ಕೆಂಗಲ್ ಹನುಮಂತಯ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 2 interwiki links, now provided by Wikidata on d:q6389169 (translate me)
೨೨ ನೇ ಸಾಲು:
ಸ್ವತಂತ್ರ ಭಾರತದ ಪ್ರಮುಖ ರಾಜಕೀಯ ಮುತ್ಸದ್ದಿಯೂ , ಧೀಮಂತ ರಾಜಕಾರಣಿಯೂ ಆದ ಶ್ರೀ ಕೆಂಗಲ್ ಹನುಮಂತಯ್ಯನವರು ಬೆಂಗಳೂರು ಜಿಲ್ಲೆಯಲ್ಲಿನ [[ಲಕ್ಕಪ್ಪನಪಳ್ಳಿ]]ಯಲ್ಲಿ ೧೯೦೮ರಲ್ಲಿ ಒಕ್ಕಲಿಗ ಕುಟುಂಬವೊಂದರಲ್ಲಿ ಹುಟ್ಟಿದರು.೧೯೩೦ ರಲ್ಲಿ ಮೈಸೂರು ಮಹಾರಾಜಾ ಕಾಲೇಜಿನಿಂದ ಆರ್ಟ್ಸ್ ಪದವಿಯನ್ನು ಪಡೆದರು. ನಂತರ ಪೂನಾ ಲಾ ಕಾಲೇಜಿನಿಂದ ಎಲ್. ಎಲ್. ಬಿ. ಯನ್ನು ಮುಗಿಸಿದರು.ಅದೇ ವರ್ಷ ಅವರು ಬಾರ್ ಪ್ರವೇಶಿಸಿ ಸತತ ಯಶಸ್ವೀ ವೃತ್ತಿಗೆ ನಾಂದಿ ಹಾಡಿದರು. ಕಾಲೇಜುದಿನಗಳಲ್ಲಿಯೇ ಅವರು ತಮ್ಮ ಉತ್ಸಾಹ ಮತ್ತು ಚುರುಕುತನವನ್ನು ಪ್ರದರ್ಶಿಸಿದ್ದರು . ವಿದ್ಯಾರ್ಥಿಸಂಘ ಮತ್ತು ಕರ್ನಾಟಕಸಂಘಗಳಿಗೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು. ಮಹಾತ್ಮಾ ಗಾಂಧಿಯವರಿಂದ ಪ್ರೇರಿತರಾಗಿ ಸ್ವಾತಂತ್ರ್ಯಹೋರಾಟಕ್ಕಿಳಿದು ಅದಮ್ಯಶಕ್ತಿ ಮತ್ತು ಅರ್ಪಣಾಮನೋಭಾವವನ್ನು ಮೆರೆದರು. ಈ ಹೋರಾಟದ ಅವಧಿಯಲ್ಲಿ ಅವರು ಒಂಬತ್ತಕಿಂತಲೂ ಹೆಚ್ಚುಬಾರಿ ಬಂಧನಕ್ಕೊಳಗಾದರು.
==ಸ್ವತಂತ್ರ್ಯಾನಂತರ ಕೆಂಗಲ್ ರು ಕೆಲವು ಜವಾಬ್ದಾರಿ ಹುದ್ದೆಗಳನ್ನು ನಿಭಾಯಿಸಿದರು==
ಸುದೀರ್ಘಹೋರಾಟದ ನಂತರ ಭಾರತವು ೧೯೪೭ ರ ಅಗಸ್ಟ್ ೧೫ ರಂದು ಸ್ವತಂತ್ರವಾಯಿತು. ರಾಜಕಾರಣದಲ್ಲಿ ಅದಾಗಲೇ ಸುವಿಖ್ಯಾತರಾಗಿದ್ದ ಕೆಂಗಲ್ ಹನುಮಂತರಾಯರನ್ನು ಒಮ್ಮತದಿಂದ 'ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ'ರನ್ನಾಗಿ ೧೯೪೮ ರಲ್ಲಿ ಆರಿಸಲಾಯಿತು. ೧೯೫೧ ರಲ್ಲಿ ಮೈಸೂರು ರಾಜ್ಯಕ್ಕೆ[[ ಕೆಂಗಲ್ ಹನುಮಂತಯ್ಯನ]]ನವರು ಮೊದಲಎರಡನೆ ಮುಖ್ಯಮಂತ್ರಿಯಾದರು. ಜನರ ನಿಜವಾದ
ನಾಯಕನಾಗಿದ್ದುಕೊಂಡು ರಾಜಕೀಯ ಹಸ್ತಕ್ಷೇಪವಿಲ್ಲದ ದಕ್ಷ ಆಡಳಿತವನ್ನು ನೀಡಿ ರಾಜ್ಯದ ಏಳಿಗೆಗೆ ಮತ್ತು ಗ್ರಾಮೀಣ ಜನರ ಉದ್ಧಾರಕ್ಕೆ ದುಡಿದರು. ದೂರದೃಷ್ಟಿಯುಳ್ಳ ನಾಯಕನಾಗಿ ಅವರು ಅನೇಕ ಸಾಧನೆಗಳನ್ನು ಮಾಡಿದರು. ಅದಕ್ಕೆ ಬೆಂಗಳೂರಿನಲ್ಲಿರುವ ಭವ್ಯ [[ವಿಧಾನಸೌಧ]] ಕಟ್ಟಡವೇ ಸಾಕ್ಷಿಯಾಗಿದೆ. ದೇಶದಲ್ಲೇ ಅತಿ ದೊಡ್ಡದಾದ ಶಾಸಕಾಂಗ ಮತ್ತು ಆಡಳಿತ ಕಚೇರಿಯ ಕಟ್ಟಡವಿದು. ಇದರ ಕಲ್ಪನೆ ಮತ್ತು ನಿರ್ಮಾಣ ಪೂರ್ಣತಃ ಅವರದೇ . ಈ 'ಗ್ರಾನೈಟ್ ಕಟ್ಟಡ ರಚನೆ'ಯು 'ದ್ರಾವಿಡ ಶೈಲಿ'ಯನ್ನು ಆಧರಿಸಿದೆ. [[ಶ್ರೀ ಜವಾಹರಲಾಲ್ ನೆಹರು]]ರವರು '[[ಈ ಕಟ್ಟಡವನ್ನು ನೋಡಿ ಮಂತ್ರಮುಗ್ಧನಾದೆ]]' ಎಂದು ಹೇಳಿದ್ದಾರೆ.
 
==ಕರ್ನಾಟಕ ಏಕೀಕರಣದ ಹೋರಾಟಗಾರ==
'ಕರ್ನಾಟಕದ ಏಕೀಕರಣವು ಅವರ ಇನ್ನೊಂದು ಮಹಾನ್ ಸಾಧನೆ'. ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ರಾಜ್ಯವಾಗಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು. ಭಾಷೆಯಾಧಾರಿತ ರಾಜ್ಯ ನಿರ್ಮಾಣವನ್ನು ಬೆಂಬಲಿಸಿ ೧೯೫೫ ರಲ್ಲಿ 'ಮೈಸೂರು ವಿಧಾಯಕಸಭೆ'ಯಲ್ಲಿ ಅವರು ಮಾಡಿದ ಭಾಷಣವು ಐತಿಹಾಸಿಕವಾಗಿದೆ.
"https://kn.wikipedia.org/wiki/ಕೆಂಗಲ್_ಹನುಮಂತಯ್ಯ" ಇಂದ ಪಡೆಯಲ್ಪಟ್ಟಿದೆ