ಸ್ವಪೋಷಕಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: '''ಸ್ವಪೋಷಕಗಳು''' ಅದರ ಸುತ್ತಮುತ್ತಲಿನ ಸರಳ ವಸ್ತುಗಳಿಂದ ಸಂಕೀರ್ಣ ಸಾವಯವ ಸಂ...
( ಯಾವುದೇ ವ್ಯತ್ಯಾಸವಿಲ್ಲ )

೧೨:೫೬, ೧೯ ಡಿಸೆಂಬರ್ ೨೦೧೫ ನಂತೆ ಪರಿಷ್ಕರಣೆ

ಸ್ವಪೋಷಕಗಳು ಅದರ ಸುತ್ತಮುತ್ತಲಿನ ಸರಳ ವಸ್ತುಗಳಿಂದ ಸಂಕೀರ್ಣ ಸಾವಯವ ಸಂಯುಕ್ತಳಾದ ಕಾರ್ಬೋಹೈಡ್ರೇಟ್‍ಗಳು, ಕೊಬ್ಬುಗಳು , ಮತ್ತು ಪ್ರೋಟಿನ್‍ಗಳನ್ನು ಉತ್ಪಾದಿಸುತ್ತವೆ. ಇವು ಸಾಮಾನ್ಯವಾಗಿ ಬೆಳಕಿನ (ದ್ಯುತಿಸಂಶ್ಲೇಷಣೆ) ಶಕ್ತಿಯನ್ನು ಅಥವಾ ಅಜೈವಿಕ ರಾಸಾಯನಿಕ ಕ್ರಿಯೆಗಳನ್ನು ( ರಾಸಾಯನಿಕ ಸಂಶ್ಲೇಷಣೆ ಕ್ರಿಯೆಯಿಂದ ) ಬಳಸಿ ಸಂಕೀರ್ಣ ಸಾವಯವ ಸಂಯುಕ್ತಗಳನ್ನು ಉತ್ಪಾದಿಸುತ್ತವೆ. ಆಹಾರ ಸರಪಳಿಯಲ್ಲಿ ಸ್ವಪೋಷಕಗಳು ಉತ್ಪಾದಕರು. ಉದಾಹರಣೆ: ಭೂಮಿಯಲ್ಲಿರುವ ಸಸ್ಯಗಳು, ನೀರಿನಲ್ಲಿ ಇರುವ ಪಾಚಿ. ಇವುಗಳಿಗೆ ಸಾವಯವ ಇಂಗಾಲ ಅಥವಾ ಜೈವಿಕ ಮೂಲದ ಶಕ್ತಿಯ ಅಗತ್ಯವಿಲ್ಲ. ಸ್ವಯಂ ಆಹಾರ ತಯಾರಿಸುವ ಶಕ್ತಿ ಇವುಗಳಿಗೆ ಇವೆ.

ಹೆಚ್ಚಿನ ಸ್ವಪೋಷಕಗಳು ನೀರನ್ನು ಅಪಕರ್ಷಣಕಾರಿಯಾಗಿ ಬಳಸುತ್ತವೆ. ಆದರೆ ಕೆಲವು ಸ್ವಪೋಷಕಗಳು ಹೈಡ್ರೋಜನ್ ಸಂಯುಕ್ತಗಳಾಗದ ಹೈಡ್ರೋಜನ್ ಸಲ್ಫೈಡ್ ಅನ್ನು ಅಪಕರ್ಷಣಕಾರಿಯಾಗಿ ಬಳಸುತ್ತವೆ. ಕೆಲವು ಸ್ವಪೋಷಕಗಳು ಸೂರ್ಯನ ವಿದ್ಯುತ್ಕಾಂತೀಯ ಶಕ್ತಿಯನ್ನು ಇಂಗಾಲದ ರಾಸಾಯನಿಕ ಶಕ್ತಿಯಾಗಿ ಪರಿವರ್ತಿಸುತ್ತವೆ.

ಸ್ವಪೋಷಕಗಳಲ್ಲಿ ಎರಡು ವಿಧಗಳಿವೆ. ಅವುಗಳು:ಫೊಟೊಆಟೊಟ್ರೋಫ್‍ಗಳು ಹಾಗೋ ಕೆಮೊಆಟೊಟ್ರೋಫ್‍ಗಳು.

  • ಫೊಟೊಆಟೊಟ್ರೋಫ್‍ಗಳು ಬೆಳಕನ್ನು ಶಕ್ತಿಯ ಮೂಲವಾಗಿ ಉಪಯೋಗಿಸುತ್ತವೆ.
  • ಕೆಮೊಆಟೊಟ್ರೋಫ್‍ಗಳು ಜೈವಿಕ ಅಥವಾ ಅಜೈವಿಕ ಮೂಲಗಳಿಂದ ದೊರೆಯುವ ಎಲೆಕ್ಟ್ರಾನ್ ದಾನಿಗಳನ್ನು ಶಕ್ತಿಯ ಮೂಲವಾಗಿ ಬಳಸಿಕೊಳ್ಳತ್ತವೆ