ಯುಕ್ರೇನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯೧ ನೇ ಸಾಲು:
 
10 ಸಾವಿರ ಮೀಟರ್ ಎತ್ತರದಲ್ಲಿ ಮೇಲೆ ಹಾರುತ್ತಿದ್ದ ವಿಮಾನ ಇದಕ್ಕಿದ್ದಂತೆ ರಾಡರ್ ಸಂಪರ್ಕ ತಪ್ಪಿದ್ದು, ನಂತರ ಅದು ಉಕ್ರೇನ್ ಬಂಡುಕೋರರ ಡಾನೆಸ್ಕ್ ಪ್ರಾಂತ್ಯದ ಶಾಕ್ಟರ್‌ಸ್ಕ್ ಪಟ್ಟಣದ ಸಮೀಪ ಕೆಳಕ್ಕುರುಳಿದೆ. ತುರ್ತು ಸೇವಾ ಸಿಬ್ಬಂದಿ ತಂಡಗಳು ಸ್ಥಳಕ್ಕೆ ಧಾವಿಸಲು ಮುಂದಾಗಿವೆ.
ವಿಮಾನವು ಅಮ್‌ಸ್ಟರ್‌ಡಮ್‌ನಲ್ಲಿ ಕಡೆಯದಾಗಿ ಸಂಪರ್ಕ ಕಳೆದುಕೊಂಡಿತು. ಉಕ್ರೇನ್ ವಾಯು ಗಡಿಯನ್ನು ದಾಟಿದ ವಿಮಾನ, ರಷ್ಯಾ ವೈಮಾನಿಕ ನೆಲೆಯನ್ನು ಪ್ರವೇಶಿಸಿರಬಹುದು ಎಂದು ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
 
ರಷ್ಯಾ ವಿರುದ್ಧ ದೂರು: ''ಉಕ್ರೇನ್ ಸೇನೆಯ ಕೆಲವು ವಿಮಾನಗಳನ್ನು ಕ್ಷಿಪಣಿಗಳಿಂದ ಹೊಡೆದುರುಳಿಸಿದ ಘಟನೆಗಳು ಇತ್ತೀಚಿನ ವಾರಗಳಲ್ಲಿ ನಡೆದಿವೆ. ಉಕ್ರೇನ್ ಬಂಡುಕೋರರಿಗೆ ರಷ್ಯಾ ಸೇನೆಯು ಆಧುನಿಕ ಕ್ಷಿಪಣಿಗಳನ್ನು ಸರಬರಾಜು ಮಾಡಿದೆ. ತನ್ನ ವಿಮಾನವೊಂದರ ಮೇಲೆ ರಷ್ಯಾ ವಾಯು ಸೇನೆಯು ದಾಳಿ ನಡೆಸಿದೆ,'' ಎಂದು ಉಕ್ರೇನ್ ಅಧಿಕಾರಿಗಳು ದೂರಿದ್ದಾರೆ.
 
ಹಿಂದೆ ಉಕ್ರೇನ್ ಅಧ್ಯಕ್ಷರಾಗಿದ್ದ ಅವಿಕ್ಟರ್ ಯಾನ್‌ಕೋವಿಚ್ ಪದಚ್ಯುತಿಗೆ ದೇಶದಲ್ಲಿ ಆಂತರಿಕ ಸಂಘರ್ಷಗಳು ಹೆಚ್ಚಿ, ಅವರು ಕಳೆದ ಫೆಬ್ರವರಿಯಲ್ಲಿ ತಲೆ ಮರೆಸಿಕೊಂಡಿದ್ದರು. ಆ ನಂತರ ರಷ್ಯಾ ಮತ್ತು ಉಕ್ರೇನ್ ನಡುವೆ ತಿಕ್ಕಾಟ ಆರಂಭವಾಗಿತ್ತು.
 
ರಷ್ಯಾ ಪರ ಪ್ರತ್ಯೇಕತಾದಿ ಬಂಡುಕೋರರು ಉಕ್ರೇನ್ ಪೂರ್ವದ ಲುಹಾನ್ಸ್ ಮತ್ತು ಡಾಂಟೆಸ್ಕ್ ಪ್ರಾಂತ್ಯದಲ್ಲಿ ಹೋರಾಟ ಮಾಡುತ್ತಿದ್ದಾರೆ. ಬಂಡುಕೋರರ ಮಟ್ಟ ಹಾಕಲು ಉಕ್ರೇನ್ ಸೇನೆಗಳು ಹೋರಾಟ ನಡೆಸಿವೆ. ಬಂಡುಕೋರರಿಗೆ ಟ್ಯಾಂಕರ್‌ಗಳು, ಸೇನಾ ಸಾಧನ ಸಲಕರಣೆ, ಅಸ್ತ್ರಗಳನ್ನು ರಷ್ಯಾ ಸರಬರಾಜು ಮಾಡುತ್ತಿದೆ. ಗಡಿಯನ್ನು ಅಕ್ರಮವಾಗಿ ನುಸುಳಿ ಬಂಡುಕೋರರಿಗೆ ರಷ್ಯಾ ನೆರವಾಗುತ್ತಿದೆ ಎಂದು ಉಕ್ರೇನ್ ದೂರಿದೆ.
 
ತನಿಖೆಗೆ ಆದೇಶ: ವಿಮಾನವನ್ನು ಕ್ಷಿಪಣಿಯಿಂದ ಹೊಡೆದು ಉರುಳಿಸಲಾಗಿದೆ ಎಂದು ಉಕ್ರೇನ್ ಅಧ್ಯಕ್ಷ ಪೊರೊಶೇಂಕೊ ಹೇಳಿದ್ದು, ಉಕ್ರೇನ್ ಪ್ರಧಾನಿ ಅರ್ಸೆನಿ ಯತ್ಸೆನ್ಯುಕ್ ಅವರು ತನಿಖೆಗೆ ಆದೇಶಿಸಿದ್ದಾರೆ.
 
== ಮಲೇಷ್ಯಾ ವಿಮಾನ ಗುರಿಯಾಗಿದ್ದು ಹೇಗೆ? ==
ಉಕ್ರೇನ್ ಮತ್ತು ರಷ್ಯಾ ನಡುವೆ ತಿಕ್ಕಾಟ ಇದ್ದರೂ, ಇಲ್ಲಿ ಮಲೇಷ್ಯಾ ವಿಮಾನ ಬಲಿಯಾಗಿದ್ದು ಹೇಗೆ ಅನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ. ಉಕ್ರೇನ್ ಮಾರ್ಗವಾಗಿ ಹಾದು ಹೋದ ವಿಮಾನವು ಆಕಸ್ಮಿಕವಾಗಿ ದಾಳಿಗೆ ಗುರಿಯಾಯಿತೇ ಅಥವಾ ಉದ್ದೇಶ ಪೂರ್ವಕವಾಗಿ ದಾಳಿ ನಡೆದಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
''ಉಕ್ರೇನ್ ಸರಕಾರದ ಸೇನೆಯೇ ವಿಮಾನವನ್ನು ಹೊಡೆದುರುಳಿಸಿದೆ,'' ಎಂದು ಉಕ್ರೇನ್ ಬಂಡುಕೋರ ನಾಯಕ ಅಲೆಕ್ಸಾಂಡರ್ ಬೋರೊಡೈ ಹೇಳಿದ್ದಾನೆ. ಇದನ್ನು ತಳ್ಳಿ ಹಾಕಿರುವ ಉಕ್ರೇನ್, ''ಮಲೇಷ್ಯಾ ವಿಮಾನವು ಅಂತಾರಾಷ್ಟ್ರೀಯ ವಿಮಾನವಾಗಿದ್ದು, ಇದನ್ನು ಹೊಡೆದಿದ್ದು ರಷ್ಯಾ ಪರ ಪ್ರತ್ಯೇಕತಾವಾದಿಗಳು. ನಮ್ಮ ದೇಶದ ಮೇಲೆ ಕೆಟ್ಟ ಅಭಿಪ್ರಾಯ ಮೂಡಲೆಂದು ಪ್ರತ್ಯೇಕತಾವಾದಿಗಳು ಯತ್ನಿಸಿದ್ದಾರೆ,'' ಎಂದು ವಾದಿಸುತ್ತಿದೆ. ಈ ಮಧ್ಯೆ, ''ನಮ್ಮ ಸೇನೆ ಯಾವುದೇ ವಿಮಾನವನ್ನು ಗುರಿಯಾಗಿಸಿಕೊಂಡು ಹೊಡೆದುರುಳಿಸಿಲ್ಲ,'' ಎಂದು ಉಕ್ರೇನ್ ಅಧ್ಯಕ್ಷ ಪೀಟ್ರೊ ಪೊರೊಶೆನ್ಕೊ ಹೇಳಿದ್ದಾರೆ.
 
== ನೋಡಿ ==
"https://kn.wikipedia.org/wiki/ಯುಕ್ರೇನ್" ಇಂದ ಪಡೆಯಲ್ಪಟ್ಟಿದೆ