ತಸ್ಲೀಮಾ ನಸ್ರೀನ್
ಕವಯಿತ್ರಿ, ಪತ್ರಿಕಾ ಬರಹಗಾರ್ತಿ, ಕಾದಂಬರಿಗಾರ್ತಿ
ತಸ್ಲೀಮಾ ನಸ್ರೀನ್(Taslima Nasrin) ಜಾಗೃತ ಸ್ತ್ರೀ ಶಕ್ತಿಯ ಸಂಕೇತ. ಜೊತೆಗೆ ಬಾಂಗ್ಲಾದೇಶದ ವಿವಾದಿತ ಲೇಖಕಿಯೆಂದೇ ಗುರ್ತಿಸಿಕೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ ವೈದ್ಯ ವೃತ್ತಿ ಮಾಡುತ್ತಿದ್ದ ಈಕೆ ತಮ್ಮ ನಲವತ್ತೇಳರ ಹರೆಯದಲ್ಲಿ "ಲಜ್ಜಾ" ಎಂಬ ಕಾದಂಬರಿ ಯನ್ನು ಬರೆಯುವುದರ ಮೂಲಕ ವಿವಾದಕ್ಕೆ ಈಡಾಗಿ[೧], ಅವರ ದೇಶದಲ್ಲಿ ಗಡೀಪಾರಿಗೆ ಗುರಿಯಾದರು. ಕಳೆದ ಕೆಲವು ವರ್ಷಗಳಿಂದ ತಲೆಮರೆಸಿಕೊಂಡು ಬದುಕು ನಡೆಸುತ್ತಿರುವ ಅವರು ನೆಮ್ಮದಿಯ ಗೂಡನ್ನು ಅರಸುತ್ತಾ ಬಾಂಗ್ಲಾದೇಶವನ್ನು ಬಿಟ್ಟು ಬಂದು ಭಾರತದ ಆಶ್ರಯದಲ್ಲಿದ್ದಾರೆ[೨].
ತಸ್ಲೀಮಾ ನಸ್ರೀನ್ | |
---|---|
ಜನನ | Mymensingh, East Pakistan (now Bangladesh) | ೨೫ ಆಗಸ್ಟ್ ೧೯೬೨
ವೃತ್ತಿ | ಕವಯಿತ್ರಿ ,ಬರಹಗಾರ್ತಿ, ಕಾದಂಬರಿಕಾರ್ತಿ |
ಪೌರತ್ವ | ಬಾಂಗ್ಲಾದೇಶ, ಇಂಡಿಯಾ, ಸ್ವೀಡನ್ |
ಕಾಲ | 1973 – present |
ವಿಷಯ | Humanism |
ಸಾಹಿತ್ಯ ಚಳುವಳಿ | ಮಹಿಳಾ ಹಕ್ಕುಗಳು, ಮಾನವೀಯ ಹಕ್ಕುಗಳು , Secular movements |
ಬಾಳ ಸಂಗಾತಿ | Rudra Mohammad Shahidullah (1982-86) Nayeemul Islam Khan (1990-91) Minar Mansoor (1991-92) |
ಸಹಿ | |
taslimanasrin |
ಜನನದ ವಿವರಗಳು
ಬದಲಾಯಿಸಿಹುಟ್ಟಿದ ದಿನ:25 ಆಗಸ್ಟ್ 1962 ; ತಂದೆ; ರಾಜಾಬ್ ಆಲಿ, ತಾಯಿ ಇದುಲ್ ಆರಾ(Rajab Ali and Idul Ara ); ಹುಟ್ಟಿದ ಪ್ರದೇಶ:ಮೈಮೆನ್ಸಿಂಗ್, ಬಾಂಗ್ಲಾದೇಶ್. ತಂದೆ ಒಬ್ಬ ವೈದ್ಯ.[೨]
"ಲಜ್ಜಾ" ಕೃತಿಯೊಳಗೆ
ಬದಲಾಯಿಸಿ- "ಲಜ್ಜಾ" ಕೇವಲ ಒಂದು ಕಾದಂಬರಿಯಾಗಿರದೆ ಅದು ಆ ಕಾಲದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ಸಮಾಜೋಧಾರ್ಮಿಕ ಆಯಾಮಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ೯೦ರ ದಶಕದಲ್ಲಿ ಭಾರತದಲ್ಲಿ ಬಾಬ್ರಿಮಸೀದಿಯನ್ನು ಕೆಡವಿದ ಪ್ರಕರಣವು ನೆರೆಯ ಬಾಂಗ್ಲಾದೇಶದಲ್ಲಿ ಎಷ್ಟೊಂದು ಹಿಂಸಾಚಾರಕ್ಕೆ ಕಾರಣವಾಯಿತೆಂಬುದನ್ನು ಪ್ರತ್ಯಕ್ಷದರ್ಶಿಯಾದ ಲೇಖಕಿ ಅದನ್ನು ನಿಖರವಾದ ಅಂಕಿ-ಅಂಶಗಳ ಮೂಲಕ ಹೇಳುತ್ತಾ ಸಾಗುತ್ತಾರೆ.
- ಬಾಂಗ್ಲಾದೇಶದಲ್ಲಿರುವ ಎರಡೂವರೆ ಕೋಟಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆದ ಮಾರಣಹೋಮ, ಮನೆಗಳ ಲೂಟಿ, ಬೀದಿ ಮಧ್ಯೆಯೇ, ಹಾಡುಹಗಲೇ ನಡೆದ ಪೈಶಾಚಿಕ ಕೃತ್ಯಗಳು, ಸಾಮೂಹಿಕ ಅತ್ಯಾಚಾರಗಳು, ಇದೆಲ್ಲವನ್ನು ಕಂಡರೂ ಜಾಣಮೌನ, ಜಾಣಕುರುಡು ಪ್ರದರ್ಶಿಸುವ ಸರ್ಕಾರದ ರೀತಿ ನೀತಿಗಳು, ಅಮಾಯಕ ಹಿಂದೂಗಳನ್ನು ಬೀದಿ ನಾಯಿಗಿಂತ ಕಡೆಯಾಗಿಸಿ, ಚಿತ್ರಹಿಂಸೆ ನೀಡಿದ ಹೇರಳ ದಾಖಲೆಗಳು ಈ ಕೃತಿಯಲ್ಲಿವೆ.
ತಲೆದಂಡದಂತಹ ಕ್ರೂರ ಶಿಕ್ಷೆಗೆ ಗುರಿಯಾದುದು
ಬದಲಾಯಿಸಿ- ತಮ್ಮವಿವಾದಾತ್ಮಕ ಕಾದಂಬರಿಯಿಂದ ಮುಸ್ಲಿಂ ಮೂಲಭೂತವಾದಿಗಳಿಂದ ಜೀವ ಬೆದರಿಕೆ ಬಂದ ಮೇಲೆ ತಮ್ಮ ತವರೂರು ಬಾಂಗ್ಲಾದೇಶದಿಂದ 1994ರಿಂದ ಸ್ವಯಂ ದೇಶಭ್ರಷ್ಟರಾಗಿರುವ ತಸ್ಲೀಮಾ ನಸ್ರೀನ್ ಸದ್ಯ ಸ್ವೀಡನ್‌ನ ನಾಗರಿಕರು. ಆದರೆ 2004ರಿಂದ ನಿರಂತರವಾಗಿ ಅವರು ಭಾರತೀಯ ವೀಸಾ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ನಡುವೆ ಅವರು ಕಳೆದ ಎರಡು ದಶಕಗಳಲ್ಲಿ ಅಮೇರಿಕಾ, ಯುರೋಪ್ ಮತ್ತು ಭಾರತದಲ್ಲಿ ವಾಸ್ತವ್ಯ ಹೂಡಿದ್ದಾರೆ.
- ಅನೇಕ ಸಂದರ್ಭಗಳಲ್ಲಿ ಅವರು ಭಾರತದಲ್ಲೇ ಶಾಶ್ವತವಾಗಿ ನೆಲೆಸುವ ಆಶಯ ವ್ಯಕ್ತಪಡಿಸಿದ್ದು, ವಿಶೇಷವಾಗಿ ಕೋಲ್ಕತಾದಲ್ಲಿ ಇರಲು ಬಯಸುವುದಾಗಿ ಹೇಳುತ್ತ ಬಂದಿದ್ದಾರೆ. 2007ರಲ್ಲಿ ಮುಸ್ಲಿಮರ ಒಂದು ವರ್ಗದಿಂದ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಸರಣಿಯ ಕಾರಣಕ್ಕೆ ಕೋಲ್ಕತಾವನ್ನು ಬಿಟ್ಟು ತೆರಳಬೇಕಾಗಿ ಬಂದಿತ್ತು[೩]
- ತಸ್ಲೀಮಾ ನಸ್ರೀನ್ ಅವರಿಗೆ ಭಾರತದಲ್ಲಿ ದೀರ್ಘಕಾಲ ವಾಸ ಮಾಡಲು ಅನುಮತಿ ನೀಡುವ ವೀಸಾ ಸೌಲಭ್ಯವನ್ನು ಕೇಂದ್ರ ಸರಕಾರ ಒದಗಿಸಿದೆ[೪].
- ತಸ್ಲೀಮಾ ನಸ್ರೀನ್ ಮಾನವೀಯತೆಯಿಂದ, ಅಮಾಯಕ ಹಿಂದುಗಳ ಮೇಲೆ ನಡೆದ ಹಿಂಸಾಚಾರದಿಂದ ಆರ್ದ್ರಗೊಂಡು ತಮ್ಮ ಕೃತಿಯ ಮೂಲಕ ಸಾತ್ವ್ತಿಕವಾಗಿ ಪ್ರತಿಭಟಿಸುತ್ತಾರೆ. ಅವರು ಮತಧರ್ಮದ, ಮೂಲಭೂತವಾದಿಗಳ ಅಪಾಯಕಾರಿ ಪ್ರವೃತ್ತಿಯನ್ನು ವಸ್ತುವಾಗಿಸಿದ ಈ ಕೃತಿ ಯಿಂದಾಗಿ ಮುಸ್ಲಿಂ ಸಂಘಟನೆಗಳ ನೇರ ವಕ್ರದೃಷ್ಟಿಯನ್ನು ಎದುರಿಸಬೇಕಾಯಿತು.
- ಆಕೆಯನ್ನು ಬಾಂಗ್ಲಾದೇಶ ಗಡೀಪಾರು ಮಾಡಲು ಕಾರಣ ಒಬ್ಬ ಮುಸ್ಲಿಂ ಮಹಿಳೆಯಾಗಿದ್ದು ಕೊಂಡು ಕೃತಿಯಲ್ಲಿ ಹಿಂದೂಗಳನ್ನು ಸಹೋದರರಂತೆ ಚಿತ್ರಿಸಿದ್ದು. ಧರ್ಮಾಂಧರ ಹಿಡಿತದಲ್ಲಿದ್ದ ಬಾಂಗ್ಲಾದೇಶದ ಸರ್ಕಾರ ನಿರ್ಲಜ್ಜವಾಗಿ ಆಕೆಯ ಎಲ್ಲಾ ಕೃತಿಗಳನ್ನು ಬಹಿಷ್ಕರಿಸಿದೆ. ಅಲ್ಲಿನ ಧಾರ್ಮಿಕ ಮುಖಂಡರು ಆಕೆಯನ್ನು ತಲೆದಂಡದಂತಹ ಕ್ರೂರ ಶಿಕ್ಷೆಗೆ ಆಗ್ರಹಿಸುತ್ತಿದ್ದಾರೆ. ಕೆಲವು ಉಗ್ರ ಧಾರ್ಮಿಕ ಸಂಘಟನೆಗಳು ಅವರ ತಲೆಗೆ ಬೆಲೆ ಕಟ್ಟಿವೆ. ಅವರನ್ನು ಹಿಡಿದು ಕೊಟ್ಟವರಿಗೆ ಭಾರಿ ಬಹುಮಾನವನ್ನು ಘೋಷಿಸಿವೆ. ಅವರನ್ನು ಕೊಲ್ಲಲು ನಿರಂತರ ಷಡ್ಯಂತ್ರಗಳನ್ನು ರೂಪಿಸುತ್ತಲೇ ಇವೆ.
ಸಾಹಿತ್ಯದ ಕೃಷಿ
ಬದಲಾಯಿಸಿ- The Game in Reverse: Poems and Essays by Taslima Nasrin 1995
- ಷಿಕೋರೇ ಬಿಪುಲ್ ಖುಧಾ (Hunger in the Roots), 1986
- ನಿರ್ಭಾಷಿತೋ ಬಾಹಿರೇ ಓಂತೊರೇ (Banished Without and Within ), 1989
- ಅಮರ್ ಕೀಚೂ ಅಷೇ ನೇ(I Couldn’t Care Less), 1990
- ಆತೋಲೇ ಓಂತೊರಿನ್ (Captive In the Abyss), 1991
- ಬಾಲಿಕರ್ ಗೊಲ್ಲಾ ಚೂತ್ (ಬಾಲಕಿಯರ ಆಟೆ), 1992
- ಬೆಹೂಲಾ ಫ್ಲಾಟೆಡ್ ದಿ ರಾಫ್ ಅಲೊನ್ (Behula Floated the Raft Alone), 1993
- ಆಯ್ ಕೊಸ್ಟೋಝೇಪೇ,ಜೀಬೊನ್ ದೇಭೋಮೇಪೇ (Pain Come Roaring Down, I’ll Measure Out My Life for You), 1994
- నిర్బాషితో నరీర్ కొబితా (నిర్వాసము నుండి పద్యాలు), 1996
- ಜೊಲೊಪೊದ್ಯೋ (ಚಂಗಳವೆ), 2000
- ಖಾಳೀ ಖಾಳೀ ಲಗೇ (Feeling Empty), 2004
- ಖಿಚ್ಚುಕ್ಕನ್ ಥಾಕೋ (ಸ್ವಲ್ಪ ತಡಿ ), 2005
- ನಿರ್ಬಾಚಿತೋ ಕಾಲಮ್ (ಆಯ್ದ ಕಾಲಮ್ಸ್)
- ಜಾಬೋನ ಕೇನೋ ಜಾಬೋ (ನಾನು ಹೋಗುವುದಿಲ್ಲ; ಏಕೆ ಹೋಗಬೇಕು?)
- ನೊಷ್ಟೊ ಮೇಯೇರ್ ನೊಷ್ಟೊ ಗೊದ್ದೋ(Corrupt prose of a corrupt girl)
- ಛೋಟೋ ಛೋಟೋ ದುಖ್ಖೋಕೊಥಾ (ಸಣ್ಣ ಸಣ್ಣ ಕಷ್ಟಗಳ ಕಥೆ)
ನಿಷೇಧಿಸಲಾಗಿದ್ದ ಕೃತಿಗಳು
ಬದಲಾಯಿಸಿಈ ಕೆಳಗಿನ ಕೃತಿಗಳನ್ನು ಬಾಂಗ್ಲಾದೇಶದಲ್ಲಿ ನಿಷೇಧಿಸಲಾಗೆದೆ[೫]
- ಲಜ್ಜಾ(lajja:shame):
- ಅಮರ್ ಮೆಯೇ ಬೆಲ(Amar Meyebela)
- ಉತಲ್ ಹವಾ(Utal Hawa)
- ದ್ವೀಖೋಂದಿತೋ(Dwikhondito)
- ಕೊ(Ko)
- ಸೆಯ್ ಸಬ್ ಅಂಥಕಾರ್(Sei Sob Ondhokar)
ಗ್ರಂಥ ನೆರವು
ಬದಲಾಯಿಸಿ- ಲಜ್ಜಾ - ಹಿಂದಿ: ತಸ್ಲೀಮಾ ನಸ್ರೀನ್, ಕನ್ನಡಕ್ಕೆ : ರಾಮಣ್ಣ ಆರೆಜ್ಜೆ
ಉಲ್ಲೇಖ
ಬದಲಾಯಿಸಿ- ↑ "One can't live in fear for 25 years: Taslima Nasrin". dnaindia.com. 26 September 2014. Retrieved 2015-04-12.
- ↑ ೨.೦ ೨.೧ ೨.೨ ೨.೩ "Biography of Taslima Nasrin". poemhunter.com. Retrieved 2015-04-12.
- ↑ "ಗೃಹಸಚಿವರ ಭೇಟಿಯಾದ ತಸ್ಲೀಮಾನಸ್ರೀನ್". vijaykar nataka.indiatimes.com. 2014-08-02. Retrieved 2015-04-13.
- ↑ "ತಸ್ಲೀಮಾಗೆ ಭಾರತದಲ್ಲಿ ವಾಸಕ್ಕೆ ವೀಸಾ ಸೌಲಭ್ಯ". vbnewsonline.com. 2014-08-03. Retrieved 2015-04-13.
- ↑ "Taslima's Banned Books". taslimanasrin.com. Archived from the original on 2015-01-06. Retrieved 2015-04-13.
Wikimedia Commons has media related to Taslima Nasrin.