ಶ್ರೀ ಸಿದ್ಧಿ ವಿನಾಯಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸದಾಗಿ ತುಂಬಲಾಗುತ್ತಿದೆ
 
೯ ನೇ ಸಾಲು:
=== ಗಣಪತಿಯ ಕಥೆ ===
---------------
* ಗಣೇಶನ ಕಥೆಗಳು ಅನೇಕವಿದ್ದರೂ ಮತ್ಸ್ಯ ಪುರಾಣದ ಕಥೆ ಜನಪ್ರಿಯವಾಗಿದೆ. ಪಾರ್ವತಿ ತನ್ನ ಮೈ ಕೊಳೆಯಿಂದ ಒಂದು ಮಗುವನ್ನು ಸೃಷ್ಟಿಸಿ, ತಾನು ಸ್ನಾನ ಮಾಡುವಾಗ ಯಾರನ್ನೂ ಒಳ ಬಿಡದಂತೆ ಅವನನ್ನು ಕಾವಲಿಟ್ಟಳು. ಅವನು ಶಿವನನ್ನು ತಡೆದಾಗ ಶಿವನು ಅವನ ತಲೆಯನ್ನು ತರಿದನು. ನಂತರ ಪಾರ್ವತಿಯನ್ನು ಸಮಾಧಾನ ಪಡಿಸಲು ಆನೆಯ ತಲೆಯನ್ನು ಸೇರಿಸಿ ಜೀವ ಕೊಟ್ಟು ಗಜಾನನನ್ನಾಗಿ ಮಾಡಿದನು. ಅವನನ್ನು ತನ್ನ ಗಣಗಳ ಅಧಿಪತಿಯಾಗಿ ಮಾಡಿದ್ದರಿಂದ ಅವನು ಗಣಪತಿಯಾದನು.
* ಈ ಕಥೆಯನ್ನು ಕೇಳಿದ ಕೆಲವರು, ಪಾರ್ವತಿ ಸ್ನಾನ ಮಾಢದೆ ಎಷ್ಟು ದಿನ ಗಳಾಗಿದ್ದವು ? ಅಷ್ಟೊಂದು ಕೊಳೆ ಅವಳ ದೇಹದಲ್ಲಿ ಹೇಗೆ ಬಂದಿತು ? ಎಂದು ಕೇಳುವುದಿದೆ.
* ಪುರಾಣದ ಕಥೆಗಳಲ್ಲಿ ಬಹಳಷ್ಟು ಕಥೆಗಳು ಸೃಷ್ಟಿ ರಹಸ್ಯ ಮತ್ತು ಅದರ ಸಂಕೀರ್ಣ ತತ್ವಗಳನ್ನು ವಿವರಿಸಲು ಹೆಣೆದ ಕಥೆಗಳು. ತತ್ವಗಳಿಗೆ ವ್ಯಕ್ತಿಯ ರೂಪ ಕೊಟ್ಟು ಘಟನೆಗಳನ್ನು ಕಥೆಗಳಾಗಿ ವಿವರಿಸುವುದೇ - ಪ್ರತಿಮೆ ಅಥವಾ ರೂಪಕ ಪದ್ಧತಿ ಎನ್ನಬಹುದು.
 
=== ಪ್ರಕೃತಿ ಮತ್ತು ಪುರುಷ ತತ್ವ ===
---------------
ವಿಶ್ವ ರಹಸ್ಯವನ್ನು ಪ್ರಕೃತಿ ಮತ್ತು ಪುರುಷ ಎಂಬ ಎರಡು ತತ್ವಗಳಲ್ಲಿ ಹೇಳಲಾಗುತ್ತದೆ.