ಶರಣ ಸಂಸ್ಕೃತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
ಹನ್ನೆರಡನೇ ಶತಮಾನ ರಾಜಕೀಯ, ಮತಧರ್ಮ, ಭಾಷೆ, ಸಾಹಿತ್ಯ, ಸಾಮಾಜಿಕ ಬದಲಾವಣೆಗಳಿಂದಾಗಿ ವಿಶೇಷ ಮಹತ್ವ ಪಡೆದಿದೆ. ಶರಣ್ಯಭಾವದಿಂದ ಶಿವನನ್ನು ಆರಾಧಿಸಿ ಕೊನೆಯಲ್ಲಿ ಶಿವನೇ ಆಗುವ ಭಕ್ತರನ್ನು 'ಶಿವಶರಣರು' ಎಂದು ಹೇಳಬಹುದು. ನಡೆ-ನುಡಿಗಳಲ್ಲಿ ಅಂತರವಿರದ ಇವರ ಜೀವನದ ಆದರ್ಶಗಳೇ ಶರಣ ಸಂಸ್ಕೃತಿ. ಈ ಶರಣರು ರಚಿಸಿದ ವಚನ ಸಾಹಿತ್ಯವನ್ನೇ ಇಲ್ಲಿ 'ಶರಣ ಸಾಹಿತ್ಯ' ಎಂದು ಕರೆಯಬಹುದು. ಶರಣ ಸಾಹಿತ್ಯದಲ್ಲಿ ಶರಣ ಸಂಸ್ಕೃತಿಯನ್ನು ಕಾಣಬಹುದು.
 
ಶರಣ ಸಂಸ್ಕೃತಿಯ ಪ್ರಧಾನ ಲಕ್ಷಣ ಕಾಯಕ. ಕಾಯಕ ನಿಷ್ಠೆಯ ಬಗ್ಗೆ ಯಾವ ಮತಧರ್ಮವೂ ಇಷ್ಟೊಂದು ಪ್ರಾಮುಖ್ಯತೆ ಕೊಟ್ಟಿರಲಿಲ್ಲ. 'ಕಾಯಕವೇ ಕೈಲಾಸ' ಎಂದ [[ಬಸವಣ್ಣ]] 'ಉದ್ಯೋಗಂ ಮನುಷ್ಯಪುರುಷ ಲಕ್ಷಣಂ' ಎಂದು ಸಾರಿದಂತಿದೆ.
<poem>
' ಕಾಯಕದಲ್ಲಿ ನಿರತವಾದರೆ
೭ ನೇ ಸಾಲು:
ಲಿಂಗಪೂಜೆಯಾದರೂ ಮರೆಯಬೇಕು'
</poem>
ಎಂದು ಹೇಳುವ ಶರಣರ ಮಾತುಗಳು ಗುರುವಾದರೂ ಕಾಯಕದಿಂದಲೇ ಜೀವನ್ಮುಕ್ತಿ ಎಂಬ ಸಾಲುಗಳು ಶರಣ ಸಂಸ್ಕೃತಿಯಲ್ಲಿ ಕಾಯಕಕ್ಕೆ ಶರಣರು ನೀಡಿದ ಪ್ರಾಶಸ್ತ್ಯವನ್ನು ಸಾರಿ ಹೇಳುತ್ತದೆಹೇಳುತ್ತವೆ.
 
ಶರಣ ಸಂಸ್ಕೃತಿಯಲ್ಲಿ ಲಿಂಗಸಮಾನತೆಲಿಂಗಸಮಾನತೆಯನ್ನು ಕಾಣಬಹುದು. 'ಸತಿಪತಿಗಳೊಂದಾದ ಭಕ್ತಿ ಒಪ್ಪುವುದು ಶಿವಂಗೆ' ಎನ್ನುವ ಶರಣರ ವಚನದ ಸಾಲುಗಳು ಇದಕ್ಕೆ ಪುಷ್ಠಿ ನೀಡುತ್ತವೆ. ಸತಿಪತಿಗಳಿಬ್ಬರು ವಚನಗಳನ್ನು ರಚಿಸಿದ ಉದಾಹರಣೆಗಳಿವೆ.
<poem>
ಮೊಲೆ ಮುಡಿಮೂಡಿ ಬಂದರೆ ಹಣ್ಣೆಂಬರುಹೆಣ್ಣೆಂಬರು
ಗಡ್ಡ ಮೀಸೆ ಬಂದರೆ ಗಂಡೆಂಬರು
ನಡುವೆ ಸುಳಿವಾತ್ಮ ಗಂಡೂ ಅಲ್ಲ ಹೆಣ್ಣು ಅಲ್ಲ
೧೭ ನೇ ಸಾಲು:
ಹೀಗೆ ಶರಣ ಸಂಸ್ಕೃತಿಯಲ್ಲಿ ಲಿಂಗಸಮಾನತೆಗೆ ವಚನಗಳನ್ನು ಉದಾಹರಣೆ ನೀಡಬಹುದು.
 
ಶರಣ ಸಂಸ್ಕೃತಿಯ ಇನ್ನೊಂದು ಲಕ್ಷಣ 'ಭಕ್ತಿ'. ಭಕ್ತ ಮತ್ತು ದೇವರ ನಡುವಿನ ದಲ್ಲಾಳಿಗಳನ್ನು ಧಿಕ್ಕರಿಸಿದ ಶರಣರು 'ತನ್ನಾಶ್ರಯದ ರತಿಸುಖವನು, ತಾನುಂಬ ಊಟವನು ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?' ಎಂದು ಪ್ರಶ್ನಿಸಿದ್ದಾರೆ. ದೇವಾಲಯಗಳ ನಿರ್ಮಾಣವನ್ನು ಪ್ರಬಲವಾಗಿ ವಿರೋಧಿಸುತ್ತಾರೆ. ನರದೇಹವೇ - ಹರದೇವಾಲಯ ಎನ್ನುತ್ತಾರೆ. ಕಾಲೇಕಂಬ'ಕಾಲೇ ಕಂಬ ದೇಹವೇ ದೇಗುಲ ಶಿರವೇ ಹೊನ್ನ ಕಳಸವಯ್ಯ' ಎನ್ನುವ ಬಸವಣ್ಣನವರ ವಚನದ ಸಾಲುಗಳಲ್ಲಿ ಈ ವಿಚಾರ ಅನಾವರಣಗೊಂಡಿದೆ.
 
ಸಾಮಾಜಿಕ ಸಮಾನತೆ, ಮರ್ತ್ಯ ಲೋಕದ ಹಿರಿಮೆ, ಆತ್ಮವಿಮರ್ಶೆ, ನಡೆ -ನುಡಿಯಲ್ಲಿ ಒಂದಾಗುವಿಕೆ, ಸಂಸಾರದಲ್ಲಿ ಸಹಿಷ್ಣುತೆ, ಸಾಮಾಜಿಕ ಬದ್ಧತೆ, ವೈಚಾರಿಕತೆ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದನ್ನು ಶರಣ ಸಂಸ್ಕೃತಿ ಪ್ರತಿಪಾದಿಸುತ್ತದೆ. ಮೌಢ್ಯ, ಶ್ರೇಣೀಕೃತ ಸಮಾಜ, ವರ್ಣಭೇಧವರ್ಣಬೇಧ, ಶೋಷಣೆ, ಅಸಮಾನತೆ, ವೇದಾಗಮಪುರಾಣ ಬಹುದೇವತೋಪಾಸನೆ ಮುಂತಾದವುಗಳನ್ನು ಪ್ರಬಲವಾಗಿ ವಿರೋಧಿಸುತ್ತದೆ.
 
ಶರಣ ಸಂಸ್ಕೃತಿಯಲ್ಲಿರುವ ಹತ್ತು ಹಲವು ವಿಚಾರಧಾರೆಗಳು ಇಂದಿನ ಸಮಾಜಕ್ಕೆ ಅವಶ್ಯಕ ಎನ್ನುವುದನ್ನು ಒಪ್ಪಬಹುದಲ್ಲವೇ?
"https://kn.wikipedia.org/wiki/ಶರಣ_ಸಂಸ್ಕೃತಿ" ಇಂದ ಪಡೆಯಲ್ಪಟ್ಟಿದೆ