ಮೋಕ್ಷ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩೯ ನೇ ಸಾಲು:
:ಮಾಧ್ವಮತ-ದ್ವೈತದಲ್ಲಿಯೂ ಅವಿದ್ಯೆಯಿಂದ ಬಂಧನದಿಂದ ಬಿಡುಗಡೆಯಾದಾಗ ಪರಮಾತ್ಮನ ಅನುಗ್ರಹ ಪಡೆಯುವುದನ್ನು ಮೋಕ್ಷವೆಂದು ಹೇಳಿದೆ. ಮೋಕ್ಷವು ನಿರತಿಶಯ ಆನಂದ ಧಾಮ .'ಕರ್ಮದ ಕ್ಷಯ', 'ಉತ್ಕ್ರಾಂತಿ', 'ಮಾರ್ಗ' ಮತ್ತು 'ಭೋಗ' ಇವು ನಾಲ್ಕು ಪರ್ವಗಳು.ಸಂಚಿತ ಕರ್ಮಗಳು ಕ್ಷಯ ದ ಮೇಲೆ , ಬ್ರಹ್ಮ ನಾಡಿಯ ಮೂಲಕ, ಬಹಿರ್ನಿರ್ಗಮನವಾಗುವುದು -'''ಉತ್ಕ್ರಾಂತಿ''' , ಅಲ್ಲಿಧ ಅರ್ಚಿರಾದಿ ಮಾರ್ಗದಿಂದ ಗಮನ(ಹೋಗುವುದು) -ಬೇರೆ ಬೇರೆ ಲೋಕಗಳಿಗೆ ಪ್ರಯಾಣಿಸಿ, ಅವರಿಂದ ಸತ್ಕರಿಸಲ್ಪಟ್ಟು .ಸತ್ಯಲೋಕಕ್ಕೆ ಬಂದು,ನಂತರ [[ವೈಕುಂಠ]]ವನ್ನು ಸೇರುವನು. ಮೋಕ್ಷಭೋಗವೂ ತಾರತಮ್ಯದಿಂದ ಕೂಡಿದ್ದು ,ಸಾಲೋಕ್ಯ ಮೊದಲಾಗಿ ನಾಲ್ಕು ವಿಧ.ಇಲ್ಲಿ ಸಾಯುಜ್ಯನರಂದರೆ ಪರಮಾತ್ಮನ ಶರೀರದಲ್ಲಿ ಪ್ರವೇಶಿಸಿ ಆನಂದನನ್ನು ಪಡೆಯುವುದು.(ಅವನಲ್ಲಿ ಒಂದಾಗುವುದಲ್ಲ) ಆದರೆ ಅದು ಪರಮಾತ್ಮನ ಆನಂದಕ್ಕೆ ಸಮಾನವಲ್ಲ. '''ನಿತ್ಯ ನಾರಕಿ'''ಗಳಿಗೆ (ತಮೋಯೋಗ್ಯರಿಗೆ ) ಭಗವಂತನ ನಿಗ್ರಹದಿಂದ ನಿತ್ಯ ನರಕ ಪ್ರಾಪ್ತಿಯಾಗುವುದು . ಅವರಿಗೆ ಶಾಶ್ವತ ದುಃಖ ;ನಿತ್ಯ ಸಂಸಾರಿಗಳಿಗೂ ಸ್ವರ್ಗದಲ್ಲಿ ಮಿಶ್ರಾನುಭವ ಉಂಟು. ಹೀಗೆ ಮುಕ್ತಿಯಲ್ಲೂ 'ತಾರತಮ್ಯ' ಉಂಟು. ಇದು ಮಧ್ವರ ಮತ .
::'''ನಿಂಬಾರ್ಕರ ಮತ'''
:'''ನಿಂಬಾರ್ಕರು ಮತ್ತು ಮೋಕ್ಷ'''
 
:ನಿಂಬಾರ್ಕರ ಮತದಲ್ಲಿ ಜೀವನು ಭಗವಂತನ ಸಾಕ್ಷಾತ್ಕಾರ ಪಡೆದಾಗ ಅವನ- ಎಂದರೆ ಭಗವಂತನ ಸ್ವಭಾವ , ಗುಣಗಳನ್ನು ಪಡೆದುಕೊಳ್ಳುತ್ತಾನೆ . ಆತ್ಮ ಸ್ವರೂಪ ಲಾಭವಾಗುವುದು . ಆದರೆ ಅವರ ಬೇಧ ನಿತ್ಯ. ಮುಕ್ತಾವಸ್ಥೆಯಲ್ಲಿಯೂ ಆತ್ಮ ಪರಮಾತ್ಮನಿಂದ ಬೇರೆಯಾಗಿರುವುದು. ಗುಣದಿಂದ ಅಬೇಧವಾಗಿರುವುದು. ಬ್ರಹ್ಮ ಸ್ವರೂಪ ಪಡೆವ್ಯದೆಂದರೆ ಬ್ರಹ್ಮದಂತೆ ಆಗುವುದು (ಸದೃಶ) . ಬೇಧವಿರುವಾಗಲೂ ಸಮಾನತೆ ಇದೆ. ಆದರೆ ಆತ್ಮವು ಅಣು ಗಾತ್ರದ್ದಾಗಿರುತ್ತದೆ. ಬ್ರಹ್ಮದಂತೆ ಸರ್ವವ್ಯಾಪಿಯಲ್ಲ. ಜಗತ್ತಿನ ಸೃಷ್ಟಿ ಇತ್ಯಾದಿ ಶಕ್ತಿ ಇಲ್ಲ. ಸ್ವತಂತ್ರನೂ ಅಲ್ಲ. ಬ್ರಹ್ಮದ ಅಧೀನ. ಆದರೂ ಸಚ್ಚಿದಾನಂದ ಸ್ವರೂಪಿ.
ಮುಂದುವರಯುವುದು / ಮುಂದುವರೆದಿದೆ.
::'''ವಲ್ಲಭಾಚಾರ್ಯರು ಮತ್ತು ಮೋಕ್ಷ'''
:ವಲ್ಲಭಾಚಾರ್ಯರ ಶುದ್ಧಾದ್ವೈ ತದಲ್ಲಿ ಪರಮಾತ್ಮನು ಜೀವನ ದೇಹ , ಇಂದ್ರಿಯ ,ಅಂತಃಕರಣಗಳಲ್ಲಿ ತನ್ನ ಆನಂದವನ್ನು ಸ್ಥಾಪಿಸಿ ತನ್ನ ಸ್ವರೂಪದಲ್ಲಿರುವಂತೆ ಮಾಡುವುದು ; ಇದಕ್ಕೆ , 'ಸ್ವರೂಪಾಪತ್ತಿ' ಎಂದು ಹೆಸರು. ಇದು ಆನಂದ ಮಯವಾದ ರೂಪ ; ಇದೇ '''ಮುಕ್ತಿ.''' 'ಮೋಕ್ಷಕ್ಕೆ ಭಕ್ತಿಯೇ ಸಾಧನ' - ಗೋಪಿಕೆಯರ ಮಾದರಿ ; ಸದಾ ಭಜನೆ, ನೃತ್ಯ, ಚಿಂತನೆ.
:'''ಚೈತನ್ಯರು ಮತ್ತು ಮೋಕ್ಷ'''
:ಚೈತನ್ಯರ ಅಚಿಂತ್ಯ-ಬೇಧಾಬೇಧದಲ್ಲಿಯೂ ಮುಕ್ತಿ ಆನಂದ ಸ್ವರೂಪದ್ದು . ಭಗವಂತನಾದ ಕೃಷ್ಣನನ್ನು ಅತ್ಯಂತ ಪ್ರೇಮದಿಂದ , ಸೇವಿಸುವುದೇ ಮುಕ್ತಿ. ಅವನ ಭಕ್ತಿಗೆ ತಕ್ಕಂತೆ '''ಬೃದಾವನ''' ಅಥವಾ '''ನವದ್ವೀಪ'''ಗಳಲ್ಲಿ (ಕೃಷ್ಣನ ಧಾಮಗಳು-ವಾಸಸ್ಥಾನಗಳು) ,ಅವರ ಯೋಗ್ಯತೆಗೆ ತಕ್ಕಂತೆ ಶುದ್ಧಸತ್ವವನ್ನು (ಆನಂದವನ್ನು) ಅನುಗ್ರಹಿಸುತ್ತಾನೆ. .
== ಶೈವ ದರ್ಶನಗಳಲ್ಲಿ ಮೋಕ್ಷ ==
:ಶೈವ ದರ್ಶನಗಳಲ್ಲಿ (ಅದ್ವೈತ) ಮಲತ್ರಯಗಳನ್ನು ಕಳೆದುಕೊಂಡು ಜೀವನು ತನ್ನ ಜೀವ ಭಾವನ್ನು ತೊರೆದು ಶಿವತ್ವವನ್ನು ಪಡೆಯುವುದೇ ಮುಕ್ತಿ ಅಥವಾ ಮೋಕ್ಷ . ಇತರ ಶೈವದರ್ಶನಗಳಲ್ಲಿ ಮುಕ್ತಿಯಲ್ಲೂ ಶಿವನಿಗೂ ಜೀವನಿಗೂ ಬೇಧವಿದೆ. ಶಿವನ ಆನಂದ ಮಾತ್ರವಿದೆ. ಆದರೆ ಪ್ರತ್ಯಭಿಜ್ಞಾನ ದರ್ಶನ , ವೀರಶೈವ ದರ್ಶನ ಗಳಲ್ಲಿ ಮುಕ್ತಯಲ್ಲಿ ಸಂಪೂu ಅಬೇಧವನ್ನು ಅಂಗೀಕರಿಸಲಾಗಿದೆ.
:ಹೀಗೆ ವಿವಿಧ ಭಕ್ತಿಮಾರ್ಗಗಳಲ್ಲಿ ಅವರವರ ದೇವರ ಬಳಿ ಆನಂದದಿಂದಿರುವುದೇ ಮೋಕ್ಷ.
== ತಾತ್ಪರ್ಯ ==
:ಮೋಕ್ಷವೇ ಬೇರೆ ; ಸ್ವರ್ಗವೇ ಬೇರೆ. ವೇದಾಂತ ದಲ್ಲಿ (ಅದ್ವೈತದಲ್ಲಿ ) ಶುದ್ಧ ಜ್ಞಾನ -ಆನಂದ ಸ್ವರೂಪ -ಬ್ರಹ್ಮ ಪ್ರಾಪ್ತಿಯೇ ಮೋಕ್ಷ . ಸ್ವರ್ಗವಲ್ಲ. ಸ್ವರ್ಗದಲ್ಲಿ ಇಲ್ಲಿ ಇರುವ ಸುಖವೆಲ್ಲಾ ಇನ್ನೂ ಹೆಚ್ಚಾಗಿ ಕೊರತೆ ಇಲ್ಲದೆ ಇದೆ . ಆದರೆ ಮೋಕ್ಷ ಅಂತ್ಯವಿಲ್ಲದ ಆನಂದವನ್ನು ಪಡೆಯುವುದು. ಭಕ್ತಿ-ವೇದಾಂತಿಗಳ ಪ್ರಕಾರ ಜೀವನು ಸ್ವರ್ಗಕ್ಕಿಂತಲೂ ಉತ್ತಮ ಸ್ವರ್ಗ ಪ್ರಾಪ್ತಿಯೇ ಮೋಕ್ಷವೆನ್ನುತ್ತಾರೆ (ವೈಕುಂಠ) . ಅದರಲ್ಲೂ ತಾರತಮ್ಯವಿದೆ . (ಕೆಲವು ಆತ್ಮಗಳಿಗೆ ಅದಕ್ಕೆ ಪ್ರವೇಶವೇ ಇಲ್ಲ.)
:ಭಾರತೀಯ ಮೋಕ್ಷ ಕಲ್ಪನೆಯು - ಮರಣ, ಪಿತೃಲೋಕ ಗಮನ (ವೇದ), ದೇವಲೋಕ (ಸ್ವರ್ಗ) ವಾಸ . ಆನಂದಮಯ ಸ್ಥಿತಿ, ನಿರಾಕಾರ -ನಿರ್ಗುಣ-ಅನಾದಿ-ಅನಂತವಾದ-ಮೂಲ ಚೈತನ್ಯದಲ್ಲಿ ಲೀನ (ಮೋಕ್ಷ)(ಇದನ್ನು ಮೊದಲೇ ಹೇಳಿದೆ- ೭-೮ನೆಯ ಸತಮಾನ), ಹೀಗೆ ಬೆಳೆದು ಬಂದಿದೆ. ಆದರೆ ನ್ಯಾಯ ದರ್ಶನದಲ್ಲಿ ದುಃಖನಿವಾರನೆ ಮಾತ್ರಾ ,ಆನಂದವಿಲ್ಲ , ಜೀವನು ಕಲ್ಲುಗುಂಡಿನಂತೆ ಸುಖ-ದುಃಖ ರಹಿತ ಸ್ಥಿತಿಯಲ್ಲಿರುವನು. :ಭಾರತೀಯ ದರ್ಶನಗಳಲ್ಲಿ ಅತೀಂದ್ರಿಯ ಅನುಭವ, ತರ್ಕ, ಗಳಿಗೆ ಪ್ರಾಮುಖ್ಯತೆ ಕೊಟ್ಟಿದೆ . ಪಾಶ್ಚಿಮಾತ್ಯ ಸೆಮೆಟಿಕ್ ಧರ್ಮಗಳಲ್ಲಿ ಧರ್ಮಗಳ ಚಿಂತನೆಯೇ ಬೇರೆ ವಿಧ.
:ಪಾಶ್ಚಿಮಾತ್ಯ ಸೆಮೆಟಿಕ್ ಧರ್ಮಗಳಲ್ಲಿ ಧರ್ಮಗ್ರಂಥಗಳದ್ದೇ ಕೊನೆಯ ಮಾತು . ತರ್ಕಕ್ಕೆ ಅವಕಾಶವಿಲ್ಲ ಅದನ್ನೇ ಸಮರ್ಥಿಸಬೇಕು . ಅದರಲ್ಲಿ ದೇವನು ಸ್ವರ್ಗದಲ್ಲಿರುವ ಒಬ್ಬ ಸರ್ವಶಕ್ತ - ಸರ್ವಜ್ಞ ವ್ಯಕ್ತಿ ; ಮರಣನಂತರ ಆತ್ಮಗಳು ಪ್ಳಯದಿದ ವರೆಗೂ ಸ್ವರ್ಗವೋ=ನರಕವೋ, ತೀರ್ಮಾನವಾಗಲು ಕಾಯಬೇಕು . ಪ್ರಳಚಿiದ ನಂತರ ಲ್ಲಾಆತ್ಮಗಳನ್ನು ದೇವನು -ಸ್ವರ್ಗಪಿತನು ಕರೆಸಿಕೊಂಡು ವಿಚಾರಿಸಿ ಪುಣ್ಯವಂತರನ್ನು ಪ್ಮಣ್ಯದಲ್ಲಿ ಪಾಪಗಳನ್ನು ಕಳೆದು ಪುಣ್ಯ ಉಳಿದವರನ್ನು) ಸ್ವರ್ಗಕ್ಕೂ , ಪಾಪ ಅಧಿಕವಾದವರನ್ನು ಬೆಂಕಿಉರಿಯುತ್ತಿರುವ ನರಕಕ್ಕೂ ಕಳಿಸುವನು . ಅವರು ಹಿಂತಿರುಗುವ ಪ್ರಶ್ನೆ ಇಲ್ಲ . ನರಕದ ಯಜಮಾನ ಸ್ಶೆತಾನ . ದೈವ ವಿರೋಧಿ . ಅದು ಅಧೋ ಲೋಕ. ಸ್ವರ್ಗವು ಮೇಲಿನ-ಎಂದರೆ ಊರ್ಧ್ವಲೋಕ.
ಓಂ [[ಸದಸ್ಯ:Bschandrasgr/ಪರಿಚಯ|ತತ್ಸತ್]]
ಮುಂದುವರಯುವುದು / ಮುಂದುವರೆದಿದೆ.
 
== ನೋಡಿ ==
"https://kn.wikipedia.org/wiki/ಮೋಕ್ಷ" ಇಂದ ಪಡೆಯಲ್ಪಟ್ಟಿದೆ