ಕಾಸರಗೋಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೫ ನೇ ಸಾಲು:
ಕಾಸರಗೋಡು ಕುಂಬಳೆ ರಾಜರ ಅಧೀನಕ್ಕೂ ಒಳಪಟ್ಟಿತ್ತು. ಆಗ ಸುಮಾರು 64 ತುಳು ಮತ್ತು ಮಲಯಾಳ ಗ್ರಾಮಗಳು ಈಪ್ರದೇಶದಲ್ಲಿತ್ತು. ಬಳಿಕ ಕಾಸರಗೋಡಿಗೆ ವಿಜಯನಗರ ರಾಜರು ದಾಳಿ ನಡೆಸಿದರು. ಆಗ ಕಾಸರಗೋಡು ನೀಲೇಶ್ವರ ಕೇಂದ್ರೀಕರಿಸಿ ಆಳ್ವಿಕೆ ನಡೆಸುತ್ತಿದ್ದ ಕೋಲತ್ತಿರಿ ರಾಜರ ಅಧೀನದಲ್ಲಿತ್ತು. ಕ್ರಮೇಣ ಕೋಲತ್ತಿರಿ ಸಾಮ್ರಾಜ್ಯ ಅಧಃಪತನಗೊಂಡು ಇಲ್ಲಿ ಇಕ್ಕೇರಿ ನಾಯಕರು ಪ್ರಾಬಲ್ಯ ಹೊಂದಿದರು. 16ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯ ಅವನತಿ ಹೊಂದಿದ ಬಳಿಕ ಇಕ್ಕೇರಿ ನಾಯಕರು ಮತ್ತಷ್ಟು ಪ್ರಬಲರಾದರು. 1645ರಲ್ಲಿ ಇಕ್ಕೇರಿಯ ವೆಂಕಪ್ಪ ನಾಯಕ ಬಿದನೂರನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡನು. ಕಾಸರಗೋಡಿನ ಚಂದ್ರಗಿರಿ ಕೋಟೆ ಮತ್ತು ಬೇಕಲ ಕೋಟೆಯನ್ನು ಇವರೇ ನಿರ್ಮಿಸಿದರೆಂದು ನಿರ್ಮಾಣಗೊಂಡಿದೆ ಎಂದು ಚರಿತ್ರೆ ಹೇಳುತ್ತದೆ.
 
1763ರಲ್ಲಿ ಮೈಸೂರಿನ [[ಹೈದರಾಲಿ|ಹೈದರ್‌ ಆಲಿಯುಆಲಿ]]ಯು ಕೇರಳವನ್ನು ಸ್ವಾಧೀನ ಮಾಡುವ ಉದ್ದೇಶದೊಂದಿಗೆ ಬಿದನೂರಿಗೆ ದಾಳಿ ಮಾಡಿದನು. ಕೇರಳವನ್ನು ಸ್ವಾಧೀನಪಡಿಸುವ ತನ್ನ ಯೋಜನೆಯಲ್ಲಿ ಆತ ವಿಫಲನಾಗಿ ಮೈಸೂರಿಗೆ ಹಿಂತಿರುಗಿ, 1782ರಲ್ಲಿ ಗತಿಸಿದನು. ತಂದೆಯ ಕನಸನ್ನು ನನಸು ಮಾಡುವ ಉದ್ದೇಶದೊಂದಿಗೆ ಟಿಪ್ಪು ಸುಲ್ತಾನ್‌ ಮಲಬಾರ್‌ ಪ್ರದೇಶಕ್ಕೆ ದಾಳಿ ಮಾಡಿದನು. 1792ರ ಶ್ರೀರಂಗಪಟ್ಟಣ ಒಪ್ಪಂದದ ಪ್ರಕಾರ ಟಿಪ್ಪು ಸುಲ್ತಾನ್‌ ತುಳುನಾಡು (ಕೆನರಾ) ಹೊರತುಪಡಿಸಿದ ಮಲಬಾರ್‌ ಪ್ರದೇಶವನ್ನು ಬ್ರಿಟಿಷರಿಗೆ ಒಪ್ಪಿಸಿದನು.
 
ಒಂದು ಕಾಲದಲ್ಲಿ ಬೋಂಬೆ ಪ್ರಸಿಡೆನ್ಸಿಯ ದಕ್ಷಿಣ ಕನ್ನಡ ಜಿಲ್ಲೆಯ ಬೇಕಲ ತಾಲೂಕಿನ ಒಂದು ಭಾಗವಾಗಿತ್ತು ಕಾಸರಗೋಡು. 1882 ಎಪ್ರಿಲ್‌ 16ರಂದು ಬೇಕಲ ತಾಲೂಕು ಮದ್ರಾಸ್‌ ಪ್ರಸಿಡೆನ್ಸಿಯೊಂದಿಗೆ ವಿಲೀನವಾದಾಗ ಕಾಸರಗೋಡು ತಾಲೂಕು ರಚಿಸಲಾಯಿತು. ಆದರೂ 1913ರಲ್ಲಿ ಮದ್ರಾಸ್‌ ಗವರ್ನರ್‌ ಕೌನ್ಸಿಲ್‌ನಲ್ಲಿ ಕಾಸರಗೋಡನ್ನು ಮಲಬಾರ್‌ ಜಿಲ್ಲೆಯೊಂದಿಗೆ ವಿಲೀನಗೊಳಿಸಬೇಕು ಎಂಬ ಠರಾವು ಮಂಡಿಸಲಾಗಿತ್ತು.ಕನ್ನಡ ಸದಸ್ಯರ ತೀವ್ರ ಪ್ರತಿರೋಧದಿಂದಾಗಿ ಈ ಪ್ರಸ್ತಾವ ಬಿದ್ದು ಹೋಗಿತ್ತು. <ref name="ಕಾಸರಗೋಡು: ಚರಿತ್ರೆಯ ಕೌತುಕ"/>
"https://kn.wikipedia.org/wiki/ಕಾಸರಗೋಡು" ಇಂದ ಪಡೆಯಲ್ಪಟ್ಟಿದೆ