"ಮೋಕ್ಷ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು (→‎ಷಡ್ದರ್ಶನಗಳಲ್ಲಿ ಮೋಕ್ಷ: ಮುಂದುವರೆದಿದೆ.)
:ಕರ್ಮವಾದಿಗಳಾದ ಪೂರ್ವ ಮೀಮಾಂಸಕರ ಪ್ರಕಾರ ಜಗತ್ತಿನೊಡನೆ, ಆತ್ಮ ಸಂಬಂಧ ನಾಶವೇ ಮೋಕ್ಷ. ಭೋಗಾಯತ ನವಾದ ಶರೀರ, ಭೋಗ ಸಾಧನವಾದ ಇಂದ್ರಿಯಗಳು ಭೋಗ ವಿಷಯಗಳಾದ ಪದಾರ್ಥಗಳು ,ಈ ಮೂರೂ ಸಂಸಾರದ ಬಂಧನಕ್ಕೆ ಆತ್ಮವನ್ನು ಸಿಲುಕಿಸಿವೆ. , ಇವುಗಳಾತ್ಯಂತಿಕ ನಾಶವೇ ಮೋಕ್ಷ . ಪ್ರಭಾಕರ ಮುಂತಾದವರುನಿಯೋಗ ಸಿದ್ಧಿಯೇ ಮೋಕ್ಷವೆನ್ನುತ್ತಾರೆ. ಎಂದರೆ ಫಲಾಪೇಕ್ಷೆಯಿಲ್ಲದ ನಿತ್ಯಕರ್ಮ,ಕರ್ತವ್ಯ ದೃಷ್ಟಿಯಿಂದ ಮಾಡುವುದು , -ಕರ್ತವ್ಯ ಕ್ರಿಯೆಯಿಂದ ಮೋಕ್ಷ. ಆನಂದಾನುಭವದ ವಿಚಾರವಿಲ್ಲ. ನ್ಯಾಯ ದರ್ಶನದಂತೆ ಚೈತನ್ಯವು ಆತ್ಮನ ಸ್ವಭಾವ ಗುಣವಲ್ಲ. ಮೋಕ್ಷಕ್ಕೆ ಕರ್ಮ ಮತ್ತು ಜ್ಞಾನ ಎರಡೂ ಅವಶ್ಯ . ಇದು ಜ್ಞಾನ ಕರ್ಮ ಸಮುಚ್ಚಯ ವಾದ. ಪ್ರಾಚೀನ ಮೀಮಾಂಸಕರು ಸ್ವರ್ಗವೇ ಕೊನೆಯ ಹಂತವೆನ್ನುವರು. ನಂತರದವರು ಮೋಕ್ಷ ವಿಚಾರವನ್ನು ಸೇರಿಸಿದರು.
::'''ಅದ್ವೈತ ದರ್ಶನ'''
:ಅದ್ವೈತದ ಪ್ರಕಾರ ಮೋಕ್ಷವು ,ಸತ್-ಚಿತ್-ಆನಂದದ ಸ್ಥಿತಿ/ ಸ್ವರೂಪಿ. ಅವಿದ್ಯೆಯ (ಮಾಯೆಯ) ಕಾರಣ ,ಆತ್ಮನಿಗೆ ಬಂಧನವಾಗಿದೆ ;ಎಂದರೆ ಅವನು ಸ್ವಸ್ವರೂಪವನ್ನು ತಿಳಿದಿಲ್ಲ. ಮಿಥ್ಯಾಭಾಸದ ನಿವಾರಣೆಯಾಗಿ ನಾನೇ ಬ್ರಹ್ಮವೆಂದು ಜ್ಞಾನ ಉದಯವಾದಾಗ ಮುಕ್ತಿ. '''ಬ್ರಹ್ಮವನ್ನು ತಿಳಿದವನು ಬ್ರಹ್ಮವೇಆಗುತ್ತಾನೆ''' ಎಂದು [[ಶ್ರುತಿ]]ಯು ಹೇಳುತ್ತದೆ . ಅಜ್ಞಾನದ ನಿವಾರಣೆಯು ದೇಹವಿದ್ದಾಗಲೂ , ಬಿಡುವಾಗಲೂ ಯಾವಾಗ ಬೇಕಾದರೂ ಆಗಬಹುದು. 'ಜೀವನ್ಮುಕ್ತಿ' ಯೂ ಉಂಟು , 'ವಿದೇಹಮುಕ್ತಿ'ಯೂ ಉಂಟು. ಕರ್ಮದಿಂದ** ಮುಕ್ತಿಯಿಲ್ಲ -ಚಿತ್ತ ಶುದ್ದಿಯಿಂದ ಮಾತ್ರಾ ಮುಕ್ತಿಯನ್ನು ಪಡೆಯಬಹುದು . [[ಜ್ಞಾನ]]ದಿಂದ ಮಾತ್ರಾ ಮುಕ್ತಿ ಪಡೆಯಯಬಹುದು (**ಹೋಮ,ಹವನ, ಯೋಗ ಪ್ರಾಣಯಾಮ, ಜಪ,ತಪ, ಪಾರಾಯಣ.ಭಕ್ತಿ-ಭಜನೆ, ಪೂಜೆ, ಯಾತ್ರೆ. ಸೇವೆ-ದಾನ-ಧರ್ಮ ಇತ್ಯಾದಿ ಕರ್ಮಗಳು ; ಜ್ಞಾನವೆಂದರೆ ತಾನೇ ಆತ್ಮನೆಂಬ -ಬ್ರಹ್ಮವೆಂಬ ಅರಿವು-ಅನುಭವ ; ಆತ್ಮವು ಮೂಲ ಚೈತನ್ಯದಲ್ಲಿ ಸೇರಿಹೋಗುವುದು.). (ಮೋಕ್ಷದ ವ್ಯಾಖ್ಯೆಯು ಉಳಿದ ದರ್ಶನಕ್ಕಿಂತ ಬೇರೆ ಮತ್ತು ಸ್ಪಷ್ಟ)
== ಭಕ್ತಿಪಂಥದಲ್ಲಿ ಮೋಕ್ಷ ==
::'''ವಿಶಿಷ್ಟಾದ್ವೈತ ಮತ್ತು ಮೋಕ್ಷ'''
:ವಿಶಿಷಾದ್ವೈತದ ಪ್ರಕಾರ ವೈಕುಂಠವೆಂಬ ಅಪ್ರಾಕೃತ ಲೋಕದಲ್ಲಿ ಪರಮಾತ್ಮನಿಗೆ ಸಮನಾದ ಆನಂದವನ್ನು ಪಡೆಯುವುದೇ ಮುಕ್ತಿ. ಜೀವನು ದೇವಯಾನವೆಂಬ , ಜ್ಯೋತಿರ್ಮಾರ್ಗವನ್ನು ಹಿಡಿದು ಆನಂದಮಯವಾದ ವೈಕುಂಠವನ್ನು ಸೇರುತ್ತಾನೆ . ಸರ್ವಜ್ಞತ್ವಾದಿ ಗುಣಗಳನ್ನು ಪಡೆಯುತ್ತಾನೆ. ಕರ್ಮಸಂಬಂಧದಿಂದ ಪಾರಾಗಿ ಅಪ್ರಾಕೃತ (ದಿವ್ಯ) ದೇಹ ಪಡೆದು 'ಸಾಲೋಕ್ಯ ; ಸಾಮೀಪ್ಯ ; ಸಾರೂಪ್ಯ ; ಸಾಯುಜ್ಯ'ಗಳೆಂಬ ಮುಕ್ತಿಯನ್ನು ಪಡೆಯುತ್ತಾನೆ . ವಿಶ್ವೇಶ್ವರತ್ವ , ಜಗತ್ಕೃತ್ವ ಬಿಟ್ಟು ಉಳಿದ ಎಲ್ಲಾ ಈಶ್ವರನ-ಶಕ್ತಿ ಪಡೆಯುತ್ತಾನೆ. ಆದರೆ ಪರಮಾತ್ಮನಲ್ಲಿ ಸೇರಲಾರ ; ಅವನ ಕೈಂಕರ್ಯದಿಂದ ಆನಂದ ಪಡೆಯುತ್ತಾನೆ. ಇದನ್ನು ಪಡೆಯಲು , ಜ್ಞಾನ ಕರ್ಮ ಭಕ್ತಿ, ಮಾರ್ಗಗಳನ್ನು ಅನುಸರಿಸಬೇಕು. ಭಕ್ತಿ ಶ್ರೇಷ್ಠವಾದುದು. ಇದನ್ನು ಪಡೆಯಲು ಈಶ್ವರನ ಅನುಗ್ರಹವೂ ಬೇಕು. '''ಜೀವನ್ಮಕ್ತಿ''' ಎಂಬುದಿಲ್ಲ ; ಇದು ರಾಮಾನುಜರ ಸಿದ್ಧಾಂತ.
 
::'''ಮಾಧ್ವಮತ-ದ್ವೈತ'''
ಮುಂದುವರಯುವುದು / ಮುಂದುವರೆದಿದೆ.
 
೪೨,೨೯೩

edits

"https://kn.wikipedia.org/wiki/ವಿಶೇಷ:MobileDiff/425520" ಇಂದ ಪಡೆಯಲ್ಪಟ್ಟಿದೆ