ಕೃಷ್ಣರಾಜಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೮೭ ನೇ ಸಾಲು:
[[File:Lakshminarayana Temple at Hosaholalu.jpg|thumb|Lakshminarayana Temple at Hosaholalu]]
 
ತಾಲ್ಲೂಕಿನಲ್ಲಿ ಅನೇಕ ಸುಂದರ ದೇವಾಲಯಗಳಿದ್ದು, ಅವುಗಳಲ್ಲಿ ೧೨-೧೩ನೆಯ ಶತಮಾನಕ್ಕೆ ಸೇರಿದ ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಕೆಲವು ದೇವಾಲಯಗಳಿವೆ. ಅಗ್ರಹಾರಬಾಚಹಳ್ಳಿ, [[ಅಘಲಯ]], [[ಕಿಕ್ಕೇರಿ]], [[ಗೋವಿಂದನಹಳ್ಳಿ]], ತೆಂಗಿನಘಟ್ಟ, ತೊಣಚಿ, (ತೊಳಸಿ), ಮಾದಾಪುರ, ಸಂತೇಬಾಚಹಳ್ಳಿ, ಸಿಂಧಘಟ್ಟಗಳಲ್ಲಿ[[ಸಿಂಧಘಟ್ಟ]]ಗಳಲ್ಲಿ ಹೊಯ್ಸಳ ದೇವಾಲಯಗಳನ್ನು ಕಾಣಬಹುದು.
 
ಇವುಗಳಲ್ಲಿ ಶಿಖರಪ್ರಾಯವಾದದು ಹೊಸಹೊಳಲು ಗ್ರಾಮದ ಲಕ್ಷ್ಮೀನಾರಾಯಣ ಸ್ವಾಮಿ ದೇವಾಲಯ. ಇದು ತ್ರಿಕೂಟಾಚಲ ದೇವಾಲಯವಾಗಿದ್ದು, ಲಕ್ಷ್ಮೀನರಸಿಂಹ ಮತ್ತು ಗೋಪಾಲಕೃಷ್ಣ ಸಹ ಇಲ್ಲಿದ್ದಾರೆ. ಅನುಪಮವಾದ ಕೆತ್ತನೆ, ಹೊರಗೋಡೆಗಳ ಮೇಲಿನ ರಾಮಾಯಣ, ಮಹಾಭಾರತ, ಭಗವತಗಳ ಕಥಾಪ್ರಸಂಗಗಳು, ದಶಾವತಾರ, ಸಮುದ್ರಮಥನ, ತ್ರಿಪುರ ದಹನ, ಅಹಲ್ಯೋದ್ದಾರ ಮತ್ತಿತರ ಪ್ರಸಂಗಗಳ ಕೆತ್ತನೆಗಳನ್ನು ಇಲ್ಲಿ ಕಾಣಬಹುದು. ಹೆಬ್ಬೆರಳಿನ ಗಾತ್ರದ ಕೋತಿಯೊಂದು ಎಳನೀರು ಕುಡಿಯುತ್ತಿರುವ ಕೆತ್ತನೆ ಶಿಲ್ಪಿಗಳ ಕೈಚಳಕಕ್ಕೆ ಕನ್ನಡಿಯಂತಿದೆ.
೧೧೦ ನೇ ಸಾಲು:
ಮೋದೂರಿನ ರಾಮಲಿಂಗೇಶ್ವರ ದೇವಾಲಯ ಸುಂದರ ದೇವಾಲಯವಾಗಿದೆ. ಇಲ್ಲಿ ಶ್ರೀರಾಮಚಂದ್ರ ಒಮ್ಮೆ ಯಾಗವನ್ನು ಮಾಡಿದ್ದ ಎಂದು ಸ್ಥಳಗಥೆಯೊಂದು ಹೇಳುತ್ತದೆ. ಇಲ್ಲಿನ ಮಣ್ಣಿನಿಂದ ವಿಭೂತಿಯನ್ನು ತಯಾರಿಸಲಾಗುತ್ತಿತ್ತು ಎಂದು ಸಹ ಹೇಳುತ್ತಾರೆ. ಇಲ್ಲಿನ ದೇವಾಲಯ ಚೋಳರ ಕಾಲದ್ದು ಎನ್ನಲಾಗಿದ್ದು, ಮೈಸೂರು ಒಡೆಯರಿಂದ ನಿರ್ಮಾಣಗೊಂಡದ್ದು ಎಂಬ ಅಭಿಪ್ರಾಯಗಳೂ ಇವೆ.
 
[[ವರಾಹನಾಥ ಕಲ್ಲಹಳ್ಳಿ]] ಎಂಬ ಗ್ರಾಮ ಹೇಮಾವತಿ ನದಿಯ ತಟದಲ್ಲಿದ್ದು, ಇಲ್ಲಿ ದಕ್ಷಿಣ ಭಾರತದಲ್ಲಿಯೇ ವಿಶಿಷ್ಠವಾದದ್ದು, ಅಪರೂಪದ್ದು ಎನ್ನಲಾದ ಭೂವರಾಹನಾಥಸ್ವಾಮಿ ದೇವಾಲಯ ಇದೆ. ವಿಷ್ಣುವಿನ ಅವತಾರಗಳಲ್ಲಿ ಒಂದಾಗಿರುವ ವರಾಹಾವತಾರದ ಭವ್ಯವಾದ ೧೪ ಅಡಿ ಎತ್ತರದ ಮೂರ್ತಿ ಭೂದೇವಿಯ ಸಹಿತವಾಗಿ ಇಲ್ಲಿದೆ. ಹೊಯ್ಸಳ ದೊರೆ ೩ನೇ ಬಲ್ಲಾಳ ತನ್ನ ಪತ್ನಿಯ ನೆನಪಿಗೆ ಅಗ್ರಹಾರವನ್ನಾಗಿ ಮಾಡಿದ್ದ ದೇಮಲಾಪುರ ಈಗಿನ ಕಲ್ಲಹಳ್ಳಿಯಾಗಿದೆ ಎಂದು ಹೇಳಲಾಗುತ್ತದೆ. ಮೈಸೂರಿನ ಪರಕಾಯ ಮಠದ ನಿರ್ವಹಣೆ ನಡುವೆಯೂ ಉಪೇಕ್ಷೆಗೆ ಒಳಗಾಗಿದ್ದ ಈ ದೇವಾಲಯ ಇದೀಗ ಪುನರ್ ನವೀಕರಣಗೊಳುತ್ತಿದೆ.
 
ಸಂಗಾಪುರದ ಬಳಿ ತ್ರಿವೇಣಿ ಸಂಗಮ ಸ್ಥಳದಲ್ಲಿರುವ ಸಂಗಮೇಶ್ವರ ದೇವಾಲಯ ಒಂದು ಪ್ರಮುಖ ದೇವಾಲಯ. ಗೂಡೇಹೊಸಳ್ಳಿಯಿಂದ ತಾಲ್ಲೂಕಿನಲ್ಲಿ ಮುಂದೆ ಸಾಗಿ ಬರುವ ಹೇಮಾವತಿಯು, ಇಲ್ಲಿ ಕಾವೇರಿಯಲ್ಲಿ ಐಕ್ಯವಾಗುತ್ತಾಳೆ. ಇವೆರಡರ ಜೊತೆಗೆ ಇಲ್ಲಿಗೇ ಹರಿದು ಬರುವ ಲಕ್ಷ್ಮಣತೀರ್ಥ ಸೇರಿ ಮೂರು ನದಿಗಳ ತ್ರಿವೇಣಿ ಸಂಗಮ ಉಂಟಾಗಿದೆ. ಕೃಷ್ಣರಾಜಸಾಗರದ ಹಿನ್ನೀರಿನಲ್ಲಿ ಕಂಗಳಿಸುವ ಇಲ್ಲಿನ ಸುಂದರ, ಪ್ರಶಾಂತವಾದ ಸ್ಥಳದಲ್ಲಿ ದೇವಾಲಯವಿದ್ದು, ಅಪಾರ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ. ತಿಪ್ಪೂರಿನ ಪಾಳಯಗಾರ ಮಾಚನಾಯಕ ಎಂಬಾತ ಇಲ್ಲಿನ ಮೂಲ ದೇವಾಲಯವನ್ನು ನಿರ್ಮಿಸಿದ ಎಂದು ಹೇಳಲಾಗುತ್ತದೆ. ಪ್ರತಿ ಶಿವರಾತ್ರಿ ಸಂದರ್ಭದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ಇಲ್ಲಿ ನಡೆಯುತ್ತವೆ.
ಸಾಸಲಿನ ಸೋಮೇಶ್ವರ ಮತ್ತು ಶಂಭುಲಿಂಗೇಶ್ವರ ದೇವಾಲಯಗಳು ಬಯಲು ಸೀಮೆಯ ಕುಕ್ಕೆ ಸುಬ್ರಹ್ಮಣ್ಯ ಎಂಬ ಖ್ಯಾತಿ ಪಡೆದಿವೆ. ಕಾರ್ತೀಕ ಮಾಸ ಸೇರಿದಂತೆ ಪ್ರತಿ ಸೋಮವಾರ ಇಲ್ಲಿಗೆ ನಾಡಿನ ವಿವಿಧ ಭಾಗಗಳಿಂದ ಅಪಾರ ಪ್ರಮಾಣದ ಭಕ್ತರು ಆಗಮಿಸಿ ನಾಗಾರಾಧನೆಯನ್ನು ನೆರವೇರಿಸುತ್ತಾರೆ. ವಿಷದ ಹಾವಿನ ಕಡಿತಕ್ಕೆ ಸಿಗುವ ಚಿಕಿತ್ಸೆ, ಚರ್ಮರೋಗಗಳನ್ನು ವಾಸಿಮಾಡುವ ಶಕ್ತಿಯನ್ನು ಹೊಂದಿದೆ ಎನ್ನಲಾದ ಇಲ್ಲಿನ ಕಲ್ಯಾಣಿ ಪ್ರಸಿದ್ಧಿಯನ್ನು ಪಡೆದಿವೆ. ಕುದುರೆ ಮಂಡಮ್ಮ ಇಲ್ಲಿನ ಗ್ರಾಮದೇವತೆ. ಮಾನಿಗ ಶೆಟ್ಟಿಯ (ಕತ್ತೆಯ) ಮೆರವಣಿಗೆ ಇಲ್ಲಿನ ಪ್ರಮುಖ ಆಚರಣೆಯಾಗಿದೆ.
 
ಬಿಲ್ಲೇನಹಳ್ಳಿ ಬಳಿಯಿರುವ [[ಗವಿರಂಗನಾಥಸ್ವಾಮಿ ದೇವಾಲಯ]] ಗ್ರಾಮೀಣರ ಪಾಲಿನ ಪ್ರಮುಖ ಯಾತ್ರಾ ಸ್ಥಳವಾಗಿದೆ. ಜನ- ಜಾನುವಾರುಗಳ ರಕ್ಷಣೆಗೆ ಇಲ್ಲಿನ ಗುಡ್ಡದ ಮೇಲಿರುವ ಗವಿರಂಗನಾಥ ಸಿದ್ಧಹಸ್ತ ಎಂಬುದು ಜನರ ನಂಬಿಕೆ. ಪುಟ್ಟ ಮಕ್ಕಳಿಗೆ ಕಿವಿ ಚುಚ್ಚಿಸುವುದು, ಹರಕೆಗಳನ್ನು ಹೊತ್ತವರು ಮಾಂಸಾಹಾರದ ಪರಗಳನ್ನು ಮಾಡುವುದು ಇಲ್ಲಿನ ವಿಶೇಷ. ವಿಷ್ಣುವು ಋಷಿಯ ರೂಪದಲ್ಲಿ ಇಲ್ಲಿ ಒಮ್ಮೆ ತಪಸ್ಸು ಮಾಡಿದ್ದ ಎಂಬ ಸ್ಥಳಗಥೆಯಿದೆ.
 
ಇವುಗಳಲ್ಲದೆ ಭಾರತೀಪುರದ ಗೋಪಾಲಕೃಷ್ಣ, ಭೈರಾಪುರದ ಭೈರವೇಶ್ವರ, ಹಿರಿಕಳಲೆ ಅರ್ಕೇಶ್ವರ, ನಾಯಕನಹಳ್ಳಿಯ ಭೈರವೇಶ್ವರ, ಕೃಷ್ಣರಾಜಪೇಟೆಯ ಕೈಲಾಸೇಶ್ವರ, ನಾಗರಘಟ್ಟದ ಮಲ್ಲೇಶ್ವರ, ಆಲೇನಹಳ್ಳಿಯ ಶಂಭುಲಿಂಗೇಶ್ವರ, ಹರಿಹರಪುರದ ಹರಿಹರೇಶ್ವರ, ಪ್ರಮುಖ ದೇವಾಲಯಗಳಾಗಿವೆ. ನಾಡಿನ ಉದ್ದಗಲಕ್ಕೂ ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ತಾಲ್ಲೂಕಿನ ಶಕ್ತಿದೇವತೆ ಚಂದುಗೋನಹಳ್ಳಿಯ ಅಮ್ಮನ ದೇವಾಲಯ ಉಲ್ಲೇಖನಾರ್ಹ. ಹಂದಿ, ಕುರಿ, ಕೋಳಿಗಳ ಬಲಿಗೆ ಮತ್ತು ಪರಗಳಿಗೆ ಹೆಸರಾದ ಸ್ಥಳ.
"https://kn.wikipedia.org/wiki/ಕೃಷ್ಣರಾಜಪೇಟೆ" ಇಂದ ಪಡೆಯಲ್ಪಟ್ಟಿದೆ