ಆದಿ ಶಂಕರರು ಮತ್ತು ಅದ್ವೈತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೩೩ ನೇ ಸಾಲು:
*ಈಶ್ವರ - ಸಗುಣ ಬ್ರಹ್ಮ : ಪರಬ್ರಹ್ಮ ವು ನಿರ್ಗುಣ ಸ್ವರೂಪದ್ದಾಗಿದೆ. ಮಾಯೆಯು ಬ್ರಹ್ಮನ ಶಕ್ತಿ . ಅದು ಪರಬ್ರಹ್ಮನೊಡನೆ ಸೇರಿ ಅಪರಬ್ರಹ್ಮ ಎನಿಸಿಕೊಳ್ಳುತ್ತದೆ ಮತ್ತು ಸಗುಣ ಬ್ರಹ್ಮವೆನಿಸಿಕೊಳ್ಳುತ್ತದೆ. ಅದೇ ಈಶ್ವರ, ಸೃಷ್ಟಿಕರ್ತ. ಆದರೆ ಬ್ರಹ್ಮ ನಿಗೆ ಮಾಯೆಯ ಸೋಂಕು ಇಲ್ಲ. ಅದು [ಮಾಯೆ] ಬ್ರಹ್ಮನನ್ನು ಆಶ್ರಯಿಸಿ ಪ್ರಪಂಚವನ್ನು ಅಲ್ಲಿ ತೋರಿಸುತ್ತದೆ. ಅದು ಪಾರಮಾರ್ಥಿಕ ಸತ್ಯವಲ್ಲ. ವ್ಯವಹಾರಿಕ ಸತ್ಯ. ಅದನ್ನು ಸರಿಯಾಗಿ ವಿವರಿಸುವುದು ಅಸಾಧ್ಯ. ಆದ್ದರಿಂದ ಅದು ಅನಿರ್ವಚನೀಯ. ಅದು ಅನಾದಿ. ಅದು ತನ್ನ ವಿಕ್ಷೇಪ ಶಕ್ತಿಯಿಂದ ಬ್ರಹ್ಮವು ಜೀವವಾಗಿ ಕಾಣುವಂತೆ ಮಾಡುತ್ತದೆ. ಪ್ರಪಂಚವು ಸತ್ಯವಾಗಿ ತೋರುವಂತೆ ಮಾಡುತ್ತದೆ. ಆವರಣ ಶಕ್ತಿಯಿಂದ ಬ್ರಹ್ಮವನ್ನು ಮರೆ ಮಾಡುತ್ತದೆ. ಈ ಮಾಯೆಯು ಇಲ್ಲದ್ದನ್ನು ಇರುವಂತೆ ತೋರಿಸುವುದು. ಉದಾಹರಣೆಗೆ ಹಗ್ಗ ಹಾವಾಗಿ ತೋರುವುದು. ಕಾರ್ಯವೇ ಕಾರಣವಾಗಿ ಇರುವುದಿಲ್ಲ. ಮಡಕೆ ಮಣ್ಣಾಗಿರುವಂತೆ. ಆದ್ದರಿಂದ ಇದನ್ನು ವಿವರ್ತವಾದವೆಂದೂ ಹೇಳುವರು.
*(ಟಿಪ್ಪಣಿ : ಬ್ರಹ್ಮ ವು (ದೇವರು) ಈ ಜಗತ್ತನ್ನು ಏಕೆ ಸೃಷ್ತಿಸಿತು? ಈ ಮಾಯೆ ಎಂದರೆ ಏನು -ಅದು ಏಕೆ ಇದೆ? ಇವಕ್ಕೆ ಉತ್ತರವಿಲ್ಲ , ಅಥವಾ ಮಾನವನ ಬುದ್ಧಿಗೆ ನಿಲುಕದು ಆದ್ದರಿಂದ '''ಅನಿರ್ವಚನೀಯ'''.! ಮಂಕುತಿಮ್ಮನ ಕಗ್ಗದಲ್ಲಿ ಡಿವಿಜಿ ಇದೇ ಪ್ರಶ್ನೆ ಕೇಳುತ್ತಾರೆ - ಉತ್ತರ ಸಿಗದು)
;ಇಹುದೊ ಇಲ್ಲವೊ ತಿಳಿಯಗೊಡದೊಂದು ವಸ್ತು ನಿಜ|
;ಮಹಿಮೆಯಿಂ ಜಗವಾಗಿ ಜೀವವೇಷದಲಿ||
;ವಿಹರಿಪುದದೊಳ್ಳಿತೆಂಬುದು ನಿಸದವಾದೊಡಾ|
;ಗಹನ ತತ್ವಕೆ ಶರಣೊ - ಮಂಕುತಿಮ್ಮ||
*( ವಿಹರಿಪುದು ಅದು (ಮಾಯೆ?) ಒಳ್ಳಿತೆಂಬುದು ನಿಸದವಾದೊಡೆ-ನಿಜವಾದೊಡೆ)
 
=== ಸಾಧನಾ ಚತುಷ್ಟಯ : ===