ಕಲ್ಪನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೨ ನೇ ಸಾಲು:
೩-೫-೧೯೭೯ ರಂದು ಕಲ್ಪನಾ ಆತ್ಮ ಹತ್ಯೆ ಮಾಡಿಕೊಂಡರು. ಕಲ್ಪನಾ ಆತ್ಮಹತ್ಯೆ ಮಾಡಿಕೊಂಡ ರಾತ್ರಿ ಸುಮಾರು ೨-೩೦ರ ವೇಳಗೆ ಸಂಕೇಶ್ವರದಲ್ಲಿ ‘ಕುಮಾರ ರಾಮ’ ನಾಟಕ ನಡೆದಿತ್ತು. ಅದರಲ್ಲಿ ಗುಡಗೇರಿ ಬಸವರಾಜು ಕುಮಾರ ರಾಮನಾಗಿದ್ದರೆ ಕಲ್ಪನಾ ಮಲತಾಯಿಯ ಪಾತ್ರದಲ್ಲಿದ್ದರು. ನಾಟಕದಲ್ಲಿ ಭಾಗವಹಿಸುವಾಗಲೇ ಕಲ್ಪನಾ ಅನ್ಯಮನಸ್ಕರಾಗಿದ್ದರು. ನಾಟಕದಲ್ಲಿ ಕುಮಾರ ರಾಮ ತನಗೆ ‘ಹಸಿವಾಗಿದೆ’ ಎಂದಾಗ ‘ರೊಟ್ಟಿ ತಿನ್ನು’ ಎಂದು ಹೇಳುವ ಬದಲು ‘ಹುಲ್ಲು ತಿನ್ನು’ ಎಂದು ಹೇಳಿದ್ದರು. ಜನ ಬಿದ್ದು ಬಿದ್ದು ನಕ್ಕರು. ಇದರಿಂದ ಅವಮಾನಿತನಾದ ಬಸವರಾಜ ‘ ಹೌದು ನಾನು ಹಸು, ಹಲ್ಲು ಕೊಡು’ ಎಂದು ಹೇಳುತ್ತಾ ವೇದಿಕೆಯ ತುಂಬಾ ಓಡಾಡಲು ಆರಂಭಿಸಿದರು. ಜನ ಇನ್ನಷ್ಟು ಕೇಕೆ ಹಾಕಲು ಆರಂಭಿಸಿದಾಗ ಅಪಮಾನಗೊಂಡ ಬಸವರಾಜ್ ನಾಟಕವನ್ನು ಅಲ್ಲಿಗೇ ನಿಲ್ಲಿಸಿದರು. ಪರದೆ ಬಿದ್ದ ನಂತರ ನೇರವಾಗಿ ಕಲ್ಪನಾರ ಕಡೆ ಧಾವಿಸಿ ಕೆನ್ನೆಗೆ ಹೊಡೆದರು. ಇದರಿಂದ ವಿಚಲಿತರಾದ ಅವರು ವೇಷ ಕೂಡ ಬದಲಾಯಿಸದೆ ನೇರವಾಗಿ ಗೋಟೂರು ಪ್ರವಾಸಿ ಧಾಮಕ್ಕೆ ಬಂದು ಆತ್ಮ ಹತ್ಯೆ ಮಾಡಿಕೊಂಡರು ಎಂದು ಒಂದೆಡೆ ಬರೆಯುತ್ತಾರೆ ಸಿನಿಮಾ ಕುರಿತ ಸಂವೇದನಾಶೀಲ ಬರಹಗಾರ ಎನ್.ಎಸ್. ಶ್ರೀಧರಮೂರ್ತಿಯವರು..ಪೋಸ್ಟ್ ಮಾರ್ಟಂ ವರದಿ ಪ್ರಕಾರ ಕಲ್ಪನಾ ೫೬ ನಿದ್ದೆ ಮಾತ್ರೆಗಳನ್ನು ನುಂಗಿದ್ದರು. ಮಾನಸಿಕವಾಗಿ ವಿಚಲಿತರಾದಾಗಲೆಲ್ಲ ನಿದ್ದೆ ಮಾತ್ರೆ ನುಂಗುವ ಹವ್ಯಾಸ ಅವರಿಗಿತ್ತು. ಹಿಂದೆ ಎರಡು ಮೂರು ಬಾರಿ ಹೀಗೆ ಸಾವಿನ ಅಂಚನ್ನು ಮುಟ್ಟಿ ಬಂದಿದ್ದರು ಈ ಸಲ ನಿದ್ರಾ ಮಾತ್ರೆಗಳ ಪ್ರಮಾಣ ಅವರನ್ನು ಸೀದಾ ಯುಮಪುರಿಗೇ ಕರೆದುಕೊಂಡು ಹೋಗಿತ್ತು. ಕಲ್ಪನಾ ಸಾಹಿತ್ಯ ಸಂಸ್ಕೃತಿಗಳ ಬಗ್ಗೆ ಒಲವನ್ನು ಇಟ್ಟು ಕೊಂಡಿದ್ದರು. ಪುಸ್ತಕ ಪ್ರೇಮಿಯಾಗಿದ್ದರು. ಒಳ್ಳೆಯ ಕವಿತೆಗಳನ್ನು ಬರೆದಿದ್ದರು. ಅಂಕಣಗಳನ್ನು ಬರೆದಿದ್ದರು. ‘ಯಾವ ಜನ್ಮದ ಮೈತ್ರಿ’ ಚಿತ್ರದ ಪಾತ್ರ ವಿವಾದಕ್ಕೆ ಸಿಲುಕಿದಾಗ ದಾಖಲೆಗಳೊಂದಿಗೆ ತಾವೇ ಸಮರ್ಥಿಸಿಕೊಂಡಿದ್ದರು ಮೊದಲಾದ ಹಲವು ಅಂಶಗಳು ಚರಿತ್ರೆಯಲ್ಲಿ ದಾಖಲಾಗಲಿಲ್ಲ.
 
ಸುಮಾರು ಇಪ್ಪತ್ತೇಳು ಕನ್ನಡ ಚಿತ್ರಗಳಲ್ಲಿ ಬಹುಮುಖ ಪ್ರತಿಭೆಯಾಗಿ ಮಿಂಚಿದ ಮಿನುಗುತಾರೆ ತಮಿಳು ಭಾಷೆಯಲ್ಲೂ ಕಂಡರು ಅದರಲ್ಲಿ ಮುಖ್ಯವಾಗಿ "ಮಡ್ರಾಸ್ ಟು ಪಾಂಡಿಚರಿ" ಚಿತ್ರವು ಕಲ್ಪನಾ ಅವರನ್ನು ಯಶಸ್ಸಿನ ಶಿಖರವನ್ನೇರಿಸಿತು ಆ ಚಿತ್ರ ಹಿಂದಿ ಭಾಷೆಗೂ ರಿಮೇಕ್ ಆಗಿ ಅಮಿತಾಬ್ , ಅರುಣಾ ಇರಾನಿ ಮುಖ್ಯಭೂಮಿಕೆಯಲ್ಲಿ ತೆರೆಕಂಡು ಯಶಸ್ಸು ಗಳಿಸಿತು. ಇಡೀ ಚಿತ್ರೋಧ್ಯಮದಲ್ಲಿ ಅತ್ಯುತ್ತಮ ಪ್ರತಿಭೆಯಾಗಿ , ಅವರ ಮಾತಿನ ಶೈಲಿ ,ಚುರುಕು ಚಟುವಟಿಕೆ , ಅಸಾಂಪ್ರದಾಯಿಕ ಜೀವನ ಶೈಲಿ , ಅವರ ಉಡುಗೆ ತೊಡುಗೆ ಇನ್ನಷ್ಟು ಜನಪ್ರಿಯತೆ ತಂದುಕೊಟ್ಟವು. ಆ ಕಾಲದ (೧೯೬೫ -೭೫)ಮಾಡ್ರನ್‍ ಉಡುಗೆಯನ್ನು ತೊಟ್ಟು ತನ್ನದೇ ಆದ ಟ್ರೆಂಡ್ ಹುಟ್ಟುಹಾಕಿಕೊಂಡಾಕೆ , ದೊಡ್ಡ ದೊಡ್ಡ ಓಲೆಗಳು ಅದಕ್ಕೆ ಒಪ್ಪುವಂತಹ ದೊಡ್ಡ ದೊಡ್ಡ ಉಂಗುರಗಳು , ಗಿಡ್ಡ ಸೆರಗು , ಹಾರದಂತಹ ಸರಗಳು , ಗಿಡ್ಡ ಗಿಡ್ಡ ತೋಳಿನ ಬೌಸುಗಳನ್ನು ಧರಿಸಿ ತಮ್ಮದೇ ಆದ ಟ್ರೆಂಡ್ ಪ್ರಾರಂಭಿಸಿದ ಈ ಚೆಲುವೆಯ ಅಭಿನಯ ಕಂಡು ಬೆರಗಾಗದವರಿಲ್ಲ. ಹಣ್ಣೆಲೆ ಚಿಗುರಿದಾಗ , ಶರಪಂಜರ , ಬೆಳ್ಳಿಮೋಡ ಚಿತ್ರಗಳಲ್ಲಿ ಅತ್ಯದ್ಭುತ ಅಭಿನಯಕ್ಕಾಗಿ ರಾಜ್ಯ ಪ್ರಶಸ್ತಿಯನ್ನೂ ತಮ್ಮ ಮುಡಿಗೇರಿಸಿಕೊಂಡು ಕನ್ನಡ ಚಿತ್ರೋಧ್ಯಮದಲ್ಲಿ ರಾಣಿಯಂತೆ ಶೋಭಿಸಿದ ಕಲ್ಪನಾ ಬಣ್ಣದ ಜಗತ್ತಿನಲ್ಲಿ ತಮ್ಮ ಚಿನ್ನದಂತಹ ಜೀವನವನ್ನು ತಮ್ಮ ಕೈಯಾರ ಹಾಳುಮಾಡಿಕೊಂಡರು ಮಿನುಗು ತಾರೆ ಅಂದಿಗು,ಇಂದಿಗು,ಎಂದೆಂದಿಗೂ ಮಿನುಗು ತಾರೆಗೆ ಸರಿ ಸಾಟಿಯಾರಿಲ್ಲ,ಮಿನುಗುತಾರೆ ಆಕಾಶದಲ್ಲೆಂದೆದೂ ಮಿನುಗುತ್ತಿರುತ್ತಾರೆ.."ಕಲ್ಪನಾ ವಿಲಾಸ" ಎಂಬ ಹೆಸರಿನ ನಟಿ ಕಲ್ಪನಾರ ಜೀವನ ಚರಿತ್ರೆಯ ಪುಸ್ತಕವೊಂದಿದೆ. ಸೆಪ್ಟೆಂಬರ್ ೨೦ ೨೦೦೯ರಲ್ಲಿ ಬೆಂಗಳೂರು ನಗರದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸಿದ್ದ 'ಮನೆಯಂಗಳದಲ್ಲಿ ಮಾತುಕತೆ' ಕಾರ್ಯಕ್ರಮದಲ್ಲಿಹಿರಿಯ ರಂಗಕರ್ಮಿ ಗುಡಗೇರಿ ಬಸವರಾಜ್ ಅವರು ಭಾಗವಹಿಸಿ ಮಾತನಾಡುತ್ತಾ ಒಂದು ವೇಳೆ ಮಿನುಗುತಾರೆ ಕಲ್ಪನಾ ಇಂದು ಬದುಕಿದ್ದಿದ್ದರೆ ನಾನು ಮತ್ತು ಆಕೆ ರಂಗಭೂಮಿಯ 'ಧ್ರುವತಾರಾ ದಂಪತಿ'ಗಳಾಗಿರುತ್ತಿದ್ದೆವು. ಆಕೆಯ ವಿಷಯದಲ್ಲಿ ನಾನು ನಿರಪರಾಧಿ. ಆಕೆ ತುಂಬಾ ದುಡುಕಿನ ನಿರ್ಧಾರ ತೆಗೆದುಕೊಂಡರು ಎಂದು ಹೇಳಿದ್ದಾರೆ."ನಮನ"
 
 
"https://kn.wikipedia.org/wiki/ಕಲ್ಪನಾ" ಇಂದ ಪಡೆಯಲ್ಪಟ್ಟಿದೆ