ಎಲ್. ಜಿ. ಶಿವಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧ ನೇ ಸಾಲು:
ದಶಕಕ್ಕೂ ಹೆಚ್ಚುಸಮಯದಿಂದ ದೂರದರ್ಶನ ಚಂದನ ವಾಹಿನಿಯಲ್ಲಿ ನೇರಪ್ರಸಾರವಾಗುತ್ತಿರುವ 'ಬೆಳಗು' ಕಾರ್ಯಕ್ರಮದ ರುವಾರಿ, ಎಲ್. ಜಿ. ಶಿವಕುಮಾರ್ ಕರ್ನಾಟಕದಲ್ಲಿ ಮನೆಯಮಾತಾಗಿದ್ದಾರೆ.
==ಬೆಳಗು ಕಾರ್ಯಕ್ರಮ ಶುರುವಾದ ಬಗೆ==
ಬೆಳಗಿನ ಕಾಯಕ್ರಮಗಳು ನೇರಪ್ರಸಾರ ಹೊಂದಿರಲಿ ಎಂದು ದೆಹಲಿಯ[[ದೆಹಲಿ]]ಯ [[ದೂರದರ್ಶನ]] ಕೇಂದ್ರದಿಂದ ಕಳೆದ ದಶಕದಲ್ಲಿ ಆದೇಶ ಬಂತು. ೨೦೦೧ ರ ಸೆಪ್ಟೆಂಬರ್ ೧ ರಂದು ಚಂದನ ವಾಹಿನಿಯಲ್ಲಿ 'ಬೆಳಗು' ಕಾರ್ಯಕ್ರಮ ಆರಂಭವಾಯಿತು. ಪ್ರತಿದಿನ ಬೆಳಿಗ್ಯೆ ೭ ರಿಂದ ೭-೪೦ ರವರೆಗೆ ಈ ಕಾರ್ಯಕ್ರಮ ಸತತವಾಗಿ ನಡೆದುಕೊಂಡು ಬರುತ್ತಿದೆ. ಬೆಂಗಳೂರು ದೂರದರ್ಶನದ ಆಗಿನ ನಿರ್ದೆಶಕ ವೆಂಕಟೇಶ್ವರಲು ಕಾರ್ಯಕ್ರಮದ ಹೊಣೆಯನ್ನು ಶಿವಕುಮಾರ್ ಗೆ, ವಹಿಸಿದರು. ಹಾಗೆ ಶುರುವಾದ 'ಬೆಳಗು ಕಾರ್ಯಕ್ರಮ'ದ ಪ್ರಥಮ ಅತಿಥಿ, ನಟಿ, 'ಶ್ರೀಮತಿ ಉಮಾಶ್ರೀ'.
==ಪ್ರತಿದಿನ ಸಂದರ್ಶನ==
ಪ್ರತಿದಿನವೂ ಸಂದರ್ಶನ. ನಾಟಕ ಸಂಗೀತ,ನೃತ್ಯ ಕ್ಷೇತ್ರದ ಪ್ರತಿಭಾವಂತ ಕಲಾವಿದರನ್ನು ಮೊದಮೊದಲು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. ೪೦-೫೦ ಸಂದರ್ಶ ಆಗೋವರೆಗೆ ಸ್ವಲ್ಪ ತೊಡಕಾಗಿತ್ತು. ಇದುವರೆವಿಗೆ ಸುಮಾರು ೪ ಸಾವಿರಕ್ಕೂ ಅಧಿಕ ವ್ಯಕ್ತಿಗಳನ್ನು ಸಂದರ್ಶಿದ್ದಾಗಿದೆ. ದೂರದರ್ಶನದ ವಿವಿಧ ಭಾಷೆಗಳ ಚಾನೆಲ್ ಗೆ ಹೋಲಿಸಿದರೆ ಇದೊಂದು ದಾಖಲೆ ಎನ್ನುವ ಮಾತಿದೆ. ಮಧ್ಯೆ , ಬಿ.ಎನ್.ಚಂದ್ರಶೇಖರ್ ಸುಮಾರು ೪ ವರ್ಷಗಳ ಕಾಲ ನಿರ್ಮಿಸಿದ್ದರು. ಉಳಿದಂತೆ ಶಿವಕುಮಾರ್ ಹೆಚ್ಚು ಸಮಯ ತಮ್ಮ ಸೇವೆಯನ್ನು ಉಪಯೋಗಿಸಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿ ಕೆಲಸಮಾಡಿದ ವಿಶೇಷಜ್ಞರನ್ನು ಪತ್ತೆಹಚ್ಚಿ ಆಯ್ಕೆ ಮಾಡುವುದರಿಂದ ವೈವಿದ್ಯತೆ ಸಾಧ್ಯ.. ಇದು ವೀಕ್ಷಕರು ಆಶಿಸುವ ಸಂಗತಿ. ಖಾಸಗೀ ಚಾನೆಲ್ ನಲ್ಲಿ ಈಗಾಗಲೇ ಹೆಸರುಮಾಡಿದ ವ್ಯಕ್ತಿಗಳನ್ನೆ ಪದೇ ಪದೇ ಕರೆಸುವ ವಾಡಿಕೆ ಇದೆ. ಆದರೆ ಪ್ರತಿಭೆಯ ಆಗರವಾಗಿರುವ ಹಲವು ಎಲೆಮರೆಯಲ್ಲಿರುವ ಗ್ರಾಮೀಣವಲಯದ ಕಲಾವಿದರನ್ನು ಗುರುತಿಸುವ ಆಧ್ಯತೆ ಇದೆ.
"https://kn.wikipedia.org/wiki/ಎಲ್._ಜಿ._ಶಿವಕುಮಾರ್" ಇಂದ ಪಡೆಯಲ್ಪಟ್ಟಿದೆ