುಂಡು ಮುಖ; ಉದ್ದವಲ್ಲದ ಮುದ್ದಾದ ಮೂಗು; ಅಗಲವಾದ ಹಣೆ; ಕೂದಲು ಕಡಿಮೆಯಾದ ದೊಡ್ಡ ತಲೆ; ವಿಶಾಲವಾದ ಕೆಂಗಣ್ಣುಗಳು; ಕಂದು ಬಣ್ಣ; ಶುಭ್ರವಾದ ಬಿಳಿಯ ಖಾದಿ ಜುಬ್ಬ, ಅಚ್ಚುಕಟ್ಟಾಗಿ ಉಟ್ಟ ಕಚ್ಚೆಪಂಚೆ; ಗಂಭೀರ ಮುಖ ಮುದ್ರೆ; ಮಾತನಾಡಲು ಮೆಲ್ಲಗೆ ಎದ್ದು ನಿಂತರು; ಎಲ್ಲರ ಕಣ್ಣು,ಕಿವಿ ಅತ್ತ ತಿರುಗಿದವು! ಆನೆ ಹೆಜ್ಜೆ ಇಟ್ಟ ಹಾಗೆ ಖಚಿತವಾದ ಮಾತು; ಶ್ರೋತೃಗಳನ್ನು ಸೆರೆಹಿಡಿಯುವ ವಾದಸರಣಿ. ಅವರೇ ಶಾಂತವೇರಿ ಗೋಪಾಲಗೌಡರು. ವಿಧಾನಸಭಾಧಿವೇಶನದ ಸಂದರ್ಭಗಳಲ್ಲಿ ಕಂಡು ಬರುತ್ತಿದ್ದ ನಿತ್ಯಸ್ಮರಣೀಯ ದೃಶ್ಯವಿದು.
 
ಅಪೂರ್ವ ವ್ಯಕ್ತಿತ್ವ
ರಾಷ್ಟ್ರ, [[ರಾಜ್ಯ]], ಸಮಾಜ, ರಾಜಕೀಯ, ಆಡಳಿತ, ಸಾಹಿತ್ಯ, ಸಂಸ್ಕೃತಿ, ಕಲೆ, ಉದ್ಯಮ, ಅರ್ಥವ್ಯವಸ್ಥೆ – ಅದು ಯಾವುದೇ ವಿಚಾರವಿರಲಿ ಅದರ ಬಗ್ಗೆ ಖಚಿತ, ಸದೃಢ, ಸ್ಪಷ್ಟ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದು ಗೋಪಾಲಗೌಡರ ಪ್ರವೃತ್ತಿಯಾಗಿತ್ತು. ಸತ್ಯವನ್ನು ಹೇಳುವುದರಲ್ಲಿ ಸಂಕೋಚವಿರಲಿಲ್ಲ; ಮಾತಿಗೆ ಮಂತ್ರ ಶಕ್ತಿಯನ್ನು ಕೊಡುವ ವ್ಯಕ್ತಿತ್ವದ ಹಿನ್ನೆಲೆ – ಅದಕ್ಕಾಗಿ ಅವರ ಮಾತಿಗೆ ತುಂಬ ಬೆಲೆ. ಅಧಿಕಾರಸ್ಥ ಸರ್ಕಾರ ತಲ್ಲಣಗೊಳ್ಳುವಂತಹ ಗರ್ಜನೆ; ವೈರಿಯೂ ಒಪ್ಪುವಂತಹ ವಿಚಾರಧಾರೆ.
 
ಉಗ್ರವಾದಿಯಾಗಿದ್ದ ಅವರಿಗೆ ಕೆಲವೊಂದು ಸಂದರ್ಭಗಳಲ್ಲಿ ಶೀಘ್ರಕೋಪ ಉಕ್ಕಿ ಬರುತ್ತಿತ್ತಾದರೂ ಅದು ಆಧಾರರಹಿತ ವಾಗಿರುತ್ತಿರಲಿಲ್ಲ.