ಅವಸ್ಥೆಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಕೊಂಡಿ ಸೇರಿಸಿದ್ದು
೧೨ ನೇ ಸಾಲು:
 
ಗೌಡಪಾದರು ಜಾಗೃದವಸ್ಥೆಯ ಮಿಥ್ಯಾತ್ವವನ್ನು ಸ್ವಪ್ನ ಪ್ರಪಂಚದ ಸಾದೃಶ್ಯದ ಮೂಲಕ ಸಾಧಿಸಿದ್ದಾರೆ. ಸ್ವಪ್ನದಲ್ಲಿ ಕಾಣುವ ದೃಶ್ಯಗಳೆಲ್ಲ ಮಿಥ್ಯೆ. ಅವುಗಳು ನಿಜವಾಗಿದ್ದರೆ ಅವುಗಳ ಸ್ಥಾನ ಕನಸುಗಾಣುವವನ ಶರೀರದಲ್ಲೇ ಇರಬೇಕು ಆದರೆ ಇದು ಅಸಾಧ್ಯ ; ಏಕೆಂದರೆ ಪರ್ವತವೇ ಮೊದಲಾದ ದೊಡ್ಡವಸ್ತುಗಳೂ ನಗರಗಳೂ ಎಷ್ಟು ಸಣ್ಣ ಶರೀರದಲ್ಲಿ ಹೇಗಿರುವುವು? ಕನಸುಗಾಣುವವ ಶರೀರದಿಂದ ಹೊರಗೆ ಹೋಗಿ ವಸ್ತುಗಳನ್ನು ನೋಡುವುದಿಲ್ಲ; ಏಕೆಂದರೆ ಕನಸಿನಲ್ಲಿ ಕಂಡ ಪ್ರದೇಶಕ್ಕೆ ಹೋಗಿದ್ದರೆ ಆತ ಎಚ್ಚರವಾದಾಗ ಅಲ್ಲಿಯೇ ಇರಬೇಕಾಗಿತ್ತು. ಕನಸಿನ ದೃಶ್ಯಗಳು ದೇಶಕಾಲಗಳಿಗೆ ಸಂಬಂಧಿಸಿಲ್ಲದಿರುವುದರಿಂದ ಅವು ಮಿಥ್ಯೆ. ಆದ್ದರಿಂದ ಕನಸಿನಲ್ಲಿ ಓಡಾಡುವ ಶರೀರ ಕೇವಲ ಮನೋಭ್ರಾಂತಿ. ಕನಸುಗಾಣುವವನ ಶರೀರ ಮಲಗಿದ್ದಲ್ಲೇ ಬಿದ್ದಿರುವುದು. ಕನಸಿನ ಶರೀರದಂತೆ[[ಶರೀರ]]ದಂತೆ ಕನಸಿನಲ್ಲಿ ತೋರುವ ಭಾವನೆಗಳೂ ಕೇವಲ ಕಲ್ಪನೆ. ಅಲ್ಲಿ ರಥಗಳಿಲ್ಲ ಎಂದು ಬೃಹದಾರಣ್ಯಕ ಶ್ರುತಿಯೇ ಹೇಳುತ್ತದೆ.
ಜಾಗೃದವಸ್ಥೆ ಸ್ವಪ್ನವನ್ನು ಅನೇಕ ವಿಧಗಳಲ್ಲಿ ಹೋಲುತ್ತದೆ. ಸ್ವಪ್ನದಂತೆಯೇ ಜಾಗೃದಾವಸ್ಥೆಯಲ್ಲೂ ವಸ್ತುಗಳನ್ನು ನೋಡುತ್ತೇವೆ ಮತ್ತು ನೋಡಿದ್ದೆಲ್ಲ ಅಸತ್ಯವಾಗಿರುತ್ತದೆ; ಎಂದರೆ ದೃಶ್ಯತ್ವ-ಮಿಥ್ಯತ್ವಗಳೆಂಬ ಎರಡು ಲಕ್ಷಣಗಳು ಜಾಗೃತ್ ಸ್ವಪ್ನಗಳಿಗೆ ಸಾಧಾರಣ ವಾಗಿರುತ್ತವೆ. ಯಾವುದು ಆದಿ ಅಂತ್ಯಗಳಿಲ್ಲವೋ ಅದು ಮಧ್ಯದಲ್ಲೂ ಇಲ್ಲ. ಯಾವುದು ಕಾಲವೆಂಬ ಉಪಾಧಿಗೆ ಒಳಪಟ್ಟರುವುದೋ ಅದು ಅಸತ್ಯ. ಸ್ವಪ್ನ ವಸ್ತುಗಳು ಸ್ವಪ್ನದಲ್ಲಿ ಕಾಣಿಸುತ್ತವೆಯೇ ಹೊರತು ಸ್ವಪ್ನಕ್ಕೆ ಮೊದಲಾಗಲೀ ಸ್ವಪ್ನ ಮುಗಿದಮೇಲಾಗಲೀ ಕಾಣುವುದಿಲ್ಲ. ಹಾಗೆಯೇ ಜಾಗೃದವಸ್ಥೆಯ ವಿಷಯಗಳು ಜಾಗೃದವಸ್ಥೆಯಲ್ಲಿ ಮಾತ್ರ ಕಾಣುತ್ತವೆ.
"https://kn.wikipedia.org/wiki/ಅವಸ್ಥೆಗಳು" ಇಂದ ಪಡೆಯಲ್ಪಟ್ಟಿದೆ