ಲೋಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 114 interwiki links, now provided by Wikidata on d:q11426 (translate me)
೩ ನೇ ಸಾಲು:
 
== ರಾಸಾಯನಿಕ ವೈಶಿಷ್ಟ್ಯಗಳು ==
I. ಲೋಹಗಳು ಇಲೆಕ್ಟ್ರಾನ್ ದಾನಿಗಳು ಆದುದರಿಂದ ಇವುಗಳು ವಿದ್ಯುತ್ ಧನೀಯ (electro Positive)ವಾಗಿರುತ್ತದೆ.
II. ಲೋಹಗಳು ಸಾಮಾನ್ಯವಾಗಿ ಇಲೆಕ್ಟ್ರಾನ ಬಂಧಗಳನ್ನು(Ionic bonding) ಉಂಟುಮಾಡುತ್ತದೆ
III. ಸಾಮಾನ್ಯವಾಗಿ ಸಾರತೆ ಕಡಿಮೆ ಇರುವ ಆಮ್ಲಗಳಿಂದ(dilute acids) ಹೈಡ್ರೋಜನ್ನ್ನು ಸ್ಥಾನ ಪಲ್ಲಟಗೊಳಿಸುತ್ತದೆ
IV. ಲೋಹಗಳ ಆಕ್ಸೈಡ್ ಗಳು ಪ್ರತ್ಯಾಮ್ಲೀಯ ಗುಣವನ್ನು ಹೊದಿರುತ್ತವೆ. ಆದುದರಿಂದ ಕೆಂಪು ಲಿಟ್ಮಸ್ ನ್ನು ನೀಲಿ ಮಾಡುತ್ತದೆ.
V. ಲೋಹಗಳ ಆಕ್ಸೈಡ್ ಗಳು ಕೆಲವು ಜಲೀಯ ದ್ರಾವಣಗಳು ಸತುವಿನೊಂದಿಗೆ ವರ್ತಿಸಿ ಹೈಡ್ರೋಜನ್ ಅನಿಲವನ್ನು ಕೊಡುತ್ತದೆ.
VI. ಲೋಹಗಳೋಡನೆ ಗಾಳಿಯ ವರ್ತನೆ: ಲೋಹದಿಂದ ಮಾಡಿದ ಅನೇಕ ವಸ್ತುಗಳು ಬಹುದಿನಗಳ ಕಾಲ ಗಾಳಿಗೆ ತೆರೆದಿಟ್ಟಾಗ ತಮ್ಮ ಹೊಳಪು ಮೇಲ್ಮೈ ಕಳೆದುಕೊಳ್ಳುತ್ತವೆ. ಅವುಗಳನ್ನು ಹುಣಿಸೆ ಹಣ್ಣು ಅಥವಾ ಸೌಮ್ಯ ಆಮ್ಲೀಯ ರಾಸಾಯನಿಕಗಳಿಂದ ಸ್ವಚ್ಚಗೊಳಿಸಬಹುದು. ಇದಕ್ಕೆ ಕಾರಣವೆಂದರೆ ಲೋಹಗಳು ಗಾಳಿಯಲ್ಲಿರುವ ಆಮ್ಲಜನಕದೊಂದಿಗೆ ವರ್ತಿಸಿ ಆಕ್ಸೈಡುಗಳಾಗಿ ವರ್ತಿಸುತ್ತದೆ. ಗಾಳಿಗೆ ಬಹುದಿನಗಳ ಕಾಲ ತೆರೆದಿಟ್ಟ ಅಲ್ಯೂಮಿನಿಯಂ ನ ಪಾತ್ರೆಯ ಮೇಲ್ಮೈ ಬಿಳಿ-ಬೂಡಿ ಬಣ್ಣಕ್ಕೆ ತಿರುಗಿರುವುದನ್ನು ನೀವು ಗಮನಿಸಿರಬಹುದು. ಇದೇ ಕಾರಣಕ್ಕಾಗಿ ಲಿಂಬೆ ರಸ ಅಥವಾ ಹಣ್ಣಿನ ರಸವನ್ನಾಗಲೀ, ಉಪ್ಪಿನ ಕಾಯಿಯನ್ನಾಗಲೀ ಅಲ್ಯೂಮೀನಿಯಂ ಡಬ್ಬಿಗಳಲ್ಲಿ ಸಂಗ್ರಹಿಸಬಾರದು ಎಂದು ಹೇಳುತ್ತಾರೆ.
VII. ಲೋಹಗಳ ಮೇಲೆ ಇತರ ಅಲೋಹಗಳ ವರ್ತನೆ:
೧. ಕೆಲವು ಲೋಹಗಳು ಉನ್ನತ ತಾಪದಲ್ಲಿ ನೈಟ್ರೋಜನ್ನಿನೊಂದಿಗೆ ವರ್ತಿಸಿ ಆಯಾ ನೈಟ್ರೈಡುಗಳನ್ನು ಕೊಡುತ್ತವೆ.
೨. ಲೋಹಗಳು ಸಾಮಾನ್ಯವಾಗಿ ಹೈಡ್ರೋಜನ್ನಿನೊಂದಿಗೆ ವರ್ತಿಸಿ ಆಯಾ ಹೈಡ್ರೈಡುಗಳನ್ನು ಕೊಡುತ್ತದೆ.
೩. ಲೋಹಗಳು ಸಾಮಾನ್ಯವಾಗಿ ಕ್ಲೋರಿನ್ನಿನೊಂದಿಗೆ ವರ್ತಿಸಿ ಆಯಾ ಕ್ಲೋರೈಡುಗಳನ್ನು ಕೊಡುತ್ತದೆ.
೪. ಲೋಹಗಳು ಸಾಮಾನ್ಯವಾಗಿ ಗಂಧಕದೊಂದಿಗೆ ವರ್ತಿಸಿ ಆಯಾ ಸಲ್ಫೈಡುಗಳನ್ನು ಕೊಡುತ್ತದೆ.
VIII. ಲೋಹಗಳ ಮೇಲೆ ನೀರಿನ ವರ್ತನೆ: ಸಾಮಾನ್ಯವಾಗಿ ನಾವು ನೀರನ್ನು ಲೋಹಗಳ ಪಾತ್ರೆಯಲ್ಲಿಯೇ ಸಂಗ್ರಹಿಸುತ್ತೇವೆ. ಮತ್ತು ಆ ಪಾತ್ರೆಗಳಲ್ಲಿಯೇ ಕಾಯಿಸುತ್ತೇವೆ. ಇದರರ್ಥ ಲೋಹಗಳು ನೀರಿನೊಂದಿಗೆ ಮತ್ರಿಸುವುದಿಲ್ಲ ಎಂಬುದಅಗಿದೆ. ಆದರೆ ಇದಕ್ಕೆ ಅಪವಾದವೆಂಬಂತೆ, ಸೋಡಿಯಂ ಲೋಹವು ನೀರಿನೊಂದಿಗೆ ಬಹಳ ದಿಢೀರನೇ ವರ್ತಿಸಿ ಸೋಡಿಯಂ ಹೈಡ್ರಾಕ್ಸೈಡ್ ನ್ನು ಉತ್ಪತ್ತಿಸುತ್ತದೆ. (ಎಚ್ಚರಿಕೆ: ತಣ್ಣೀರಿನಲ್ಲಿ ಸೋಡಿಯಂ ಲೋಹವನ್ನು ಹಾಕಿದರೆ ಆಸ್ಪೋಟಿಸುತ್ತದೆ.). ಆದರೆ ಮೇಗ್ನೀಶೀಯಂ ಲೋಹವು ಬಿಸಿ ನೀರಿನಲ್ಲಿ ವರ್ತಿಸಿ ಮೇಗ್ನೀಶಿಯಂ ಆಕ್ಸೈಡ್ ಉತ್ಪತ್ತಿಯಾಗುತ್ತದೆ.. ಚಿನ್ನ ಮತ್ತು ಪ್ಲಾಟಿನಂ ಲೋಹವು ನೀರಿನೊಂದಿಗೆ ವರ್ತಿಸುವುದೇ ಇಲ್ಲ. ಆದುದರಿಂದ ಚಿನ್ನದ ಆಥವಾ ಲೋಹದ ಆಭರಣವನ್ನು ನೀರಿನಲ್ಲಾಗಲೀ, ಬಿಸಿ ನೀರಿನಲ್ಲಾಗಲೀ ತೊಳೆದು ಸ್ವಚ್ಛಗೊಳಿಸಬಹುದಾಗಿದೆ.
IX. ಲೋಹಗಳ ಮೇಲೆ ಆಮ್ಲಗಳ ವರ್ತನೆ:
೧. ಸಾರರಿಕ್ತ ಹೈಡ್ರೋಕ್ಲೋರಿಕ್ ಆಮ್ಲದೊಡನೆ ಸತು, ಅಲ್ಯೂಮಿನಿಯಂ, ಮೇಗ್ನಶೀಯಂ ಮುಂತಾದ ಲೋಹಗಳು ವರ್ತಿಸಿ ಲೋಹದ ಕ್ಲೋರೈಡುಗಳು ರೂಪುಗೊಳ್ಳುತ್ತದೆ ಮತ್ತು ಹೈಡ್ರೋಜನ್ ಅನಿಲ ಬಿಡುಗಡೆಗೊಳ್ಳುತ್ತದೆ
೨. ಸಾರರಿಕ್ತ ಸಲ್ಪ್ಯೂರಿಕ್ ಆಮ್ಲದೊಡನೆ ಸತು, ಮೇಗ್ನೀಶೀಯಂ, ಕಬ್ಬಿಣ ಮುಂತಾದ ಆಮ್ಲಗಳು ವರ್ತಿಸಿ ಆಯಾ ಸಲ್ಪೇಟುಗಳನ್ನು ಉಂಟುಮಾಡಿ ಹೈಡ್ರೋಜನ್ ಅನಿಲವನ್ನು ಬಿಡುಗಡೆಗೊಳಿಸುತ್ತದೆ.
೩. ಸಾರರಿಕ್ತ ನೈಟ್ರಿಕ್ ಆಮ್ಲವೂ ಕೂಡಾ ಸತು, ಮೇಗ್ನಿಶೀಯಂ, ಕಬ್ಬಿಣ ಮುಂತಾದ ಲೋಹಗಳೊಂದಿಗೆ ವರ್ತಿಸಿ ಆಯಾ ನೈಟ್ರೇಟುಗಳನ್ನು ಉಂಟುಮಾಡಿ ಹೈಡ್ರೋಜನ್ನ ಅನಿಲವನ್ನು ಬಿಡುಗಡೆಗೊಳಿಸುತ್ತದೆ.(ಕಬ್ಬಿಣ ಅಥವಾ ಅಲ್ಯೂಮಿನಿಯಂ ಲೋಹದ ತುಂಡನ್ನು ಸಾರಯುತ ನೈಟ್ರಿಕ್ ಆಮ್ಲದಲ್ಲಿ ಮುಳುಗಿಸಿದಾಗ ಯಾವುದೇ ಪರಿವರ್ತನೆ ಉಂಟಾಗುವುದಿಲ್ಲ, ಏಕೆಂದರೆ ನೈಟ್ರಿಕ್ ಆಮ್ಲದಲ್ಲಿದ್ದಾಗ ಕಬ್ಬಿಣ ಅಥವಾ ಅಲ್ಯೂಮಿನಿಯಂ ಲೋಹದ ಆಕ್ಸೈಡುಗಳು ಪದರ ಉಂಟಾಗಿ ಅವು ನಿಷ್ಕ್ರಿಯವಾಗುತ್ತವೆ.)
X. ಲೋಹಗಳ ಸ್ಥಾನಪಲ್ಲಟ ಕ್ರಿಯೆಗಳು: ತಾಮ್ರದ ಸಲ್ಫೇಟ್ ದ್ರಾವಣದಲ್ಲಿ ಕಬ್ಬಿಣವು ವರ್ತಿಸಿ ಕಬ್ಬಿಣದ ಸಲ್ಪೇಟ್ ಹಾಗೂ ತಾಮ್ರವು ಉತ್ಪಾದನೆಗೋಲ್ಳುತ್ತದೆ. ಹೀಗೆ ಹಲವಾರು ಸ್ಥಾನಪಲ್ಲಟ ಕ್ರಿಯೆಯನ್ನು ಗಮನಿಸಬಹುದಾಗಿದೆ.
 
== ಲೋಹಗಳ ಚರಿತ್ರೆ ==
"https://kn.wikipedia.org/wiki/ಲೋಹ" ಇಂದ ಪಡೆಯಲ್ಪಟ್ಟಿದೆ