ಕನ್ನಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭೨ ನೇ ಸಾಲು:
 
== ಕನ್ನಡ ಉಪಭಾಷೆಗಳು ==
ಬರೆಯಲು ಉಪಯೋಗಿಸುವ ಮತ್ತು ಮಾತನಾಡುವ ಭಾಷೆಯಲ್ಲಿ ಇರುವ ವ್ಯತ್ಯಾಸ ಇತರ ಭಾಷೆಗಳಲ್ಲಿ ಇರುವಂತೆ ಕನ್ನಡದಲ್ಲಿಯೂ ಇದೆ. ಮಾತನಾಡಲು ಉಪಯೋಗಿಸುವ ಕನ್ನಡ ಪ್ರದೇಶಕ್ಕೆ ಅನುಸಾರವಾಗಿ ಬದಲಾಗುತ್ತದೆ. ಆದರೆ ಬರೆಯಲು ಉಪಯೋಗಿಸುವ ಕನ್ನಡ ಕರ್ಣಾಟಕದ ಹೆಚ್ಚಿನ ಎಲ್ಲೆಡೆ ಒಂದೇ ಬಗೆಯದಾಗಿದೆ. ಕುಂದಗನ್ನಡ, ಹವಿಗನ್ನಡ, ಅರೆಭಾಷೆ, ಸೋಲಿಗ ಕನ್ನಡ ಎನ್ನುವಂಥ ಇಪ್ಪತ್ತರಷ್ಟು ಉಪಭಾಷೆಗಳು ಕನ್ನಡಕ್ಕಿವೆ. <ref name="ethnologue">''http://www.ethnologue.com/language/kan 20 dialects of Kannada''.</ref>ಇವುಗಳಲ್ಲಿ ಕುಂದಗನ್ನಡ ಕುಂದಾಪುರದ ಸಮೀಪ ಮಾತನಾಡಲು ಉಪಯೋಗಿಸುವ ಭಾಷೆಯಾಗಿದ್ದು ಇದರಂತೆಯೇ ಹವ್ಯಕ ಮತ್ತು ಸೋಲಿಗ ಕನ್ನಡ ಆಯಾ ಸಮುದಾಯಕ್ಕೆ ಸೇರಿದವರು ಮಾತನಾಡಲು ಉಪಯೋಗಿಸುವ ಭಾಷೆಯಾಗಿದೆ. ಹೀಗೆ ಪ್ರದೇಶಕ್ಕೂ ಸಮುದಾಯಕ್ಕೂ ಅಳವಟ್ಟ ಇತರ ಕನ್ನಡ ಉಪಭಾಷೆಗಳೆಂದರೆ ನಾಡವ ಕನ್ನಡ, ಮಲೆನಾಡ ಕನ್ನಡ, ಧಾರವಾಡದ ಕನ್ನಡ ಮುಂತಾದುವುಗಳು.
 
ಕನ್ನಡದ ಒಂದು ಉಪಭಾಷೆಯಂತೆಯೇ ತೋರಿಬರುವ ಭಾಷೆಯೆಂದರೆ ಬಡಗ ಭಾಷೆ. ಆದರೆ ಬಡಗ ಭಾಷೆಯನ್ನು ಬರೆಯಲು ಇಂದಿಗೆ ಕನ್ನಡ ಲಿಪಿಯನ್ನು ಉಪಯೋಗಿಸುತ್ತಲಿಲ್ಲ. ಬಡಗ ಮಾತ್ರವಲ್ಲದೆ ಕನ್ನಡದೊಂದಿಗೆ ನಿಕಟ ಸಾಮ್ಯವನ್ನು ಹೊಂದಿರುವಂಥ ಭಾಷೆಗಳಾಗಿವೆ ಹೊಲಿಯ ಮತ್ತು ಉರಾಳಿ.
"https://kn.wikipedia.org/wiki/ಕನ್ನಡ" ಇಂದ ಪಡೆಯಲ್ಪಟ್ಟಿದೆ