ಪ್ರಾಣ್ (ನಟ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೫೫ ನೇ ಸಾಲು:
==ಪ್ರಾಣ್ ಎಂಬ ಸ್ವರೂಪ==
ಮಕ್ಕಳು ಗಲಾಟೆ ಮಾಡಿದರೆ 'ಪ್ರಾಣ್ ಬಂದ್ರು' ಎಂದು ಪೋಷಕರು ಹೆದರಿಸುತ್ತಿದ್ದ ಕಥೆ ಒಂದು ರೀತಿಯದ್ದಾದರೆ, ಇಡೀ ಚಿತ್ರರಂಗದಲ್ಲಿ ‘ಪ್ರಾಣ್ ಸಾಹೇಬ್’ ಅಂದರೆ ಒಂದು ಗೌರವಾನ್ವಿತ ವ್ಯಕ್ತಿತ್ವ. ಪ್ರಾಣ್ ತಮ್ಮ ಪಾತ್ರಗಳಲ್ಲಿ ಅಭಿನಯಿಸುವಾಗ ಒಂದು ಚಿತ್ರದಲ್ಲಿ ಹೇಳುವ 'ಬರ್ಕ್ಹುರ್ದಾರ್', ಎನ್ನುವ ಡಯಲಾಗ್, ಅತ್ಯಂತ ಜನಪ್ರಿಯತೆ ಗಳಿಸಿದೆ.ಪ್ರಾಣ್ ಮಾತನಾಡುವಾಗ ಅವರ ಧ್ವನಿ ಹೃದಯದಿಂದ ಬರುತ್ತಿತ್ತು. ಮಾತಿನಲ್ಲಿ ಒಂದು ಗತ್ತು ಇತ್ತು. ಅವರ ಮಾತಿನ ಧಾಟಿಯನ್ನು ನಾವು,'ಜಂಜೀರ್' ಚಿತ್ರದಲ್ಲಿ ಕಾಣಬಹುದು : "ಈಸ್ ಇಲಾಖೆ ಮೇ ನಯೇ ಆಯೆ ಹೊ ಸಾಹೇಬ್; ವರ್ನಾ ಶೇರ್ ಖಾನ್ ಕೊ ಕೌನ್ ನಹಿ ಜಾನ್ತಾ" ಹಾಗೂ 'ಜಿಸ್ ದೇಸ್ ಮೇ ಗಂಗಾ ಬೆಹ್ತಿ ಹೈ' ಚಿತ್ರದಲ್ಲಿ, "ತುಮ್ಹಾರ ಬಾಪ್ ರಾಕಾ",
==ಪ್ರಾಣ್ ಬಗ್ಗೆ ಕೆಲವು ಸ್ವಾರಸ್ಯಕರ ಮಾಹಿತಿಗಳು==
* ಪ್ರಾಣ್ ಮೊಟ್ಟಮೊದಲು ಬೊಂಬಾಯಿಗೆ ಬಂದಾಗ, 'ತಾಜ್ ಮಹಲ್ ಹೋಟೆಲ್' ನಲ್ಲಿ ವಾಸವಾಗಿದ್ದರು. ಬೊಂಬಾಯಿನಲ್ಲಿ ಆಗ ಅವರು ನಿರುದ್ಯೊಗಿಯಾಗಿದ್ದರು.ಊರಿನಿಂದ ತಂದ ಹಣ ಬೇಗ ವ್ಯಯವಾಗಿ, ಚಿಕ್ಕ ಹೋಟೆಲ್ ಗಳಲ್ಲಿ ಗೆಸ್ಟ್ ಹೌಸ್ ಗಳಲ್ಲಿ ಇರಬೇಕಾಗಿ ಬಂತು. ಸನ್. ೧೯೫೪ ರ ವರೆಗೆ ಬಾಡಿಗೆ ಮನೆಗಳಲ್ಲಿ ವಾಸ್ತವ್ಯ. 'ಪಾಲಿ ಹಿಲ್' ನಲ್ಲಿ ೨ ಬೆಡ್ ರೂಂ ಫ್ಲಾಟ್ ಬಾಡಿಗೆಗೆ ಗೊತ್ತುಮಾಡಿಕೊಂಡರು. ನಂತರ 'ಮಝಗಾಂ'(ಸೆಂಟ್ರೆಲ್ ಮುಂಬೈ)ನಲ್ಲಿ ವಾಸವಾಗಿದ್ದರು. ಕಿರಿಯ ಮಗಳು 'ಪಿಂಕಿ,' ೩ ವರ್ಷದವಳಿದ್ದಾಗ,'ಬಾಂದ್ರದ ಯೂನಿಯನ್ ಪಾರ್ಕ್' ನಲ್ಲಿ ಒಂದು 'ಬಂಗಲೆ' ಖರೀದಿಸಿದರು.
* ಪ್ರಾಣ್ ಖರೀದಿಸಿದ ಮೊದಲ ಕಾರು,'ಹಿಲ್ಮನ್'.
* 'ಜಂಗಲ್ ಮೇ ಮಂಗಲ್' ಎಂಬ ಚಿತ್ರದಲ್ಲಿ ಮೊಟ್ಟಮೊದಲು 'ಡಬಲ್ ರೋಲ್' ನಲ್ಲಿ ಕಾಣಿಸಿಕೊಂಡರು.
* ೧೯೪೯ ರಲ್ಲಿ 'ಬಡಿ ಬೆಹೆನ್' ಎಂಬ ಚಿತ್ರದಲ್ಲಿ ನಟಿಸುವಾಗ ಸಿಗರೆಟ್ ಸೇದಿ, ರಿಂಗ್ ತರಹ ಹೊಗೆ ಬಿಡುವ ಅಭ್ಯಾಸ ಮಾಡಿಕೊಂಡರು.
* ೧೯೫೦ ರಿಂದ ೧೯೯೦ ರ ತನಕ ಹಲವು ನಿರ್ದೇಶಕರು ತಮ್ಮ ಚಿತ್ರಗಳಲ್ಲಿ ಆ ತರಹ ಸಿಗರೇಟ್ ಸೇದಿ ಹೊಗೆ ರಿಂಗ್ ಬಿಡಲು ಬೇಡಿಕೆ ನೀಡಿದರು.
* ಸ್ಮೋಕ್ ಪೈಪ್ ಅವರಿಗೆ ಬಹಳ ಪ್ರಿಯ-ಸಂಗ್ರಹಗಳಲ್ಲೊಂದು. 'ವಾಕಿಂಗ್ ಸ್ಟಿಕ್ಸ್ ಸಂಗ್ರಹ' ಮತ್ತು 'ನಾಯಿಗಳ ಸಂಗ್ರಹ'.
* ೧೯೭೮ ರಲ್ಲಿ 'ಡಾನ್' ಚಿತ್ರದಲ್ಲಿ ಅಮಿತಾಬ್ ಜೊತೆ ನಟಿಸಿದಾಗ, ಅವರ ಸಂಭಾವನೆ, ೭.೫ ಲಕ್ಷ ರೂಪಾಯಿಗಳು. ಅಮಿತಾಬ್ ರವರ ಸಂಭಾವನೆ, ೨.೫ ಲಕ್ಷ ರೂಪಾಯಿಗಳು.
* ೧೯೭೦ ರಲ್ಲಿ ತಮ್ಮದೇ ಆದ 'ವಿತರಣ ಸಂಸ್ಥೆ'ಯನ್ನು ದೆಹಲಿಯಲ್ಲಿ ಸ್ಥಾಪಿಸಿದ್ದರು.
* 'ಸಬ್ ಸೆ ಬಡಾ ರುಪಯ್ಯಾ' ಎಂಬ ದೂರದರ್ಶನದ ಟೆಲಿವಿಶನ್ ಧಾರಾವಾಹಿಯಲ್ಲಿ ಅಭಿನಯಿಸಿದರು.
* ರಾಜ್ಕಪೂರ್ ನಿರ್ಮಿಸಿದ 'ಬಾಬಿ' ಚಿತ್ರದಲ್ಲಿ 'ಪ್ರಾಣ್' ಅವರು ಮಾಡಿದ ಪಾತ್ರಕ್ಕೆ ಆಗಿನ ಅವರ ಫೀಸ್ ಕೊಡುವ ಸಾಮರ್ಥ್ಯವಿರದೆ ರಾಜ್ಕಪೂರ್ ಪೇಚಾಡಿಕೊಂಡಾಗ, ಕೇವಲ ಒಂದು ರೂಪಾಯಿ ಮಾತ್ರ ತೆಗೆದುಕೊಂಡರು.
* ಒಂದು ಸಮಯದಲ್ಲಿ, ಪ್ರಾಣ್, ಅಮಿತಾಬ್, ವಿನೋದ್ ಖನ್ನ, ನವೀನ್ ನಿಶ್ಚಲ್, ಶತ್ರುಘ್ನ ಸಿಂಹ, ರಣ್ಧೀರ್ ಕಪೂರ್, ರಿಷಿ ಕಪೂರ್, ರವರಿಗಿಂತ ಅಧಿಕ ಸಂಭಾವನೆಗಳಿಸುತ್ತಿದ್ದರು.೧೯೭೦-೧೯೮೨ ರಲ್ಲಿ, ಕೇವಲ ರಾಜೇಶ್ ಖನ್ನ ಹೆಚ್ಚು ಸಂಭಾವನೆ ಪಡೆಯುತ್ತಿದ್ದರು. ಸನ್.೧೯೭೦-೧೯೮೯ ಸಮಯದಲ್ಲಿ, ಪ್ರಾಣ್ ರವರಿಗೂ ಸಂಜೀವ್ ಕುಮಾರ್ ಧರ್ಮೇಂದ್ರ,ಶಶಿಕಪೂರ್, ಒಟ್ಟಿಗೆ ಅಭಿನಯಿಸಿದಾಗ, ಅವರಷ್ಟೇ ಹಣ ಪಡೆಯುತ್ತಿದ್ದರು.
* ೨ ತೆಲುಗು ಚಿತ್ರಗಳಲ್ಲಿ, ೧ ೯ ೮ ೬,ರಲ್ಲಿ, 'ತಂದ್ರ ಪಾಪರಾಯುಡು', ೧೯೯೦ ರಲ್ಲಿ ಚಿರಂಜೀವಿ ಜೊತೆಗೆ, 'ಕೊಡಮ ಸಿಂಹಂ' ಎಂಬ ಚಿತ್ರಗಳಲ್ಲಿ ಅಭಿನಯಿಸಿದರು. ಸನ್.೧೯೯೧ ರಲ್ಲಿ 'ಹೊಸರಾಗ'ವೆಂಬ ಕನ್ನಡ ಚಿತ್ರದಲ್ಲಿ ಅಭಿನಯಿಸಿದರು.
.
 
 
 
 
http://www.imdb.com/name/nm0695199/bio
 
==ಪ್ರಶಸ್ತಿ ಗೌರವಗಳು==
"https://kn.wikipedia.org/wiki/ಪ್ರಾಣ್_(ನಟ)" ಇಂದ ಪಡೆಯಲ್ಪಟ್ಟಿದೆ