ಆರ್ಮೇನಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 202 interwiki links, now provided by Wikidata on d:q399 (translate me)
ವಿಸ್ತರಣೆ
೬೮ ನೇ ಸಾಲು:
|footnote3 = Rank based on 2005 UN estimate of ''de facto'' population.
}}
'''ಆರ್ಮೇನಿಯ''' ({{lang|hy|Հայաստան}} ''ಹಯಾಸ್ಥಾನ್''), ಅಧಿಕೃತವಾಗಿ '''ಆರ್ಮೇನಿಯ ಗಣರಾಜ್ಯ''', [[ಕಪ್ಪು ಸಮುದ್ರ]] ಮತ್ತು [[ಕ್ಯಾಸ್ಪಿಯನ್ ಸಮುದ್ರ]]ಗಳ ಮಧ್ಯದ [[ಯುರೇಷ್ಯಾ]]ದಲ್ಲಿರುವ ಒಂದು ಭೂಆವೃತ ರಾಷ್ಟ್ರ.ಇದು ೧೯೯೧ರಲ್ಲಿ ಸ್ವಾತಂತ್ರ್ಯ ಪಡೆಯಿತು.
ಸೋವಿಯತ್ ಗಣರಾಜ್ಯಗಳಲ್ಲೊಂದಾಗಿದ್ದ ಹಳೆಯ ಆರ್ಮೇನಿಯ ದೇಶದ ವಿಸ್ತಾರ ೧೦೩,೬೦೦ ಚ.ಕಿಮೀ. ಈ ರಾಜ್ಯ ಪ್ರ.ಶ.ಪು. ೬ನೆಯ ಶತಮಾನದಲ್ಲಿ ಸ್ವತಂತ್ರ್ಯ ರಾಜ್ಯವಾಗಿತ್ತು. ಕೆಲವು ಕಾಲದ ಮೇಲೆ ಇದು ರೋಮ್ ಸಾಮ್ರಾಜ್ಯದ ಒಂದು ಅಂಗವಾಯಿತು. [[ಮಧ್ಯಯುಗ]]ದಲ್ಲಿ ಮತ್ತೆ ಸ್ವತಂತ್ರ್ಯವಾದ ಈ ರಾಜ್ಯದಲ್ಲಿ ಅಲ್ಲಿಯ ಅರಸರು ಆಳುತ್ತಿದ್ದರು. ೧೪೦೦ರಿಂದ ಮುಂದೆ ಇದನ್ನು ತುರುಕರು ಮತ್ತು ಪಾರ್ಸಿಗಳು ತಮ್ಮ ತಮ್ಮೊಳಗೆ ಹಂಚಿಕೊಂಡರು. ೧೯ನೆಯ ಶತಮಾನದ ಆರಂಭದ ಇದರ ಬಹಳ ಭಾಗವನ್ನು ರಷ್ಯದವರು ಗೆದ್ದುಕೊಂಡರು. ಒಂದನೆಯ ಮಹಾಯುದ್ಧದ ಕಾಲದವರೆಗೆ ಇದರಲ್ಲಿ ತುರುಕರು, ಪಾರ್ಸಿಗಳು ಮತ್ತು ರಷ್ಯನ್ನರಿಗೆ ಸೇರಿದ ಮೂರು ಭಾಗಗಳಿದ್ದುವು.
[[File:Cilician Armenia-en.svg|250px|thumb|left| 1199–1375 ರಲ್ಲಿ ಆರ್ಮೇನಿಯ ಸಾಮ್ರಾಜ್ಯ.]]
 
೧೯ನೆಯ ಶತಮಾನದ ಅಂತ್ಯಕ್ಕೆ ತುರುಕರು ಆರ್ಮೇನಿಯರ ಕೊಲೆ ಮಾಡತೊಡಗಿದರು. ಆದುದರಿಂದ ಯುರೋಪಿನಲ್ಲಿ ಆರ್ಮೇನಿಯನ್ನರ ಬಗೆಗೆ ಸಹಾನುಭೂತಿ ಮತ್ತು ಆತ್ಮೀಯ ಭಾವಗಳು ಹುಟ್ಟಿದುವು. ೧೯೦೮ರಲ್ಲಿ ತುರುಕ ಯುವಕರು ಹೆಚ್ಚಾದ ವ್ಯವಸ್ಥಿತ ರೀತಿಯಲ್ಲಿ ಆರ್ಮೇನಿಯರ ಕೊಲೆಯ ಕಾರ್ಯವನ್ನು ಕೈಗೊಂಡರು. ಆಗ ಸು. ೮೦,೦೦೦ ಆರ್ಮೇನಿಯನ್ನರು ಕೊಲ್ಲಲ್ಪಟ್ಟರೆಂದು ತಿಳಿದುಬಂದಿದೆ.
[[File:Morgenthau336.jpg|thumb|[[ಆರ್ಮೇನಿಯನ್ ನರಮೇಧ]]ದ ಬಲಿಪಶುಗಳು-1915]]
 
ಆ ರೀತಿಯಲ್ಲಿ ಆರ್ಮೇನಿಯ ಗಣರಾಜ್ಯ ೧೯೧೮ರಲ್ಲಿ ತಲೆಯೆತ್ತಿತು. ಯುರೋಪಿನ ಶಕ್ತಿಕೂಟದವರು ಇದನ್ನು ೧೯೨೦ರಲ್ಲಿ ಮನ್ನಿಸಿದರು. ಆದರೆ ಇದರ ಬಾಳ್ವೆ ನಾನಾ ಬಗೆಯಾಗಿ ಕೆಲವೇ ವರ್ಷಗಳಲ್ಲಿ ಕೊನೆಗೊಂಡಿತು. ಆಗ ಇಲ್ಲಿ ಬೋಲ್ಷೆವಿಸ್ಟರ ಪ್ರಭಾವ ಬೆಳೆಯುತ್ತಿದ್ದುದರಿಂದ ೧೯೨೧ರಲ್ಲಿ ಸೋವಿಯತ್ ಮಾದರಿಯ ಗಣರಾಜ್ಯ ರೂಪುಗೊಂಡಿತು.
 
 
ಕ್ರೈಸ್ತಪಂಥ ೩ನೆಯ ಶತಮಾನದಲ್ಲಿ ಮೊದಲು ಇಲ್ಲಿ ತಳವೂರಿತು. ಆಡಳಿತ ಮತ್ತು ನಿಯಮಾಚರಣೆಗಳಲ್ಲಿ ಇದು ಗ್ರೀಕರ ಕ್ರೈಸ್ತಪಂಥವನ್ನು ಹೋಲುತ್ತದೆಯಾದರೂ ತಮ್ಮ ಧರ್ಮದ ಹಿರಿಯರ ಅಧಿಕಾರದಲ್ಲಿ ಇದು ಬೇರೆಯಾಗಿಯೇ ಇದೆ. ಜಗತ್ತಿನಲ್ಲಿ ಇದೇ ಅತಿ ಪ್ರಾಚೀನವಾದ ಕ್ರೈಸ್ತಪಂಥವೆಂದು ಪ್ರತೀತಿ.
[[ವರ್ಗ:ಪಶ್ಚಿಮ ಏಷ್ಯಾ]]
[[ವರ್ಗ:ಏಷ್ಯಾ ಖಂಡದ ದೇಶಗಳು]]
"https://kn.wikipedia.org/wiki/ಆರ್ಮೇನಿಯ" ಇಂದ ಪಡೆಯಲ್ಪಟ್ಟಿದೆ