ತಸ್ಲೀಮಾ ನಸ್ರೀನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೨೮ ನೇ ಸಾಲು:
 
==ತಲೆದಂಡದಂತಹ ಕ್ರೂರ ಶಿಕ್ಷೆಗೆ ಗುರಿಯಾದುದು==
ತಮ್ಮವಿವಾದಾತ್ಮಕ ಕಾದಂಬರಿಯಿಂದ ಮುಸ್ಲಿಂ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಬಂದ ಮೇಲೆ ತಮ್ಮ ತವರೂರು ಬಾಂಗ್ಲಾದೇಶದಿಂದ 1994ರಿಂದ ಸ್ವಯಂ ದೇಶಭ್ರಷ್ಟರಾಗಿರುವ ತಸ್ಲೀಮಾ ನಸ್ರೀನ್‌ ಸದ್ಯ ಸ್ವೀಡನ್‌ನ ನಾಗರಿಕರು. ಆದರೆ 2004ರಿಂದ ನಿರಂತರವಾಗಿ ಅವರು ಭಾರತೀಯ ವೀಸಾ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಡುವೆ ಅವರು ಕಳೆದ ಎರಡು ದಶಕಗಳಲ್ಲಿ ಅಮೇರಿಕಾ, ಯುರೋಪ್ ಮತ್ತು ಭಾರತದಲ್ಲಿ ವಾಸ್ತವ್ಯ ಹೂಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ಅವರು ಭಾರತದಲ್ಲೇ ಶಾಶ್ವತವಾಗಿ ನೆಲೆಸುವ ಆಶಯ ವ್ಯಕ್ತಪಡಿಸಿದ್ದು, ವಿಶೇಷವಾಗಿ ಕೋಲ್ಕತಾದಲ್ಲಿ ಇರಲು ಬಯಸುವುದಾಗಿ ಹೇಳುತ್ತ ಬಂದಿದ್ದಾರೆ. 2007ರಲ್ಲಿ ಮುಸ್ಲಿಮರ ಒಂದು ವರ್ಗದಿಂದ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಸರಣಿಯ ಕಾರಣಕ್ಕೆ ಕೋಲ್ಕತಾವನ್ನು ಬಿಟ್ಟು ತೆರಳಬೇಕಾಗಿ ಬಂದಿತ್ತು<ref>{{citeweb|url=http://vijaykarnataka.indiatimes.com/news/india/-/articleshow/39481207.cms|title=ಗೃಹಸಚಿವರ ಭೇಟಿಯಾದ ತಸ್ಲೀಮಾ ನಸ್ರೀನ್‌|publisher=vijaykarnataka.indiatimes.com|date= 2014-08-02|accessdate=2015-04-13}}</ref>
 
*ತಸ್ಲೀಮಾ ನಸ್ರೀನ್ ಮಾನವೀಯತೆಯಿಂದ, ಅಮಾಯಕ ಹಿಂದುಗಳ ಮೇಲೆ ನಡೆದ ಹಿಂಸಾಚಾರದಿಂದ ಆರ್ದ್ರಗೊಂಡು ತಮ್ಮ ಕೃತಿಯ ಮೂಲಕ ಸಾತ್ವ್ತಿಕವಾಗಿ ಪ್ರತಿಭಟಿಸುತ್ತಾರೆ. ಅವರು ಮತಧರ್ಮದ, ಮೂಲಭೂತವಾದಿಗಳ ಅಪಾಯಕಾರಿ ಪ್ರವೃತ್ತಿಯನ್ನು ವಸ್ತುವಾಗಿಸಿದ ಈ ಕೃತಿ ಯಿಂದಾಗಿ ಮುಸ್ಲಿಂ ಸಂಘಟನೆಗಳ ನೇರ ವಕ್ರದೃಷ್ಟಿಯನ್ನು ಎದುರಿಸ ಬೇಕಾಯಿತು.
*ಆಕೆಯನ್ನು ಬಾಂಗ್ಲಾದೇಶ ಗಡೀಪಾರು ಮಾಡಲು ಕಾರಣ ಒಬ್ಬ ಮುಸ್ಲಿಂ ಮಹಿಳೆಯಾಗಿದ್ದುಕೊಂಡು ಕೃತಿಯಲ್ಲಿ ಹಿಂದೂಗಳನ್ನು ಸಹೋದರರಂತೆ ಚಿತ್ತಿಸಿದ್ದು. ಧರ್ಮಾಂಧರ ಹಿಡಿತದಲ್ಲಿದ್ದ ಬಾಂಗ್ಲಾದೇಶದ ಸರ್ಕಾರ ನಿರ್ಲಜ್ಜವಾಗಿ ಆಕೆಯ ಎಲ್ಲಾ ಕೃತಿಗಳನ್ನು ಬಹಿಷ್ಕರಿಸಿದೆ. ಅಲ್ಲಿನ ಧಾರ್ಮಿಕ ಮುಖಂಡರು ಆಕೆಯನ್ನು ತಲೆದಂಡದಂತಹ ಕ್ರೂರ ಶಿಕ್ಷೆಗೆ ಆಗ್ರಹಿಸುತ್ತಿದ್ದಾರೆ. ಕೆಲವು ಉಗ್ರ ಧಾರ್ಮಿಕ ಸಂಘಟನೆಗಳು ಅವರ ತಲೆಗೆ ಬೆಲೆ ಕಟ್ಟಿವೆ. ಅವರನ್ನು ಹಿಡಿದು ಕೊಟ್ಟವರಿಗೆ ಭಾರಿ ಬಹುಮಾನವನ್ನು ಘೋಷಿಸಿವೆ. ಅವರನ್ನು ಕೊಲ್ಲಲು ನಿರಂತರ ಷಡ್ಯಂತ್ರಗಳನ್ನು ರೂಪಿಸುತ್ತಲೇ ಇವೆ.
"https://kn.wikipedia.org/wiki/ತಸ್ಲೀಮಾ_ನಸ್ರೀನ್" ಇಂದ ಪಡೆಯಲ್ಪಟ್ಟಿದೆ