ದಸರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q10274 (translate me)
ಚು Mysore-palace-at-night.jpg ಹೆಸರಿನ ಫೈಲು Fastilyರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕ...
೫೧ ನೇ ಸಾಲು:
== ಭಾರತದ ಇತರೆಡೆಗಳಲ್ಲಿ ದಸರಾ ==
ಇದೇ ಹಬ್ಬವನ್ನು [[ಭಾರತ|ಭಾರತದ]] ಉತ್ತರ ಭಾಗಗಳಲ್ಲಿ 'ದಶೇರ'ವಾಗಿಯೂ, 'ದುರ್ಗಾ ಪೂಜೆ'ಯಾಗಿಯೂ ಆಚರಿಸುತ್ತಾರೆ. ೯ ದಿನಗಳ ಈ ಹಬ್ಬಕ್ಕೆ 'ನವರಾತ್ರಿ' ಎಂಬ ಹೆಸರೂ ಇರುವುದು. [[ಆಯುಧ ಪೂಜೆ]], [[ವಿಜಯ ದಶಮಿ]] ಗಳನ್ನೊಳಗೊಂಡ ಹಲವು ದಿನಗಳ ಹಬ್ಬದಾಚರಣೆ [[ಕರ್ನಾಟಕ]] ರಾಜ್ಯದಲ್ಲಿ, ಅದರಲ್ಲೂ [[ಮೈಸೂರು]] ಪ್ರಾಂತ್ಯದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ.
 
[[ಚಿತ್ರ:Mysore-palace-at-night.jpg|right|200px|thumb|ದಸರಾ ಸಮಯದಲ್ಲಿ ದೀಪಾಲಂಕಾರ ಹೊಂದಿರುವ [[ಮೈಸೂರು]] ಅರಮನೆ]]
 
[[ಪಶ್ಚಿಮ ಬಂಗಾಳ|ಬಂಗಾಳದಲ್ಲಿ]] ಈ ಸಮಯದಲ್ಲಿ [[ದುರ್ಗೆ|ದುರ್ಗೆಯ]] ಪೂಜೆ ಬಹಳ ವಿಜೃಂಭಣೆಯಿಂದ ನಡೆಯುವುದು. ಆ ಸಮಯದಲ್ಲಿ [[ಕಲ್ಕತ್ತಾ|ಕೊಲ್ಕತ್ತಾದಲ್ಲಿ]] ವಿಪರೀತವಾದ ಜನಸಂದಣಿ ಸೇರುವುದು. ಸಾರ್ವಜನಿಕವಾಗಿ ದೇವಿ ಪೂಜೆಯನ್ನು ನಡೆಸುವ ಪರಿಪಾಠವೂ ಇದೆ. ಸಿಂಹದ ಮೇಲೆ ಕುಳಿತು ವಿವಿಧ ಬಗೆಯ ಆಯುಧಗಳನ್ನು ಹಿಡಿದಿರುವ ದೇವಿಯ ದೊಡ್ಡ ಮೂರ್ತಿಯನ್ನು ಇರಿಸಿ ಬೆಳಗ್ಗೆ ಸಂಜೆಗಳಲ್ಲಿ ಪೂಜೆ ಭಜನೆಗಳನ್ನು ಅರ್ಪಿಸುವರು. ಒಂಭತ್ತೂ ದಿನಗಳು ಒಂಭತ್ತು ರೂಪದಲ್ಲಿ ದೇವಿಯನ್ನು ಆರಾಧಿಸುವರು. ಅವು ಯಾವುವೆಂದರೆ, ದುರ್ಗಾ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂತ (ಚಂದ್ರಕಾಂತ), ಕೂಷ್ಮಾಂಡ, ಸ್ಕಂದ ಮಾತಾ, ಕಾತ್ಯಾಯಿನಿ, ಕಾಳರಾತ್ರಿ, [[ಗೌರಿ|ಮಹಾ ಗೌರಿ]] ಮತ್ತು ಸಿದ್ಧಿಧಾತ್ರಿ. ದೇವೀಪುರಾಣದ ಪ್ರಕಾರ ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಕಾಮ್ಯ, ಇಷಿತ್ವಾ ಮತ್ತು ವಷಿತ್ವಾ ಎಂಬ ಎಂಟು ಸಿದ್ಧಿಗಳನ್ನು ದೇವಿಯ ಆರಾಧನೆಯಿಂದ ಪ್ರಾಪ್ತಗೊಳಿಸಿಕೊಳ್ಳಬಹುದು.
"https://kn.wikipedia.org/wiki/ದಸರ" ಇಂದ ಪಡೆಯಲ್ಪಟ್ಟಿದೆ