ಮೋಕ್ಷ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಷಡ್ದರ್ಶನಗಳಲ್ಲಿ ಮೋಕ್ಷ: ಮುಂದುವರೆದಿದೆ.
೨೭ ನೇ ಸಾಲು:
:ವೈಶೇಷಿಕ ದರ್ಶನವೂ ಮೋಕ್ಷ ವಿಚಾರದಲ್ಲಿ , ನ್ಯಾಯ ದರ್ಶನದ ಮತವನ್ನೇ ಅನುಸರಿಸುತ್ತದೆ. ಆತ್ಮನಲ್ಲಿ ಆನಂದವೂ ಇಲ್ಲ , ದುಃಖವೂ ಇಲ್ಲ. ಆದರೆ ಈ ಅಭಿಪ್ರಾಯವು ಟೀಕೆಗೆ ಒಳಗಾದ್ದರಿಂದ ನಂತರದ ವೈಶೇಷಿಕರು ಮೋಕ್ಷದಲ್ಲಿ ನಿರತಿಶಯ ಸುಖವಿದೆಯೆಂದು ಹೇಳಿದ್ದಾರೆ.
::'''ಪೂರ್ವ ಮೀಮಾಂಸಕರು (ಕರ್ಮವಾದಿಗಳು)'''
 
:ಕರ್ಮವಾದಿಗಳಾದ ಪೂರ್ವ ಮೀಮಾಂಸಕರ ಪ್ರಕಾರ ಜಗತ್ತಿನೊಡನೆ, ಆತ್ಮ ಸಂಬಂಧ ನಾಶವೇ ಮೋಕ್ಷ. ಭೋಗಾಯತ ನವಾದ ಶರೀರ, ಭೋಗ ಸಾಧನವಾದ ಇಂದ್ರಿಯಗಳು ಭೋಗ ವಿಷಯಗಳಾದ ಪದಾರ್ಥಗಳು ,ಈ ಮೂರೂ ಸಂಸಾರದ ಬಂಧನಕ್ಕೆ ಆತ್ಮವನ್ನು ಸಿಲುಕಿಸಿವೆ. , ಇವುಗಳಾತ್ಯಂತಿಕ ನಾಶವೇ ಮೋಕ್ಷ . ಪ್ರಭಾಕರ ಮುಂತಾದವರುನಿಯೋಗ ಸಿದ್ಧಿಯೇ ಮೋಕ್ಷವೆನ್ನುತ್ತಾರೆ. ಎಂದರೆ ಫಲಾಪೇಕ್ಷೆಯಿಲ್ಲದ ನಿತ್ಯಕರ್ಮ,ಕರ್ತವ್ಯ ದೃಷ್ಟಿಯಿಂದ ಮಾಡುವುದು , -ಕರ್ತವ್ಯ ಕ್ರಿಯೆಯಿಂದ ಮೋಕ್ಷ. ಆನಂದಾನುಭವದ ವಿಚಾರವಿಲ್ಲ. ನ್ಯಾಯ ದರ್ಶನದಂತೆ ಚೈತನ್ಯವು ಆತ್ಮನ ಸ್ವಭಾವ ಗುಣವಲ್ಲ. ಮೋಕ್ಷಕ್ಕೆ ಕರ್ಮ ಮತ್ತು ಜ್ಞಾನ ಎರಡೂ ಅವಶ್ಯ . ಇದು ಜ್ಞಾನ ಕರ್ಮ ಸಮುಚ್ಚಯ ವಾದ. ಪ್ರಾಚೀನ ಮೀಮಾಂಸಕರು ಸ್ವರ್ಗವೇ ಕೊನೆಯ ಹಂತವೆನ್ನುವರು. ನಂತರದವರು ಮೋಕ್ಷ ವಿಚಾರವನ್ನು ಸೇರಿಸಿದರು.
::'''ಅದ್ವೈತ ದರ್ಶನ'''
ಮುಂದುವರಯುವುದು / ಮುಂದುವರೆದಿದೆ.
 
"https://kn.wikipedia.org/wiki/ಮೋಕ್ಷ" ಇಂದ ಪಡೆಯಲ್ಪಟ್ಟಿದೆ