ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೬ ನೇ ಸಾಲು:
::'''ಮೀಮಾಂಸಕರು.'''
:ಮೀಮಾಂಸಕರಲ್ಲಿ ಕುಮಾರಿಲರು , ಆತ್ಮವು ಜ್ಞಾನವೂ ಜ್ಞೇಯವೂ ಆಗಿದೆ , ವಸ್ತು ಜ್ಞಾನದಲ್ಲಿಯೂ , ಅಹಂ , ಪ್ರತ್ಯಯದಿಂದಲೂ ಇದನ್ನು ತಿಳಿಯಬಹುದು. ಆತ್ಮನು ನಿತ್ಯ ; ಆದರೆ ಪರಿಣಾಮೀ ನಿತ್ಯತ್ವ. ಅವನು ಚಿದಂಶದಿಂದ ಜ್ಞಾನವನ್ನು ಪಡೆದರೆ, ಅಚಿದಂಶದಿಂದ ಪರಿಣಾಮ ಹೊಂದುತ್ತಾನೆ.
:ಪ್ರಭಾಕರ ಮತದಂತೆ ಪುರಷನು (ಜೀವ) ಜ್ಞಾತೃ ಮಾತ್ರ ;ಅವನು ಜಡ , ವಿಷಯ ಸಂಯೋಗದಿಂದ ಚೈತನ್ಯ ರೂಪಿಯಾಗುತ್ತಾನೆ. ಅವನು ಕರ್ತೃವೂ ಹೌದು ಬೋಕ್ತೃವೂ ಹೌದು.ಅವನು ಸರ್ವವ್ಯಾಪಿ ಆದರೆ ಪ್ರತಿಯೋಬ್ಬರ ಶರೀರದಲ್ಲಿಯೂ ಬೇರೆ ಬೇರೆ . ಆತ್ಮವು ಬದಲಾವಣೆ ಹೊಂದುವುದಿಲ್ಲ. ''ಸಂವಿತ್'' , ಎಂಬ ಜ್ಞಾನದಿಂದಮಾತ್ರಾ ಪ್ರಕಾಶಗೊಳ್ಳವುದು . ''ಸಂವಿತ್'' ಮಾತ್ರಾ ತೋರಿ ಮಾಯವಾಗುವುದು. ಅದು ವಸ್ತು ಮತ್ತು ಆತ್ಮ ಎರಡನ್ನೂ ಪ್ರಕಾಶಿಸುತ್ತದೆ.
::'''ಅದ್ವೈತ '''
 
:ಅದ್ವೈತ ಸಿದ್ಧಾಂತದಲ್ಲಿ ಆತ್ಮಕ್ಕೆ ಕರ್ತೃತ್ವ -ಭೋಕ್ತೃತ್ವವಿಲ್ಲ. ಅದು ಕೂಟಸ್ಥ -ನಿತ್ಯ ; ಯಾವ ಬದಲಾವಣೆಗೂ ಒಳಗಾಗದು ಅದು ವಿಷಯಿ (ನೋಡುವ ಕ್ರಿಯೆಯುಳ್ಳದ್ದು) , ವಿಷಯವಲ್ಲ (ನೋಡಲ್ಪಡುವ ವಸ್ತುವಾಗಲಾರದು -ಕಾಣುವುದಿಲ್ಲ.) . ವಾಸ್ತವವಾಗಿ ಅದು ಬ್ರಹ್ಮ ಕ್ಕಿಂತ ಬೇರೆಯಲ್ಲ ; ಅವಿದ್ಯೆಯ (ಮಾಯೆ) ಕಾರಣದಿಂದ ಶರೀರ ಇತ್ಯಾದಿಗಳಲ್ಲಿ ತನ್ನತನದ (ತನ್ನನ್ನು ) ಆರೋಪ ಮಾಡಿಕೊಳ್ಳುತ್ತದೆ, ಆತ್ಮವು ಮುಕ್ತರೂಪದ ಚೈತನ್ಯವೇ ಆಗಿದ್ದರೂ ವಿಷಯ ಸಂಸರ್ಗದಿಂದ ಅಹಂ ಪಡೆದು , ಜೀವಾತ್ಮ ವೆನ್ನಿಸಿದೆ.
::'''ವಿಶಿಷ್ಟಾದ್ವೈತ'''
:ರಾಮಾನುಜರ ಪ್ರಕಾರ, ಆತ್ಮಗಳು ಅನೇಕ ; ಬೇರೆ ಬೇರೆ ರೀತಿಯವು. ದೇಹೇಂದ್ರಿಯಗಳಿಂದ ಬೇರೆ ; ಅಣುರೂಪಿ ; ಚೈತನ್ಯ ; ಸ್ವಯಂ ಪ್ರಕಾಶ ರೂಪಿ ; ಆನಂದ ರೂಪಿ ; ಅವನು ಪರಮಾತ್ಮನಿಗೆ ಅಧೀನ . ಅವನಲ್ಲಿರುವುದು ಶೇಷತ್ವ ವೆಂಬ ಗುಣ. ಜೀ -ಜಗತ್ತುಗಳು ಪರಮಾತ್ಮನಿಂದ ಬೇರೆ. ಅವನ ವಿಶೇಷಣಗಳು ಅಧೀನವಾದವು . ಜೀವನಿಗೂ - ಪರಮಾತ್ಮನಿಗೂ , ಶರೀರ -ಆತ್ಮ ಸಂಬಂಧ . ಜೀವಾತ್ಮರಲ್ಲಿ ಬದ್ಧರು , ಮುಕ್ತರು , ನಿತ್ಯರು ಎಂಬ ಬೇಧಗಳುಂಟು. ಆತ್ಮ ಅಚಲ- ಆದರೂ ಸಂಕೋಚ ವಿಕೋಚಗಳಿವೆ. ಜೀವಿಗಳಿಗೆ ಈಶ್ವರಾನುಗ್ರದಿಂದ ಮುಕ್ತಿದೊರೆಯುವುದು..
::'''ದ್ವೈತ'''
:ಮಧ್ವರ ಮತದಲ್ಲಿ ಮೇಲನ ರಾಮಾನುಜರ ಕೆಲವು ವಿಚಾರಗಳನ್ನು ಅಂಗೀಕರಿಸಿದರೂ , ಜೀವ -ಪರಮಾತ್ಮರಲ್ಲಿ ಶರೀರ- ಆತ್ಮದ ಸಂಬಂಧವನ್ನು ಒಪ್ಪುವುದಿಲ್ಲ. ಜೀವರಲ್ಲಿ - ಮುಕ್ತಿ ಯೋಗ್ಯರು , ನಿತ್ಯ ಸಂಸಾರಿಗಳು , ತಮೋ ಯೋಗ್ಯರು , ಎಂದು ಮೂರು ಬೇಧಗಳನ್ನು ಹೇಳುತ್ತಾರೆ. ದೇವ , ಋಷಿ, ಪಿತೃ, ಚಕ್ರವರ್ತಿ , ಮತ್ತು ಉತ್ತಮ ಪುರುಷರು ಮುಕ್ತಿ ಯೋಗ್ಯರು , ಸಂಸಾರದಲ್ಲಿ ಸದಾಇರುವವರು -ನಿತ್ಯ ಸಂಸಾರಿಗಳು, ದೈತ್ಯ ,ರಾಕ್ಷಸ, ಪಿಶಾಚಿ ಮತ್ತು ಅಧಮ ಮನುಷ್ಯರು ತಮೋಯೋಗ್ಯರು -ಅಥವಾ ನಿತ್ಯ ನಾರಕಿಗಳು (ಇವರಲ್ಲಿ ವಿಷ್ಣುಭಕ್ತರಲ್ಲದವರೆಲ್ಲರೂ ಬರುತ್ತಾರೆ) ಜೀನು ಪರಮಾತ್ಮನ ಅಧೀನ , -ಮುಕ್ತಿಗೆ ಅವನ ಅನುಗ್ರಹಬೇಕು.
::'''ನಿಂಬಾರ್ಕರು''' .
ಮುಂದುವರೆಯುವುದು/ಮುಂದುವರೆಸಿದೆ.