ಕೋಶ ವಿಭಜನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೫ ನೇ ಸಾಲು:
ಈ ಹಂತದಲ್ಲಿ ವರ್ಣತಂತುಗಳ ಎರಡು ತಂಡಗಳು ವಿರುದ್ಧ ದಿಕ್ಕುಗಳಿಗೆ ಚಲಿಸುತ್ತವೆ. ಆದರೆ ಎರಡು ಕ್ರೊಮ್ಯಾಟಿಡ್ ಗಳನ್ನು ಹಿಡಿದುಕೊಂಡಿರುವ ಸೆಂಟ್ರೊಮಿಯರ್ ವಿಭಜಿಸುವುದಿಲ್ಲ.ಅನಫೆಸ್ ೧ ವೈಶಿಶ್ಟ್ಯವೇನೆಂದರೆ,ವರ್ಣ ತಂತುಗಳು ಏಕಗುಣಿತ ತಂಡಗಳಾಗಿ ಬೇರ್ಪಡುತ್ತವೆ.ಒಂದೊಂದು ಏಕಗುಣಿತ ವರ್ಣತಂತುಗಳ ತಂಡ ಒಂದೊಂದು ಧ್ರುವವನ್ನು ಸೇರುತ್ತವೆ.ಅಂದರೆ ದ್ವಿಗುಣಿತ ವರ್ಣತಂತುಗಳು ಏಕಗುಣಿತವಾಗುವುದು.ಅಡ್ಡ ಹಾಯುವಿಕೆಯಿಂದ ಏಕಗುಣಿತ ವರ್ಣತಂತುತಳಲ್ಲಿನ ಜೀನ್ ಗಳ ಜೋಡಣೆ ತಂದೆತಾಯಿಗಳ ವರ್ಣತಂತುಗಳಲ್ಲಿರುವ ಜೀನ್ ಗಳ ಜೋಡಣೆಗಿಂತ ಭಿನ್ನವಾಗಿರುತ್ತದೆ.
 
===ಟೀಲೊಫೇಸ್===
ಈ ಹಂತದಲ್ಲಿ ಸಮಾನಾಂತರ ವರ್ಣತಂತುಗಳು ವಿರುದ್ದ ಧ್ರುವಗಳನ್ನು ಸೇರುತ್ತವೆ.ಇವು ಏಕಗುಣಿತವಾಗಿದ್ದರೂ ಕ್ರೊಮ್ಯಟಿಡ್ ಗಳನ್ನು ಬೇರ್ಪಟ್ಟಿರುವುದಿಲ್ಲ.ಅಡ್ಡಹಾಯುವಿಕೆಯಿಂದಾಗಿ ಇವು ಒಂದೇ ರೀತಿಯ ಜೀನ್ ಗಳನ್ನು ಹೊಂದಿರುವುದಿಲ್ಲ. ಈ ಕ್ರೊಮ್ಯಾಟಿಡ್ ಗಳನ್ನು ಬೇರ್ಪಡಿಸಲು ಮಿಯಸಿಸ್ ೨ ವಿಭಜನೆ ನಡೆಯುವುದು.ಪ್ರತಿಯೊಂದು ಮರಿಕೋಶದ ಎರಡೂ ಧ್ರುವಗಳಲ್ಲಿರುವ ವರ್ಣತಂತುಗಳು ಸುರುಳಿ ಬಿಚ್ಚಿಕೊಂಡು ನೀಳವಾದ ತೆಳುವಾದ ದಾರಗಳಂತೆ ಪರಿವರ್ತನೆಗೊಳ್ಳುತ್ತದೆ.ಕೋಶ ಕೇಂದ್ರದ ಪೊರೆ ಪುನರ್ರಚಿತವಾಗುತದೆ. ಎರಡೂ ಧ್ರುವಗಳಲ್ಲೂ ಕಿರುಕೋಶಕೇಂದ್ರಗಳು ರೂಪುಗೊಳ್ಳುತವೆ.ಹೀಗೆ ಎರಡು ಕೋಶ ಕೇಂದ್ರ ಗಳು ರೂಪುಗೊಳ್ಳುತ್ತಿದ್ದಂತೆ ಕೋಶ ರಸ ವಿಭಜನೆ ಉಂಟಾಗಿ ಎರಡು ಏಕಗುಣಿತ ಮರಿಕೋಶಗಳು ರೂಪುಗೊಳ್ಳುತ್ತವೆ.
ಹೊಸದಾಗಿ ರೊಪುಗೊಂಡ ಎರಡು ಏಕಗುಣಿತ ಮರಿಕೋಶಗಳಲ್ಲಿ ಮಿಯಾಸಿಸ್ ೨ ಏಕಕಾಲದಲ್ಲಿ ಪ್ರಾರಂಭವಾಗುತ್ತದೆ.
"https://kn.wikipedia.org/wiki/ಕೋಶ_ವಿಭಜನೆ" ಇಂದ ಪಡೆಯಲ್ಪಟ್ಟಿದೆ