ಅಂಟಿಕೆ -ಪಂಟಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
'''ಅಂಟಿಕೆ ಪಂಟಿಕೆ''' [[ಶಿವಮೊಗ್ಗ]] ಮತ್ತು [[ಉತ್ತರ ಕನ್ನಡ]] ಜಿಲ್ಲೆಯ ಕೆಲವು ಭಾಗಗಳಲ್ಲಿ ಪ್ರಚಾರದಲ್ಲಿರುವ ಒಂದು [[ಸಂಪ್ರದಾಯ]]. ಇದಕ್ಕೆ ಹಬ್ಬ ಹಾಡುವುದು, ದೀಪ ನೀಡುವುದು ಎಂಬ ಹೆಸರುಗಳೂ ಇವೆ. ತೀರ್ಥಹಳ್ಳಿಯ ಸುತ್ತಮುತ್ತ ಮಾತ್ರ ಇದಕ್ಕೆ ಅಂಟಿಕೆ ಪಂಟಿಕೆ ಎನ್ನುತ್ತಾರೆ.
=='''ಸಂಪ್ರದಾಯ'''==
[[ದೀಪಾವಳಿ]]ಯ [[ಬಲಿಪಾಡ್ಯಮಿ]] ದಿನದಿಂದ ಹಿಡಿದು ಮೂರು ದಿನಗಳವರೆಗೆ ಹಳ್ಳಿಯ ರೈತರು (ಒಕ್ಕಲಿಗರು ದೇವರು, ಹಸಲರು ಮುಂತಾದ ವರ್ಗಗಳವರು) ಮನೆ ಮನೆಗೂ ದೀಪಾವಳಿಯ ಬೆಳಕಿನ ದಿವ್ಯ ಸಂದೇಶವನ್ನು ಒಯ್ಯುತ್ತ ಜ್ಯೋತಿ ಹಚ್ಚಿ ಹೀಗೆ ಹಾಡುತ್ತಾರೆ, 'ಮಣ್ಣಲ್ಲಿ ಹುಟ್ಟಿದೆ, ಮಣ್ಣಲ್ಲಿ ಬೆಳೆದೆ, ಎಣ್ನೆಲಿ ಕಣ್ನಬಿಟ್ಟಿದೆ, ಜಗಜ್ಯೋತಿ ನಾ ಸತ್ಯದಿಂದ ಉರಿವೆ ಜಗಜ್ಯೋತಿ'. “ಬಾಗಿಲು ಬಾಗಿಲು ಚಂದ ಈ ಮನೆಯ ಬಾಗಿಲು ಚಂದ, ಬಾಗಿಲ ಮ್ಯಾಲೇನು ಬರೆದಾರೆ, ಬಾಗಿಲ ಮ್ಯಾಲೇನು ಬರೆದಾರೆ ಸಿರಿಕೈಲಿ, ಕೊಚ್ಚು ಪಾಲುವಾಣದ ಗಿಳಿವಿಂಡು, ಅಂದುಳ, ಮನೆಗೆ ಚಂದುಳ್ಳ ಕದವು, ಚಂದುಳ್ಳ ಕದಕ ಚಿನ್ನದ ಅಗಣಿಯ,ತೆಗೆ ಸೈ ವಜ್ರದ ಅಗಣೀಯ! ಆ ಮನೆ ದೀಪಧಾರಿಗಳಿಗೆ ಅಂದದ ಅರಮನೆಯಾಗಿ, ಚಿನ್ನದ ಬಾಗಿಲಾಗಿ, ವಜ್ರದ ಅಗಣಿಯಾಗಿ ಹಾಡುಗಳಲ್ಲಿ ವರ್ಣಿತವಾಗುತ್ತವೆ. ಬಾಗಿಲನ್ನು ತೆರೆದು ದೀಪಧಾರಿಗಳನ್ನು ಬರಮಾಡಿಕೊಳ್ಳುತ್ತಾರೆ. ಮನೆಯ ಒಡತಿ ದೀಪಕ್ಕೆ ಎಣ್ಣೆ ಎರೆದು, ದೀಪದಿಂದ ತನ್ನ ಹಣತೆಗೆ ಅಂಟಿಸಿಕೊಂಡು ಒಲೆಯ ಬೆಂಕಿಯಲ್ಲಿ ಅಗ್ನಿ ಗೂಡಿಸುತ್ತಾಳೆ. ಹಣತೆಯನ್ನು ದೇವರ ಮುಂದೆ ಇಟ್ಟು ಕೈ ಮುಗಿಯುತ್ತಾಳೆ. ದೀಪಧಾರಿಗಳು “ರನ್ನಾದಟ್ಟಾಕೆ ಬಣ್ಣದೇಣಿಯಾ ಚಾಚಿ, ಸಾಲೆಣ್ಣೆ ಕೊಡುವ ಬಾಯಿಬಿಚ್ಚಿ, ಸಾಲೆಣ್ಣೆ ಕೊಡವ ಬಾಯಿಬಿಚ್ಚಿ ಎಣ್ಣೆಯ ಬಗಸಿ, ಜ್ಯೋತಮ್ಮ ಗೆಣ್ಣೆ ಎರೆ ಬನ್ನಿ, ಎಣ್ಣೆಯ ನೆರೆದಾರೆ ಪುಣ್ಯಾದ ಫಲ ನಿಮಗೆ, ಮುಂದಣ ದೇವರಿಗೊಂದರಿಕ್ಯಾದ, ಮುಂದಣ ದೇವರಿಗೊಂದರಿಕ್ಯಾದ ಕಾರಣದಿಂದ, ಕಾಮನುಡುಗಾರು ನುಡಿಸ್ಯಾರು, ಕಾಮನುಡುಗಾರು ಏನೆಂದು ನುಡಿಸ್ಯಾರು, ಕಂದಯ್ಯರ ಫಲವೇ ತಮಗಾದು ಕಾರಣದಿಂದ, ಸಾವಿರ ಕಾಲ ಸುಖಿಬಾಳಿ” ಎಂದು ಹಾಡುತ್ತಾರೆ.
 
=='''ತಂಡಗಳು ಮತ್ತು ನಿಯಮಗಳು'''==
ಒಂದೊಂದು [[ಸೀಮೆ]]ಯಲ್ಲೂ (೩ ಹಳ್ಳಿಗಳ ಗುಂಪು) ೪ ರಿಂದ ೬ ಜನರಿರುವ ಹಲವು ತಂಡಗಳು ಹಬ್ಬಹಡಲು ಹೋಗುವುದುಂಟು. ಆ ದಿನ ರಾತ್ರಿ ಆ ಸೀಮೆಯ ದೇವಸ್ಥಾನಕ್ಕೆ ಹೋಗಿ ಅಲ್ಲಿ ತಮ್ಮ ಹಣತೆ ಹಚ್ಚಿಕೊಂಡು ಹಾದಿಯುದ್ದಕ್ಕೂ ಹಾಡುತ್ತಲೇ ಮನೆಮನೆಗೆ ಹೋಗುತ್ತಾರೆ. ದೀಪಧಾರಿಗಳ ಮೇಳದಲ್ಲಿ ತಂಡದ ನಾಯಕತ್ವವನ್ನು ಊರಿನ ಹಿರಿಯ ಯಜಮಾನರು ವಹಿಸಿಕೊಳ್ಳುತ್ತಾರೆ. ತಂಡದಲ್ಲಿ ಹತ್ತರಿಂದ ಐವತ್ತು ಜನರವರೆಗೂ ಇರುತ್ತಾರೆ. ಹಾಡುಗಾರರು ನಾಲ್ಕು ಮಂದಿ ಇದ್ದು, ಅವರಲ್ಲಿ ಇಬ್ಬರು ಮುಮ್ಮೇಳಧಾರಿಗಳು, ಮತ್ತೆ ಇಬ್ಬರು ಹಿಮ್ಮೇಳಧಾರಿಗಳಿರುತ್ತಾರೆ. ತಂಡದಲ್ಲಿ ದೀಪಧಾರಿಗಳು, ದೀವಟಿಕೆಯವರು, ಸಂಭಾವನೆ ಹೊರುವವರು ಇರುತ್ತಾರೆ. ಹೀಗೆ ಈ ದೀವಳಿಗೆಯ ದೀಪದಾರಿಗಳು ದೊಡ್ಡ ತಂಡದಲ್ಲಿ ನೆರೆಯ ಊರುಗಳಿಗೆ ಹೊರಡುತ್ತಾರೆ. ಕವಿದ ಕತ್ತಲಿನಲ್ಲಿ ಕಾಡಿನ ನಡುವೆ ಕೇಕೆ ಹಾಕುತ್ತಾ ‘ದೀಪ್ ದೀಪೋಳ್ಗೆ’ ಎಂದು ಕೂಗುತ್ತಾ ಸಾಗುತ್ತಾರೆ. ಪಂಜಿನವರು, ಲಾಟೀನಿನವರು ಜೊತೆಯಲ್ಲಿರುತ್ತಾರೆ. ಹೀಗೆ ದೀಪಾವಳಿಯ ಮೂರುದಿವಸ ಹಾಡುವಾಗ ಹಿಡಿದ ಜ್ಯೋತಿ ಮಾರ್ಗ ಮಧ್ಯದಲ್ಲಿ ನಂದಬಾರದೆಂದೂ ನಂದಿದರೆ ಕೇಡಾಗುತ್ತದೆಂದೂ ನಂಬಿದ್ದಾರೆ.
"https://kn.wikipedia.org/wiki/ಅಂಟಿಕೆ_-ಪಂಟಿಕೆ" ಇಂದ ಪಡೆಯಲ್ಪಟ್ಟಿದೆ