ಆಫ್ರಿಕಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೩೨ ನೇ ಸಾಲು:
 
*ಇಪ್ಪತ್ತನೇ ಶತಮಾನದ ಆರಂಭದಲ್ಲಿ ಆಫ್ರಿಕಾದ ವಸಾಹತು ರಾಷ್ಟ್ರದೊಳಗೆ ಬಂಡವಾಳದ ಬೃಹತ್ ಪ್ರಮಾಣದಲ್ಲಿ ಹರಿಯತೊಡಗಿತು. ಈ ಮೊದಲು ಆಫ್ರಿಕಾದ ರೈತನು ತನ್ನ ಜೀವನೋಪಾಯಕ್ಕಾಗಿ ಕೃಷಿಯ ಮೇಲೆ ಅವಲಂಬಿತನಾಗಿದ್ದನು. ವಸಾಹತುಶಾಹಿಯ ಪ್ರವೇಶದಿಂದಾಗಿ ಆಫ್ರಿಕಾದ ಹಲವು ರಾಷ್ಟ್ರಗಳಲ್ಲಿ ರಪ್ತು ಮಾಡುವ ಬೆಳೆಗಳ ಉತ್ಪಾದನೆಗೆ ತಳಪಾಯ ಹಾಕಲಾಯಿತು. ಈಜಿಪ್ಟ್ನಲ್ಲಿ ಹತ್ತಿ, ಸೆನೆಗಲ್ನಲ್ಲಿ ಕಡ್ಲೆಕಾಯಿ ಮತ್ತು ನೈಜೀರಿಯಾದಲ್ಲಿ ಕೋಕೋ ಮತ್ತು ತಾಳೆ ಎಣ್ಣೆ, ಇತ್ಯಾದಿ. ದಕ್ಷಿಣ ಆಫ್ರಿಕಾದಲ್ಲಿ ಚಿನ್ನ ಮತ್ತು ವಜ್ರ ಗಣಿಗಾರಿಕೆಗೆ ಪ್ರಾಶಸ್ತ್ಯ ನೀಡಲಾಯಿತು. ಇದರಿಂದಾಗಿ ಈ ರಾಷ್ಟ್ರಗಳ ಆಥರ್ಿಕತೆಯು ವಿಶ್ವ ಆಥರ್ಿಕತೆಯೊಂದಿಗೆ ಕೊಂಡಿ ಏರ್ಪಡಿಸಿಕೊಂಡಿತು. ಆಫ್ರಿಕಾವನ್ನು ವಿಶ್ವ ಮಾರುಕಟ್ಟೆಗೆ ಎಳೆದು ತಂದು ಅಲ್ಲಿನ ಸಾರಿಗೆ ಮತ್ತು ಸಂಪರ್ಕವನ್ನು ಅದರ ಸಂಪತ್ತನ್ನು ಹೊರಸಾಗಿಸುವ ಅವಶ್ಯಕತೆಗನುಗುಣವಾಗಿ ಅಭಿವೃದ್ಧಿ ಗೊಳಿಸಿದವು. ನೈಸಗರ್ಿಕ ಮತ್ತು ಮಾನವ ಸಂಪನ್ಮೂಲಗಳನ್ನು ಹಿಗ್ಗಾ ಮುಗ್ಗಾ ದೋಚಲಾಯಿತು. ಆರಂಭದಲ್ಲಿ ಯೂರೋಪಿಯನ್ ಕಬಳಿಕೆದಾರರು 780 ಲಕ್ಷ ಹೆಕ್ಟೇರ್ ಭೂಮಿಯನ್ನು ಆಕ್ರಮಿಸಿಕೊಂಡಿದ್ದರು. ಫಾರ್ಮನೀರ್ ಕಂಪನಿಯೊಂದೇ 1.4 ಲಕ್ಷ ಭೂಮಿಯನ್ನು ಆಕ್ರಮಿಸಿಕೊಂಡಿತ್ತು. 1913 ರ ಹೊತ್ತಿಗೆ ಮೊರಾಕ್ಕೋದಲ್ಲಿ 1.0 ಲಕ್ಷ ಹೆಕ್ಟೇರ್ ಭೂಮಿಯನ್ನು ವಿದೇಶಿ ಕಂಪನಿಗಳು ಕಬಳಿಸಿದ್ದವು.
 
*ಮೊದಲನೆ ವಿಶ್ವ ಮಹಾಯುದ್ದ ಜರುಗಲು ಆಫ್ರಿಕಾದಲ್ಲಿನ ವಸಾಹತುಗಳಿಗಾಗಿ ಸಾಮ್ರಾಜ್ಯಶಾಹಿ ದೇಶಗಳ ನಡುವೆ ನಡೆದ ಕಿತ್ತಾಟವೂ ಒಂದು ಪ್ರಮುಖ ಕಾರಣವಾಗಿತ್ತು. ಸೂಯೆಜ್ ಕಾಲುವೆ ನಿಮರ್ಾಣ ಮಾಡಿ ತಮ್ಮ ವ್ಯಾಪಾರಕ್ಕಾಗಿ ಈ ಜಲ ಮಾರ್ಗವನ್ನು ಬಳಸಿಕೊಂಡು ಬ್ರಿಟಿಷರು ಮತ್ತು ಫ್ರೆಂಚರು ವ್ಯಾಪಾರ ದ್ವಿಗುಣ ಮಾಡಿಕೊಳ್ಳಲು ಯೋಜಿಸಿದ್ದರು. ಆದರೆ ಜರ್ಮನ್-ತುರ್ಕರು ಇದನ್ನು ಬಲವಾಗಿ ವಿರೋಧಿಸಿದರೂ, ಈ ಪ್ರತಿರೋಧವನ್ನು ಯಶಸ್ವಿಯಾಗಿ ಹತ್ತಿಕ್ಕಲಾಯಿತು.
 
Line ೪೪೦ ⟶ ೪೪೧:
*ಪ್ರಥಮ ಮಹಾಯುದ್ದ ಪರಿಣಾಮ ಆಫ್ರಿಕಾದ ರಾಜಕೀಯ ಭೂಪಟವನ್ನು ಪುನರ್-ರಚಿಸಲಾಯಿತು. ಈ ಮೊದಲು ಜರ್ಮನಿಯ ತೆಕ್ಕೆಯಲ್ಲಿದ್ದ ವಸಾಹತು ಪ್ರದೇಶಗಳನ್ನು 'ಲೀಗ್ ಆಫ್ ನೇಷನ್' ಮುಖಾಂತರ ಇಂಗ್ಲೆಂಡ್, ಫ್ರಾನ್ಸ್, ಬೆಲ್ಜಿಯಂಗಳಿಗೆ ವಹಿಸಿಕೊಡಲಾಯಿತು. ದಕ್ಷಿಣ ಆಫ್ರಿಕಾ ಒಕ್ಕೂಟ, ಟೋಗೋ ಮತ್ತು ಕೆಮರೂನ್ಗಳ 'ಲೀಗ್ ಆಫ್ ನೇಷನ್'ನ ಸದಸ್ಯತ್ವವನ್ನು ರದ್ದುಗೊಳಿಸಿ ಅವುಗಳನ್ನು ಇಂಗ್ಲೆಂಡ್ ಮತ್ತು ಫ್ರಾನ್ಸ್ಗಳಿಗೆ ಹಂಚಲಾಯಿತು.
*ಪ್ರಥಮ ವಿಶ್ವ ಯುದ್ದಾನಂತರ ವಿದೇಶಿ ಬಂಡವಾಳವು ಆಫ್ರಿಕಾದ ರಾಷ್ಟ್ರಗಳಲ್ಲಿ ಸ್ವೇಚ್ಛಾಚಾರದಿಂದ ಹರಿದಾಡಲಾರಂಭಿಸಿತು. ವಸಾಹತುಶಾಹಿ ರಾಷ್ಟ್ರಗಳು ಹಳೆಯ ಬಂಡವಾಳಶಾಹಿ-ಪೂರ್ವ ಸಂಬಂಧಗಳನ್ನೇ ಮುಂದುವರಿಸಲು ಯತ್ನಿಸಿದ್ದವು. ಆ ರಾಷ್ಟ್ರಗಳಲ್ಲಿ ದೇಶೀಯ ಬಂಡವಾಳಶಾಹಿಯು ಬೆಳೆಯದಂತೆ ವ್ಯವಸ್ಥಿತವಾಗಿ ನೋಡಿಕೊಳ್ಳಲಾಯಿತು. ಪಾಳೇಗಾರಿ ಮತ್ತು ಪಾಳೇಗಾರಿ-ಪೂರ್ವ ಶೋಷಣೆಯ ವಿಧಾನಗಳನ್ನು ಅನುಸರಿಸಲಾಯಿತು. ಗಣಿಗಾರಿಕೆ, ಮತ್ತು ಸಣ್ಣ ಕೈಗಾರಿಕೆಗಳನ್ನು ಹೊರತುಪಡಿಸಿದರೆ, ಇನ್ನಾವುದೇ ಬೃಹತ್ ಕೈಗಾರಿಕಾ ರಂಗದಲ್ಲಿ ದೇಶೀಯ ಬಂಡವಾಳವು ತಲೆ ಎತ್ತದಂತೆ ಸಾಮ್ರಾಜ್ಯಶಾಹಿ ರಾಷ್ಟ್ರಗಳು ಕಠಿಣ ಕ್ರಮ ಕೈಗೊಂಡವು. ಏಕಮುಖ ಕೃಷಿ ಮತ್ತು ಕಚ್ಚಾ ವಸ್ತು ತಯಾರಿಕೆ ಆಧಾರಿತ ಆಥರ್ಿಕತೆಯನ್ನು ವಸಾಹತು ಶಾಹಿ ರಾಷ್ಟ್ರಗಳು ಬಲಗೊಳಿಸಿದವು. ಆಫ್ರಿಕಾದ ಸಮಾಜದಲ್ಲಿ ಆಂತರಿಕವಾಗಿ ಪ್ರಮುಖ ಬದಲಾವಣೆಗಳು ಜರುಗತೊಡಗಿದವು. ಅತಿ ಹೆಚ್ಚು ಹಿಂದುಳಿದ ಆಫ್ರಿಕಾದಲ್ಲಿ ಬಂಡವಾಳಶಾಹಿ-ಪೂರ್ವದ ಸಂಬಂಧಗಳ ಮೇಲೆ ಪ್ರಹಾರಗಳು ಹೆಚ್ಚಾದವು. ಈ ಹಂತದಲ್ಲಿ ಬಂಡವಾಳಶಾಹಿ ವ್ಯವಸ್ಥೆಯ ಉದ್ದಿಮೆದಾರ ಮತ್ತು ಕಾಮರ್ಿಕ ವರ್ಗಗಳು ಅಸ್ತಿತ್ವಕ್ಕೆ ಬಂದವು.
 
==ಆಫ್ರಿಕಾದ ಸ್ವಾತಂತ್ರ್ಯ ಹೋರಾಟಗಳು==
"https://kn.wikipedia.org/wiki/ಆಫ್ರಿಕಾ" ಇಂದ ಪಡೆಯಲ್ಪಟ್ಟಿದೆ