ಕಾಳಿದಾಸ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೪೭ ನೇ ಸಾಲು:
* [[ವಿಕ್ರಮೋರ್ವಶೀಯಮ್]]
 
ಮೇಘದೂತವು ಸಂಸ್ಕೃತ ಸಾಹಿತ್ಯದಲ್ಲಿ ದೂತಕಾವ್ಯವೆಂದೂ, ಸಂದೇಶಕಾವ್ಯವೆಂದೂ ಪ್ರಖ್ಯಾತವಾಗಿದೆ. 'ಅಭಿಜ್ಞಾನಶಾಕುಂತಲ'ವಂತೂ ವಿಶ್ವದ ಅತ್ಯುತ್ತಮ ನಾಟಕಗಳಲ್ಲೊಂದು ಎಂದು ಪ್ರಸಿದ್ಧ. ಇದನ್ನು ಓದಿದ ಜರ್ಮನ್ ಪ್ರಸಿದ್ಧ ಕವಿ ಗೋಏಟೇ ಅತ್ಯಂತ ವಿಮುಗ್ಧನೂ ಪರಮಾನಂದಿತ ನೂ ಆಗಿದ್ದುದು ಸರ್ವಶ್ರುತ. ಈ ನಾಟಕವು ಪ್ರಪಂಚದ ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ. ಉಪಮಾಲಂಕಾರವನ್ನು ಪ್ರಯೋಗಿಸುವದರಲ್ಲಿ ಕಾಳಿದಾಸನ ಶ್ರೇಷ್ಠತೆಯು ಸರ್ವತ್ರ ಪ್ರಸಿದ್ಧಿಯಾಗಿದೆ.
 
ಕಾಳಿದಾಸನ ಕೃತಿಗಳನ್ನು ಅಧ್ಯಯನ ಮಾಡಿದ ವಿದ್ವಾಂಸರು ‘ಋತುಸಂಹಾರ’ವು ಅವನ ಮೊದಲ ರಚನೆಯೆಂದೂ, ‘ಅಭಿಜ್ಞಾನ ಶಾಕುಂತಲ’ವು ಕೊನೆಯ ಕೃತಿಯೆಂದೂ ಅಭಿಪ್ರಾಯಪಡುತ್ತಾರೆ. ಯೌವನದಲ್ಲಿ ಕಾಲಿಡುತ್ತಿರುವ ಬಿಸಿರಕ್ತದ ಕವಿಯು ವಿವಿಧ ಋತುಗಳಲ್ಲಿ ಕಂಡು ಬರುವ ಪ್ರಕೃತಿಯ ಚೆಲುವಿಗೆ ಮನಸೋತು, ಅದನ್ನು ಕಾವ್ಯದಲ್ಲಿ ಸೆರೆ ಹಿಡಿದಿರುವುದು ಸಹಜವೇ ಆಗಿದೆ. ಈ ಖಂಡಕಾವ್ಯವನ್ನು ರಚಿಸಿದ ತರುಣದಲ್ಲೇ ಕವಿಗೆ ಆಸ್ಥಾನದಿಂದ ಕರೆ ಬಂದು ಅವನು ‘ಮಾಲವಿಕಾಗ್ನಿಮಿತ್ರ’ವನ್ನು ರಚಿಸಿರಬೇಕು.
 
ಈ ನಾಟಕದಲ್ಲಿ ಕವಿಯು ತನ್ನ ಕವಿತಾಮಾರ್ಗವನ್ನು ಕಂಡು ಕೊಳ್ಳುತ್ತಿದ್ದಾನೆ. ಇಮ್ಮಡಿ ಚಂದ್ರಗುಪ್ತನ ರಾಯಭಾರಿಯಾಗಿ ದಕ್ಷಿಣದ ಕುಂತಲ ದೇಶಕ್ಕೆ ಹೋಗಬೇಕಾಗಿ ಬಂದಾಗ, ತನ್ನ ಪ್ರಿಯತಮೆಯ ವಿರಹವನ್ನು ಯಕ್ಷನ ವಿರಹವೆಂದು ಸಮನ್ವಯಗೊಳಿಸಿ ಹೊರಹೊಮ್ಮಿಸಿದ ಭಾವಗೀತೆಯೇ ‘ಮೇಘದೂತ’. ಯಕ್ಷನ ಸಂದೇಶವನ್ನು ಹೊತ್ತ ಮೇಘವು ದಕ್ಷಿಣದಿಂದ ಉತ್ತರಕ್ಕೆ ಪ್ರಯಾಣಿಸಿರುವದು ಗಮನಾರ್ಹ. ಮೇಘದೂತವು ಸಂಸ್ಕೃತ ಸಾಹಿತ್ಯದಲ್ಲಿ ದೂತಕಾವ್ಯವೆಂದೂ, ಸಂದೇಶಕಾವ್ಯವೆಂದೂ ಪ್ರಖ್ಯಾತವಾಗಿದೆ.
 
ಕವಿಯ ನಡುವಯಸ್ಸಿನ ಕೃತಿ ‘ಕುಮಾರಸಂಭವ’. ತನ್ನ ಪೋಷಕ ರಾಜನಿಗೆ ಮಗ ಹುಟ್ಟಿದ ನೆನಪಿಗೆ ಇದರ ರಚನೆಯಾಗಿರಬಹುದು. ತನ್ನ ಅರಸನ ಕೀರ್ತಿ-ಪರಾಕ್ರಮಗಳನ್ನು ಕಂಡು ಅವನ್ನು ಉದ್ಘೋಷಿಸಲು ಬರೆದ ನಾಟಕವೇ ‘ವಿಕ್ರಮೋರ್ವಶೀಯ’ ಎಂದೆನ್ನುತ್ತಾರೆ ವಿದ್ವಾಂಸರು.
 
ಇದಾದ ನಂತರ ತುಂಬು ಜೀವನದ ಎರಡು ಪಕ್ವ ಕೃತಿಗಳು ವಿರಚಿತವಾದವು. ಒಂದು- ಮಹಾಕಾವ್ಯ ‘ರಘುವಂಶ’.

ಮತ್ತೊಂದು ಹಾಗೂ ಕೊನೆಯದೆಂದೆಣಿಸಲಾದ ನಾಟಕ ‘ಅಭಿಜ್ಞಾನ ಶಾಕುಂತಲ’. ಇದು ವಿಶ್ವದ ಅತ್ಯುತ್ತಮ ನಾಟಕಗಳಲ್ಲೊಂದು ಎಂದು ಪ್ರಸಿದ್ಧ. ಇದನ್ನು ಓದಿದ ಜರ್ಮನ್ ಪ್ರಸಿದ್ಧ ಕವಿ ಗೋಏಟೇ ಅತ್ಯಂತ ವಿಮುಗ್ಧನೂ ಪರಮಾನಂದಿತ ನೂ ಆಗಿದ್ದುದು ಸರ್ವಶ್ರುತ. ಈ ನಾಟಕವು ಪ್ರಪಂಚದ ಅನೇಕ ಭಾಷೆಗಳಿಗೆ ಅನುವಾದಗೊಂಡಿದೆ. ಈ ನಾಟಕವನ್ನು ಬರೆಯುವ ವೇಳೆಗೆ ಕವಿಗೆ ತನ್ನ ಶಕ್ತಿಯಲ್ಲಿ ಅಪಾರ ಆತ್ಮವಿಶ್ವಾಸ ವಿದ್ದು, ತನ್ನ ಬದುಕು ಧನ್ಯವಾಯಿತೆಂಬ ಭಾವನೆ ಮೂಡಿದೆ. ಇದರ ಫಲವಾಗಿ, "ಈ ಭವದಿಂದ ನನಗೆ ಬಿಡುಗಡೆಯಾಗಲಿ; ಮರುಹುಟ್ಟನು ನನಗೆ ಆ ಮಹೇಶನು ಕರುಣಿಸದಿರಲಿ" ಎಂದು ಪ್ರಾರ್ಥಿಸುತ್ತಾ ನಾಟಕವನ್ನು ಕವಿಯು ಮುಗಿಸುತ್ತಾನೆ. ಬದುಕಿನಲ್ಲಿ ಕೃತಕೃತ್ಯನಾದವನು ಆಡುವ ಭರತವಾಕ್ಯವಿದು, ಎನ್ನುತ್ತಾರೆ ವಿಮರ್ಶಕರು<Ref>ಅವಲೋಕನ - ಬಸಪ್ಪಶಾಸ್ತ್ರೀ (ವಿರಚಿತ) ಕರ್ಣಾಟಕ ಶಾಕುಂತಲ ನಾಟಕಂ - ಸಂಪಾದಕ: ಎಚ್ ಎಮ್ ಶಂಕರನಾರಾಯಣರಾವ್ - ಶಾರದಾ ಮಂದಿರ, ಪ್ರಕಾಶಕರು, ಮೈಸೂರು - ಐದನೆಯ ಮುದ್ರಣ: ೧೯೭೯ </Ref>.
 
==ಕನ್ನಡದಲ್ಲಿ ಕಾಳಿದಾಸನ ಕೃತಿಗಳು ==
"https://kn.wikipedia.org/wiki/ಕಾಳಿದಾಸ" ಇಂದ ಪಡೆಯಲ್ಪಟ್ಟಿದೆ