"ವೇದಾಂತ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
=== ಅದ್ವೈತ ವೇದಾಂತ ===
 
[[ಅದ್ವೈತ ವೇದಾಂತ]] ವನ್ನು [[ಆದಿ ಶಂಕರ]] ರು ಪ್ರತಿಪಾದಿಸಿದ್ದಾರೆ ಹಾಗು ಅವರ ಹಿರಿಯ ಗುರುಗಳಾದ [[ಗೌಡಪಾದ]]ರು ಇದನ್ನು [[ಅಜಾತಿವಾದ]] ಎಂದು ವಿವರಿಸುತ್ತಾರೆ. ವೇದಾಂತದ ಈ ಪರಂಪರೆಯಲ್ಲಿ, ಬ್ರಹ್ಮನ್ ಏಕಮೇವ ಸತ್ಯವಾಗಿದೆ, ಹಾಗು ಹೊರನೋಟಕ್ಕೆ ಕಾಣುವ ಜಗತ್ತು, ಕೇವಲ ಮಿಥ್ಯ. ಬ್ರಹ್ಮನ್ ಏಕಮೇವ ಸತ್ಯವಾದುದರಿಂದ, ಅದು ಯಾವುದೇ ರೀತಿಯ ಲಕ್ಷಣಗಳನ್ನು ಹೊಂದಿರುವುದಿಲ್ಲ. ಬ್ರಹ್ಮನ್ ನ ಭ್ರಾಮಕ ಶಕ್ತಿಯಾದ [[ಮಾಯಾ]] ಈ ಜಗತ್ತಿನ ಹುಟ್ಟಿಗೆ ಕಾರಣವಾಗಿದೆ. ಈ ಸತ್ಯದ ಬಗೆಗಿನ ಅಜ್ಞಾನವೇ ಜಗತ್ತಿನ ಎಲ್ಲ ಸಂಕಟಗಳಿಗೆ ಕಾರಣವಾಗಿದೆ ಅಲ್ಲದೆ ಬ್ರಹ್ಮನ್ ಬಗೆಗಿನ ಸಂಪೂರ್ಣ ಜ್ಞಾನದಿಂದ ವಿಮೋಚನೆಯನ್ನು ಹೊಂದಬಹುದಾಗಿದೆ. ಒಬ್ಬ ವ್ಯಕ್ತಿಯು ಬ್ರಹ್ಮನ್ ನನ್ನು ತನ್ನ ಮನಸ್ಸಿನ ಮೂಲಕ ಕಾಣಲು ಪ್ರಯತ್ನಿಸಿದರೆ, ಮಾಯೆಯ ಪ್ರಭಾವದಿಂದ, ಜಗತ್ತಿನಿಂದ ಹಾಗು ವ್ಯಕ್ತಿಯಿಂದ ಬೇರ್ಪಟ್ಟ ಬ್ರಹ್ಮನ್ ದೇವರ([[ಈಶ್ವರ]]) ರೂಪದಲ್ಲಿ ಕಂಡುಬರುತ್ತಾನೆ. ವಾಸ್ತವವಾಗಿ, ವೈಯುಕ್ತಿಕ ಆತ್ಮ ''ಜೀವಾತ್ಮನ್'' (ನೋಡಿ [[ಆತ್ಮನ್]]) ಹಾಗು ಬ್ರಹ್ಮನ್ ನಡುವೆ ಯಾವುದೇ ವ್ಯತ್ಯಾಸವು ಕಂಡುಬರುವುದಿಲ್ಲ. ಈ ಅಭಿನ್ನತೆಯ ಸತ್ಯವನ್ನು ಅರಿತರೆ ಅದೇ ವಿಮೋಚನೆಗೆ ಕಾರಣವಾಗುತ್ತದೆ ( ಅದೆಂದರೆ ಅ-ದ್ವೈತ, "ಅದ್ವೈತ").[[ಆದಿ ಶಂಕರರು ಮತ್ತು ಅದ್ವೈತ]]
 
:ಈ ರೀತಿಯಾಗಿ, ವಿಮೋಚನೆಯ ಮಾರ್ಗವನ್ನು ಅಂತಿಮವಾಗಿ ಕೇವಲ ಜ್ಞಾನ ಸಂಪಾದನೆಯಿಂದ ಮಾತ್ರ ಪಡೆಯಲು ಸಾಧ್ಯ(''ಜ್ಞಾನ'' ).<ref name="Vedanta">[http://www.hindupedia.com/en/Vedanta ವೇದಾಂತ] ಹಿಂದೂಪೀಡಿಯಾನಲ್ಲಿ, ದಿ ಹಿಂದೂ ಎನ್ಸೈಕ್ಲೋಪೀಡಿಯಾ </ref>
೪೦,೮೪೭

edits

"https://kn.wikipedia.org/wiki/ವಿಶೇಷ:MobileDiff/371643" ಇಂದ ಪಡೆಯಲ್ಪಟ್ಟಿದೆ