ವಿದ್ಯುತ್ಕಾಂತೀಯ ಪ್ರೇರಣೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೮ ನೇ ಸಾಲು:
 
ಒಂದು ವಾಹಕದಲ್ಲಿ ವಿದ್ಯುತ್ ಪ್ರವಾಹವು ಉಂಟಾದಾಗ, ಆ ವಾಹಕದ ಸುತ್ತ ಕಾಂತಕ್ಷೇತ್ರ ಏರ್ಪಡುತ್ತದೆ. ಹಾಗೆಯೇ ಒಂದು ವಾಹಕ ಸುರುಳಿಯಲ್ಲಿ ಕಾಂತಕ್ಷೇತ್ರವನ್ನು ಬದಲಾಯಿಸಿದಾಗ ಪ್ರೇರಿತ ವಿದ್ಯುತ್ ಚಾಲಕಬಲವು ಆ ವಾಹಕದ ತುದಿಗಳಲ್ಲ ಉಂಟಾಗುತ್ತದೆ. ಅಂದರೆ ಒಂದು ವಾಹಕ್ಕೆ ಸಂಬಂದಿಸಿದ ಕಾಂತಕ್ಷೇತ್ರವು ([[:w:Magnetic Field|Magnetic Field]]) ಬದಲಾದಾಗ ವಾಹಕದಲ್ಲಿ ವಿದ್ಯುತ್ ಚಾಲಕಬಲವು ಪ್ರೇರಿತವಾಗುತ್ತದೆ. ಈ ವಿದ್ಯಮಾನವನ್ನು ವಿದ್ಯುತ್ಕಾಂತೀಯ ಪ್ರೇರಣೆ ಎನ್ನುತ್ತೇವೆ. ವಿದ್ಯುತ್ಕಾಂತೀಯಪ್ರೇರಣೆಯನ್ನು ಮೊದಲು ಪರಿಚಯಿಸಿದವರು ಮೈಕಲ್ ಫ್ಯಾರಡೆ ([[:w: Michael Faraday| Michael Faraday]]).
==ಮೈಕಲ್ ಫಾರಡೆಯ ಪ್ರಯೋಗ ಮತ್ತು ವಿವರಣೆ ==[https://www.youtube.com/watch?v=lO37Rf-zsSA]
ಫಾರಡೆಯು ರಟ್ಟಿನ ಒಂದು ಕೊಳವೆಯ ಮೇಲೆ ಉದ್ದವಾದ ತಾಮ್ರದ ತಂತಿಯನ್ನು ಸುತ್ತಿದ. ತಂತಿ ಸುರುಳಿಗಳ ನಡುವೆ ಟ್ವೈನ್ ದಾರವನ್ನು ಮತ್ತು ಸುರುಳಿಗಳ ಪದರಗಳ ನಡುವೆ ಕ್ಯಾಲಿಕೋ ಬಟ್ಟೆಯನ್ನು ಇರಿಸಿದ. ತಂತಿಯ ತುದಿಗಳನ್ನು ಗ್ಯಾಲ್ವನೋ ಮೀಟರ್ ([[:w:galvanometer|galvanometer]]) ಗೆ ಜೋಡಿಸಿದ. ದಂಡ ಕಾಂತದ ಒಂದು ದ್ರುವವನ್ನು ಸುರುಳಿಯೊಳಕ್ಕೆ ವೇಗವಾಗಿ ನುಗ್ಗಿಸಿದ. ಗ್ಯಾಲ್ವನೋಮೀಟರ್ ವಿದ್ಯುತ್ ಪ್ರವಾಹ ಉಂಟಾದುದನ್ನು ಸೂಚಿಸಿತು. ಕಾಂತವನ್ನು ಸುರುಳಿಯಿಂದ ಹೊರಗೆಳೆದ. ಗ್ಯಾಲ್ವನೋಮೀಟರ್ ಸೂಚಿಯು ವಿರುದ್ಧದಿಕ್ಕಿನಲ್ಲಿ ವಿಚಲನೆಯನ್ನು ಹೊಂದಿತು. ಕಾಂತದ ವೇಗವನ್ನು ಹೆಚ್ಚಿಸಿದಂತೆಲ್ಲಾ ಸೂಚಿಯ ವಿಚಲನೆಯ ಪ್ರಮಾಣವು ಹೆಚ್ಚಾಯಿತು. ಕಾಂತವು ಸುರುಳಿಯೊಳಗೆ ನಿಶ್ಚಲ ಸ್ಥಿತಿಯಲ್ಲಿದ್ದಾಗ ವಿದ್ಯುತ್ಪ್ರವಾಹವು ಇರುವುದಿಲ್ಲ ಎಂದು ಕಂಡುಕೊಂಡನು. ಕಾಂತವನ್ನು ಸ್ಥಿರವಾಗಿಟ್ಟು, ಸುರುಳಿಯು ಚಲಿಸುವಂತೆ ಮಾಡಿದ. ಫಲಿತಾಂಶ ಮೊದಲಿನಂತೆಯೇ ಇತ್ತು. ಕಾಂತಶಕ್ತಿಯು ಹೇಗೆ ವಿದ್ಯುತ್ತನ್ನು ಉತ್ಪಾದಿಸುತ್ತದೆ. ವಾಹಕ ಮತ್ತು ಕಾಂತಗಳ ನಡುವಿನ ಸಾಪೇಕ್ಷ ಚಲನೆಯಿಂದ ವಾಹಕದಲ್ಲಿ ವಿದ್ಯುತ್ ಉತ್ಪತ್ತಿಯಾಗುತ್ತದೆ ಎನ್ನುವ ಅಂಶವನ್ನು ಕಂಡುಕೊಂಡನು.[https://www.youtube.com/watch?v=lO37Rf-zsSA]
ಮೇಲಿನ ಪ್ರಯೋಗಗಳ ಆಧಾರದ ಮೇಲೆ ಫ್ಯಾರಡೆಯು ಕೆಳಕಂಡ ಎರಡು ನಿಯಮಗಳನ್ನು ಪ್ರತಿಪಾದಿಸಿನು.<ref>"ಮೈಕೇಲ್‌ ಫ್ಯಾರಡೆ." ಹಿಸ್ಟರಿ ಆಫ್‌ ಸೈನ್ಸ್‌ ಅಂಡ್‌ ಟೆಕ್ನಾಲಜಿ. ಹೌಗ್‌ಟನ್‌ ಮಿಫ್ಲಿನ್‌ ಕಂಪನಿ, 2004. Answers.com 4 ಜೂನ್‌ 2007</ref>[https://www.youtube.com/watch?v=lO37Rf-zsSA]
# ಒಂದು ವಾಹಕಕ್ಕೆ ಹೊಂದಿಕೊಂಡಿರುವ ಹಾಗೂ ಬದಲಾಗುತ್ತಿರುವ ಕಾಂತಕ್ಷೇತ್ರವು ವಾಹಕದಲ್ಲಿ ವಿದ್ಯುಚ್ಚಾಲಕ ಬಲವನ್ನು ಪ್ರೇರಣೆ ಮಾಡುತ್ತದೆ.
# ಪ್ರೇರಿತ ವಿದ್ಯುಚ್ಛಾಲಕ ಬಲವು ವಾಹಕಕ್ಕೆ ಹೊಂದಿಕೊಂಡಿರುವ ಕಾಂತಕ್ಷೇತ್ರದ ಬದಲಾವಣೆಯ ದರಕ್ಕೆ ನೇರ ಅನುಪಾತದಲ್ಲಿರುತ್ತದೆ.<ref>Faraday, Michael (1827). Chemical Manipulation, Being Instructions to Students in Chemistry. John Murray. 2ನೇ ಆವೃತ್ತಿ 1830, 3ನೇ ಆವೃತ್ತಿ 1842</ref>