ಕಲ್ಪನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:Kalpana.jpg|thumb|right|ಕಲ್ಪನಾ]]
''''ಮಿನುಗುತಾರೆ ಕಲ್ಪನಾ''(೧೮-೭-೧೯೪೩-/೧೩-೫-೧೯೭೯)'' ಎನಿಸಿ [[ಕನ್ನಡ]] ಚಿತ್ರ ರಸಿಕರ ಮನಸ್ಸಿನಲ್ಲಿ ಅಚ್ಚಳಿಯದ ಪಾತ್ರಗಳನ್ನು ನಿರ್ವಹಿಸಿ ಜನಪ್ರಿಯತೆಯ ಉತ್ತುಂಗಕ್ಕೇರಿದ, ನಟಿ ಕಲ್ಪನಾ ಮೂಲತ: [[ಮಂಗಳೂರು|ಮಂಗಳೂರಿನವರು]]. [[ಕನ್ನಡ ಚಿತ್ರರಂಗ|ಚಿತ್ರರಂಗವನ್ನು]] ಪ್ರವೇಶಿಸುವ ಮೊದಲು ಅವರ ಹೆಸರು '''ಶರತ್ ಲತಾ'''.ಹುಟ್ಟಿದ್ದು [[೧೯೪೩]]ರ [[ಜುಲೈ ೧೮]] ರಂದು.ಇವರ ಮಾತ್ರುಭಾಷೆ. [http://%E0%B2%A4%E0%B3%81%E0%B2%B3%E0%B3%81 ತುಳು]..ತಂದೆ ಕೃಷ್ಣಮೂರ್ತಿ,ತಾಯಿ ಜಾನಕಮ್ಮ.
 
ವೃತ್ತಿ ರಂಗಭೂಮಿಯಲ್ಲಿ ಸ್ತ್ರೀ ನಾಟಕ ಮಂಡಳಿಯ ಮೂಲಕ ರಂಗಭೂಮಿ ಪ್ರವೇಶಿಸಿ ಚಿತ್ರರಂಗದ ಮಿನುಗುತಾರೆ ಎನಿಸಿದ್ದ ಕಲ್ಪನಾ ಅಭಿನಯದ ಮೊದಲ ಕನ್ನಡ [[ಚಲನಚಿತ್ರ]] [[:Category:ವರ್ಷ-೧೯೬೩ ಕನ್ನಡಚಿತ್ರಗಳು|೧೯೬೩ರಲ್ಲಿ]] [[ಬಿ.ಆರ್. ಪಂತುಲು]] ನಿರ್ದೇಶನದಲ್ಲಿ ಬಂದ [[ಸಾಕು ಮಗಳು]] ಚಿತ್ರ.೧೯೬೭ರಲ್ಲಿ ಬಿಡುಗಡೆಯಾದ ಚಿತ್ರ ಬೆಳ್ಳಿಮೋಡ ಅವರಿಗೆ ಜನಪ್ರಿಯತೆಯನ್ನು ತಂದುಕೊಟ್ಟಿತು.
೧೧ ನೇ ಸಾಲು:
ಈಕೆಯ ವಿರುದ್ಧ ಅಹಂಕಾರ, ಉದ್ಧಟತನದವಳು ಎಂಬ ಮಾತುಗಳೂ ಇದ್ದವು, ವಾಸ್ತವವಾಗಿ ಕಲ್ಪನಾಳಿಗೆ ಹತ್ತಿರವಿರುವವರು ಹೇಳುವ ಮಾಹಿತಿಯಂತೆ . ಕಲ್ಪನಾರಿಗೆ ಚರ್ಮದ ಸಮಸ್ಯೆ ಇತ್ತು. ಚರ್ಮ ಪೊರೆ (ಮೇಲ್ಪದರ) ಬಿಟ್ಟಂತಾಗುತ್ತಿತ್ತು.(ಹುರುಪು-ಗ್ರಾಮೀಣಭಾಷೆಯಲ್ಲಿ ಅದು ಉರುಪೆ). ಚಿತ್ರಗಳಲ್ಲಿ ಅರ್ಧ ತೋಳು ತೊಟ್ಟು ಅಭಿನಯಿಸಬೇಕಾದ ಸನ್ನಿವೇಶಗಳೆಲ್ಲಾ ಬಹಳ ಹಿಂಸೆ. ಗ್ಲ್ಯಾಮರ್ ನಟಿಗೆ, ಇದರ ಬಗ್ಗೆ ದುಃಖವೂ ಇತ್ತು. ಎಷ್ಟೋ ಬಾರಿ ಅತ್ತಿದ್ದೂ ಉಂಟು. ಅದಕ್ಕೇ, ಹೆಚ್ಚು ಚಿತ್ರಗಳಲ್ಲಿ ತುಂಬು ತೋಳಿನ ಅಂಗಿಯನ್ನೇ ಧರಿಸಿದ್ದಾರೆ.ಎಷ್ಟು ಮೇಕಪ್ ಮಾಡಿಕೊಂಡರೂ ಆ ತೊಂದರೆ ಹೋಗುತ್ತಿರಲಿಲ್ಲ. ಆದರೆ ಕಲ್ಪನಾರಿಗೆ, ಆ ಸತ್ಯವನ್ನು ಹೇಳಲಾಗದೇ ನುಂಗಿಕೊಳ್ಳುವ ಅನಿವಾರ್ಯತೆ ಬದುಕಿಗಿತ್ತು. ಒಮ್ಮೆ ಈ ಸಂಗತಿ ಬಯಲಾದರೆ ತನ್ನ ತಾರಾಮೌಲ್ಯಕ್ಕೆ ಧಕ್ಕೆಯಾದೀತೆಂಬ ಭಯ…ಎಲ್ಲವೂ ಒಟ್ಟಾಗಿ ಅವರ ವಿರುದ್ಧ ಅಹಂಕಾರ, ಉದ್ಧಟತನದವಳು ಎಂಬ ವದಂತಿಗೆ ಕಾರಣವಾಗಿತ್ತು.
 
೩-೫-೧೯೭೯ ರಂದು ಕಲ್ಪನಾ ಆತ್ಮ ಹತ್ಯೆ ಮಾಡಿಕೊಂಡರು,ಕಲ್ಪನಾ ಆತ್ಮಹತ್ಯೆ ಮಾಡಿಕೊಂಡ ರಾತ್ರಿ ಸುಮಾರು ೨-೩೦ರ ವೇಳಗೆ ಸಂಕೇಶ್ವರದಲ್ಲಿ ‘ಕುಮಾರ ರಾಮ’ ನಾಟಕ ನಡೆದಿತ್ತು. ಅದರಲ್ಲಿ ಗುಡಗೇರಿ ಬಸವರಾಜು ಕುಮಾರ ರಾಮನಾಗಿದ್ದರೆ ಕಲ್ಪನಾ ಮಲತಾಯಿಯ ಪಾತ್ರದಲ್ಲಿದ್ದರು. ನಾಟಕದಲ್ಲಿ ಭಾಗವಹಿಸುವಾಗಲೇ ಕಲ್ಪನಾ ಅನ್ಯಮನಸ್ಕರಾಗಿದ್ದರು. ನಾಟಕದಲ್ಲಿ ಕುಮಾರ ರಾಮ ತನಗೆ ‘ಹಸಿವಾಗಿದೆ’ ಎಂದಾಗ ‘ರೊಟ್ಟಿ ತಿನ್ನು’ ಎಂದು ಹೇಳುವ ಬದಲು ‘ಹುಲ್ಲು ತಿನ್ನು’ ಎಂದು ಹೇಳಿದ್ದರು. ಜನ ಬಿದ್ದ ಬಿದ್ದ ನಕ್ಕರು. ಇದರಿಂದ ಅವಮಾನಿತನಾದ ಬಸವರಾಜ ‘ ಹೌದು ನಾನು ಹಸು, ಹಲ್ಲು ಕೊಡು’ ಎಂದು ಹೇಳುತ್ತಾ ವೇದಿಕೆಯ ತುಂಬಾ ಓಡಾಡಲು ಆರಂಭಿಸಿದ. ಜನ ಇನ್ನಷ್ಟು ಕೇಕೆ ಹಾಕಲು ಆರಂಭಿಸಿದಾಗ ಅಪಮಾನಗೊಂಡ ಬಸವರಾಜ್ ನಾಟಕವನ್ನು ಅಲ್ಲಿಗೇ ನಿಲ್ಲಿಸಿದ. ಪರದೆ ಬಿದ್ದ ನಂತರ ನೇರವಾಗಿ ಕಲ್ಪನಾರ ಕಡೆ ಧಾವಿಸಿ ಕೆನ್ನೆಗೆ ಹೊಡೆದ. ಇದರಿಂದ ವಿಚಲಿತರಾದ ಅವರು ವೇಷ ಕೂಡ ಬದಲಾಯಿಸದೆ ನೇರವಾಗಿ ಗೋಟೂರು ಪ್ರವಾಸಿ ಧಾಮಕ್ಕೆ ಬಂದು ಆತ್ಮ ಹತ್ಯೆ ಮಾಡಿಕೊಂಡರು ಎಂದು ಒಂದೆಡೆ ಬರೆಯುತ್ತಾರೆ ಸಿನಿಮಾ ಕುರಿತ ಸಂವೇದನಾಶೀಲ ಬರಹಗಾರ ಎನ್.ಎಸ್. ಶ್ರೀಧರಮೂರ್ತಿಯವರು..ಪೋಸ್ಟ್ ಮಾರ್ಟಂ ವರದಿ ಪ್ರಕಾರ ಕಲ್ಪನಾ ೫೬ ನಿದ್ದೆ ಮಾತ್ರೆಗಳನ್ನು ನುಂಗಿದ್ದರು. ಮಾನಸಿಕವಾಗಿ ವಿಚಲಿತರಾದಾಗಲೆಲ್ಲ ನಿದ್ದೆ ಮಾತ್ರೆ ನುಂಗುವ ಹವ್ಯಾಸ ಅವರಿಗಿತ್ತು. ಹಿಂದೆ ಎರಡು ಮೂರು ಬಾರಿ ಹೀಗೆ ಸಾವಿನ ಅಂಚನ್ನು ಮುಟ್ಟಿ ಬಂದಿದ್ದರು ಈ ಸಲ ನಿದ್ರಾ ಮಾತ್ರೆಗಳ ಪ್ರಮಾಣ ಅವರನ್ನು ಸೀದಾ ಯುಮಪುರಿಗೇ ಕರೆದುಕೊಂಡು ಹೋಗಿತ್ತು.
 
"ಕಲ್ಪನಾ ವಿಲಾಸ" ಎಂಬ ಹೆಸರಿನ ನಟಿ ಕಲ್ಪನಾರ ಜೀವನ ಚರಿತ್ರೆಯ ಪುಸ್ತಕವೊಂದಿದೆ."ನಮನ"
 
"https://kn.wikipedia.org/wiki/ಕಲ್ಪನಾ" ಇಂದ ಪಡೆಯಲ್ಪಟ್ಟಿದೆ