ಉಪೇಂದ್ರ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಉಪೇಂದ್ರ ಕುಮಾರ್ ಕನ್ನಡದ ಖ್ಯಾತ ಸಂಗೀತ ನಿರ್ದೇಶಕರು. ವರನಟ ಡಾ.ರಾಜಕುಮಾರ್ ...
 
No edit summary
೩ ನೇ ಸಾಲು:
ಕನ್ನಡದ ಖ್ಯಾತ ಸಂಗೀತ ನಿರ್ದೇಶಕರು.
 
ವರನಟ ಡಾ.ರಾಜಕುಮಾರ್ ಹಾಗೂ ಅವರ ಇಡೀ ಕುಟುಂಬಕ್ಕೆ ಸಂಗೀತ ಹೇಳಿಕೊಟ್ಟ ಮೇಷ್ಟ್ರು ಉಪೇಂದ್ರ ಕುಮಾರ್.ಸಾವಿರಾರು ಮಧುರ ಕನ್ನಡ ಗೀತೆಗಳನ್ನು ರೂಪಿಸಿದ ಉಪೇಂದ್ರ ಕುಮಾರ್ ಮೂಲತಹ ಕನ್ನಡದವರಲ್ಲ,ಅವರು ಹುಟ್ಟಿದ್ದು ಒರಿಸ್ಸಾದ ಅನಂಗ್ ಪುರದಲ್ಲಿ,(೧೯೪೧)ಇವರ ಮನೆ ಮಾತು ತೆಲುಗು.ತಂದೆ ಲಕ್ಷ್ಮಣ್ ಸ್ವಾಮಿ,ತಾಯಿ ನಾನ್ ಚಾರಿಯಮ್ಮ.ಇವರದ್ದು ಪುರೋಹಿತರಾಗಿ ಮತ್ತು ಜ್ಯೋತಿಷಿ ಗಳಾಗಿ ಹೆಸರು ಮಾಡಿದ್ದ ಮನೆತನ.ಯೀಳನೀ ತರಗತಿವರೆಗೆ ಮಾತ್ರ ಸಾಂಪ್ರದಾಯಿಕವಾದ ಶಿಕ್ಷಣ ಪಡೆದ ಅವರು ಸೋಅದರ ಮಾವ ಅಪ್ಪಾರಾವ್ ರವರ ಪ್ರೋತ್ಸಾಹದಿಂದ ಸಂಗೀತ ಕಲಿತರು.ಭುವನೀಶ್ವರ್ ಮಿಶ್ರ ಅವರ ಬಳಿ ಪಿಟೀಲು,ಬಾಲಕೃಷ್ಣ ದಾಸ್ ಬಳಿ ಹಿಂದೂಸ್ತಾನಿ,ದಿನ್ ಭಜನ್ ಸಿಂಗ್ ಬಳಿ ಪಾಶ್ಚಾತ್ಯ ಸಂಗೀತ ಕಲಿತರು.ಸಂಗೀತದ ಹಾದಿಯಲ್ಲಿಯೀ ಸಾಗಿದ ಉಪೇಂದ್ರ ಕುಮಾರ್"ಉತ್ಕಲ್ ಕಾಲೇಜ್ ಆಫ್ ಮ್ಯೂಸಿಕ್"ನಿಂದ ಪ್ರಥಮ ರೇಂಕ್ ನೊಂದಿಗೆ ಬಿ,ಎ,ಪದವಿ ಪಡೆದರು.೧೯೬೬ರಲ್ಲಿ ಅವಕಾಶ ಅರಸಿ ಮದ್ರಾಸಿಗೆ ಬಂದ ಅವರಿಗೆ ಆರಂಭದಲ್ಲಿ ವಾದ್ಯ ಗೋಷ್ಠಿಯಲ್ಲಿ ಅವಕಾಶ ಸಿಕ್ಕಿತು.ಸಂಗೀತ ಪಾಠ ಹೇಳಿ ಹೊಟ್ಟೆ ಪಾಡು ನೋಡಿಕೊಳ್ಳುತಿದ್ದರು.ಹೀಗೆ ಅವರ ಶಿಷ್ಯೇಯಾಗಿ ಬಂದ "ಗೀತಾ "ಮುಂದೆ ಮದದಿಯಾದರು.ಉಪೇಂದ್ರ ಕುಮಾರ್ ರವರ ಜೀವನ ರೂಪಿಸುವಲ್ಲಿ ಮುಖ್ಯ ಪಾತ್ರ ವಹಿಸಿದರು."ನಮನ"
 
ಉಪೇಂದ್ರ ಕುಮಾರ್ ಅವರಿಗೆ "ಕಟಾರಿ ವೀರ "ಚಿತ್ರದ ಮೂಲಕ ಸ್ವತಂತ್ರ್ಯ ಸಂಗಾತ ನಿರ್ದೇಶಕನಾಗುವ ಅವಕಾಶ ಸಿಕ್ಕಿತು.ಚಿತ್ರದ ಗೀತೆಗಳು ಜನಪ್ರೀಯವಾಗುವುದರೊಂದಿಗೆ ಅವರ ಸ್ಥಾನವೂ ಗಟ್ಟಿಯಾಯಿತು.ರಾಜ್ಕುಮಾರ್ ಅವರ ಜೊತೆಗಿನ ಬಾಂದವ್ಯವೂ ನಿಕತವಾಯಿತು."ಹಸಿರು ತೋರಣ"ದ "ಒಂದು ದಿನ ಎಲ್ಲಿಂದಲೋ "ಹಾಡಿನಲ್ಲಿ ಇವರು ಗಮಕ ಬಳಸಿದ ಕ್ರಮವು ವಿಶಿಷ್ಟವಾಗಿತ್ತು."ಪರೋಪಕಾರಿ" ಚಿತ್ರದ "ಗುಟ್ಟೊಂದು ಹೇಳುವೆ","ಕಣ್ಣರೆಪ್ಪೆ ಒಂದನೊಂದು" , "ಜೋಕೆ ನಾನು ಬಳ್ಳಿಯ ಮಿಂಚು"ಉಪೇಂದ್ರ ಕುಮಾರರ ವ್ಯಾಪ್ತಿಗೆ ನಿದರ್ಶನವಾದವು."ಸಿಪಾಯಿ ರಾಮು" ಚಿತ್ರದಲ್ಲಿ ಅವರು ಇನ್ನಷ್ಟು ವಿಶಿಷ್ಟ ಗೀತಗಳನ್ನು ಸಂಯೋಜಿಸಿದರು."ವಹರೇ ಮೇರೆ ಮುರುಗ"ದಲ್ಲಿ ಅವರು ಹೊಸತನದ ಅಲೆಯನ್ನೇ ಎಬ್ಬಿಸಿದ್ದರು.ಹಾಗೇ "ತ್ರಿವೇಣಿ "ಚಿತ್ರದ "ನೀನಾ ಭಗವಂತ "ಮತ್ತು "ಕವಿಯ ಮಧುರ ಕಲ್ಪನಾ" ಕಡಿಮೆ ವಾದ್ಯಗಳಲ್ಲಿ ಸಂಗೀತ ಶ್ರೀಮಂತಿಕೆ ತುಂಬಿಕೊಂಡ ಗೀತೆಗಳು.
"https://kn.wikipedia.org/wiki/ಉಪೇಂದ್ರ_ಕುಮಾರ್" ಇಂದ ಪಡೆಯಲ್ಪಟ್ಟಿದೆ